Agnipath scheme ಹಳೆಯ ನೇಮಕಾತಿ ನೀತಿ ರದ್ದು; ಅಗ್ನಿಪಥ್ ಯೋಜನೆ ಮೂಲಕ ಮಾತ್ರ ಸೇನೆ, ನೌಕಾಪಡೆ, ವಾಯಪಡೆಗೆ ನೇಮಕಾತಿ

ಆಯ್ಕೆ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಸಿಲುಕಿರುವ ಸಾವಿರಾರು ಅರ್ಜಿದಾರರ ಭವಿಷ್ಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಝಾ, ಸಾಂಕ್ರಾಮಿಕ ಸಮಯದಲ್ಲಿ ಕಳೆದ ಎರಡು ವರ್ಷಗಳ ನೇಮಕಾತಿಯನ್ನು ಸರಿದೂಗಿಸಲು ಸರ್ಕಾರವು ಈಗಾಗಲೇ ವಯೋಮಿತಿಯಲ್ಲಿ ಸಡಿಲಿಕೆಯನ್ನು ಘೋಷಿಸಿದೆ.

Agnipath scheme ಹಳೆಯ ನೇಮಕಾತಿ ನೀತಿ ರದ್ದು; ಅಗ್ನಿಪಥ್ ಯೋಜನೆ ಮೂಲಕ ಮಾತ್ರ ಸೇನೆ, ನೌಕಾಪಡೆ, ವಾಯಪಡೆಗೆ ನೇಮಕಾತಿ
ಅಗ್ನಿಪಥ ಯೋಜನೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 19, 2022 | 5:46 PM

ದೆಹಲಿ: ಹೊಸ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ್’ (Agnipath scheme)ವಿರೋಧಿಸಿ ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ನೇಮಕಾತಿ ಅಗ್ನಿಪಥ್ ಯೋಜನೆಯ ಮೂಲಕ ಮಾತ್ರ ನಡೆಯಲಿದೆ ಎಂದು ಈ ಮೂರುಸೇವೆಗಳ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಉನ್ನತ ಅಧಿಕಾರಿಗಳ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಏರ್ ಮಾರ್ಷಲ್ ಸೂರ್ಯ ಕುಮಾರ್ ಝಾ (Air Marshal Surya Kumar Jha) ಎಲ್ಲಾ ನೇಮಕಾತಿಗಳು ಈಗ ಅಗ್ನಿವೀರ್ (Agniveer) ಮೂಲಕ ಮಾತ್ರ ಆಗಬೇಕು, ಅರ್ಹರು ಮತ್ತೆ ಅರ್ಜಿ ಸಲ್ಲಿಸಬೇಕು ಎಂದಿದ್ದಾರೆ. ಆಯ್ಕೆ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಸಿಲುಕಿರುವ ಸಾವಿರಾರು ಅರ್ಜಿದಾರರ ಭವಿಷ್ಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಝಾ, ಸಾಂಕ್ರಾಮಿಕ ಸಮಯದಲ್ಲಿ ಕಳೆದ ಎರಡು ವರ್ಷಗಳ ನೇಮಕಾತಿಯನ್ನು ಸರಿದೂಗಿಸಲು ಸರ್ಕಾರವು ಈಗಾಗಲೇ ವಯೋಮಿತಿಯಲ್ಲಿ ಸಡಿಲಿಕೆಯನ್ನು ಘೋಷಿಸಿದೆ. ಆದರೆ ಬೇರೆ ಯಾವುದೇ ಸಡಿಲಿಕೆಯನ್ನು ನಿರೀಕ್ಷಿಸಿರಲಿಲ್ಲ. ಅರ್ಹ ಅಭ್ಯರ್ಥಿಗಳು ಅಗ್ನಿವೀರ್ ಚಾನೆಲ್ ಮೂಲಕ ಉದ್ಯೋಗಗಳಿಗೆ ಮರು ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅರುಣ್ ಪುರಿ ಅವರು ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮೂರು ಸೇವೆಗಳ ವಯಸ್ಸಿನ ವಿವರವನ್ನು ಕಡಿಮೆ ಮಾಡುವ ಬಗ್ಗೆ ಸಾಕಷ್ಟು ಸಮಯದಿಂದ ಚರ್ಚೆಯಲ್ಲಿದೆ. ಕಾರ್ಗಿಲ್ ಪರಿಶೀಲನಾ ಸಮಿತಿಯು ಸಹ ಅದರ ಬಗ್ಗೆ ಅವಲೋಕನಗಳನ್ನು ಮಾಡಿದೆ ಎಂದು ಹೇಳಿದ್ದಾರೆ.

ಅಗ್ನಿಪಥ ಯೋಜನೆ ಜಾರಿಗೊಳಿಸಲು ಸರ್ಕಾರ ಮುಂದಾಗಿದ್ದು, ಯುವಕರು ಪ್ರತಿಭಟನೆ ಕೈಬಿಡುವಂತೆ ಪುರಿ ಮನವಿ ಮಾಡಿದ್ದಾರೆ. ಯೋಜನೆಯಡಿ ಅಗ್ನಿವೀರ್‌ಗಳನ್ನು ಸೇರ್ಪಡೆಗೊಳಿಸುವ ನೌಕಾಪಡೆಯ ಯೋಜನೆಯ ವಿವರಗಳನ್ನು ನೀಡಿದ ವೈಸ್ ಅಡ್ಮಿರಲ್ ದಿನೇಶ್ ತ್ರಿಪಾಠಿ, ಜೂನ್ 25 ರೊಳಗೆ ನೇಮಕಾತಿಗಾಗಿ ನೌಕಾ ಪ್ರಧಾನ ಕಚೇರಿ ವಿಶಾಲವಾದ ಮಾರ್ಗಸೂಚಿಯನ್ನು ಹೊರತರಲಿದೆ ಎಂದು ಹೇಳಿದರು. ಮೊದಲ ಬ್ಯಾಚ್ ನೇಮಕಗೊಂಡವರು ನವೆಂಬರ್ 21 ರೊಳಗೆ ತರಬೇತಿ ಕಾರ್ಯಕ್ರಮಕ್ಕೆ ಸೇರಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ನೌಕಾಪಡೆಯು ಈ ಯೋಜನೆಯಡಿಯಲ್ಲಿ ಅಗ್ನಿವೀರ್‌ಗಳಾಗಿ ಪುರುಷರು ಮತ್ತು ಮಹಿಳೆಯರನ್ನು ನೇಮಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಅಗ್ನಿಪಥ್ ಯೋಜನೆಯಡಿ ನೇಮಕಾತಿಗಾಗಿ ಭಾರತೀಯ ವಾಯುಪಡೆಯ ಯೋಜನೆಯ ಬಗ್ಗೆ ಏರ್ ಮಾರ್ಷಲ್ ಎಸ್ ಕೆ ಝಾ ಅವರು ಜೂನ್ 24 ರಂದು ನೋಂದಣಿ ಪ್ರಕ್ರಿಯೆಯು ಪ್ರಾರಂಭವಾಗಲಿದೆ. ನೇಮಕಾತಿಯ ಮೊದಲ ಹಂತದ ಆನ್‌ಲೈನ್ ಪರೀಕ್ಷೆಯ ಪ್ರಕ್ರಿಯೆಯು ಜುಲೈ 24 ರಂದು ಪ್ರಾರಂಭವಾಗುತ್ತದೆ ಎಂದು ಹೇಳಿದರು. ಡಿಸೆಂಬರ್ 30 ರೊಳಗೆ ಮೊದಲ ಬ್ಯಾಚ್ ನೇಮಕಾತಿಗಾಗಿ ತರಬೇತಿಯನ್ನು ಪ್ರಾರಂಭಿಸಲು ನಾವು ಯೋಜಿಸುತ್ತಿದ್ದೇವೆ ಎಂದು ಏರ್ ಮಾರ್ಷಲ್ ಝಾ ಹೇಳಿದರು.

ಸೇನೆಯ ನೇಮಕಾತಿ ಯೋಜನೆ ಕುರಿತು ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನಪ್ಪ ಮಾತನಾಡಿ, ಸೇನೆಯು ಸೋಮವಾರ ಕರಡು ಅಧಿಸೂಚನೆಯನ್ನು ಹೊರಡಿಸಲಿದೆ. ನಂತರದ ಅಧಿಸೂಚನೆಗಳನ್ನು ಜುಲೈ 1 ರಿಂದ ಪಡೆಯ ವಿವಿಧ ನೇಮಕಾತಿ ಘಟಕಗಳು ಹೊರಡಿಸಲಿವೆ ಎಂದಿದ್ದಾರೆ.

ಅಗ್ನಿಪಥ್ ಯೋಜನೆಯಡಿ ನೇಮಕಾತಿ ರ್ಯಾಲಿಗಳು ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಭಾರತದಾದ್ಯಂತ ನಡೆಯಲಿದೆ. 25,000 ಸಿಬ್ಬಂದಿಯನ್ನು ಒಳಗೊಂಡ ಮೊದಲ ಬ್ಯಾಚ್ ಡಿಸೆಂಬರ್ ಮೊದಲ ಮತ್ತು ಎರಡನೇ ವಾರದಲ್ಲಿ ತರಬೇತಿ ಕಾರ್ಯಕ್ರಮಕ್ಕೆ ಸೇರಿಕೊಳ್ಳಲಿದೆ ಎಂದು ಲೆಫ್ಟಿನೆಂಟ್ ಜನರಲ್ ಪೊನಪ್ಪ ಹೇಳಿದರು. ಬಹಳಷ್ಟು ನೇಮಕಾತಿದಾರರು ಫೆಬ್ರವರಿ 23 ರ ಸುಮಾರಿಗೆ ತಮ್ಮ ತರಬೇತಿಗೆ ಸೇರುತ್ತಾರೆ. ಸುಮಾರು 40,000 ಸಿಬ್ಬಂದಿಯನ್ನು ಆಯ್ಕೆ ಮಾಡಲು ದೇಶಾದ್ಯಂತ ಒಟ್ಟು 83 ನೇಮಕಾತಿ ರ್ಯಾಲಿಗಳನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ