Fact Check ನೂಪುರ್ ಶರ್ಮಾಗೆ 34 ದೇಶಗಳು ಬೆಂಬಲ ನೀಡಿವೆ ಎಂಬ ವೈರಲ್ ಟ್ವೀಟ್ ಸುಳ್ಳು
ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ಸದಸ್ಯರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಮಾಡಿದ ಹೇಳಿಕೆಗಳ ವಿರುದ್ಧ ಕುವೈತ್, ಕತಾರ್, ಸೌದಿ ಅರೇಬಿಯಾ ಸೇರಿದಂತೆ ಹಲವಾರು ಅರಬ್ ರಾಷ್ಟ್ರಗಳು ಪ್ರತಿಭಟನೆ ನಡೆಸಿದ್ದವು.
ರಷ್ಯಾ, ಇಸ್ರೇಲ್, ನೆದರ್ಲ್ಯಾಂಡ್ಸ್ ಮತ್ತು ಫ್ರಾನ್ಸ್ ಸೇರಿದಂತೆ 34 ದೇಶಗಳು ಭಾರತ ಮತ್ತು ಬಿಜೆಪಿಯ (BJP) ಮಾಜಿ ವಕ್ತಾರ ನೂಪುರ್ ಶರ್ಮಾ (Nupur Sharma) ಅವರು ಟಿವಿ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ (Prophet muhammad) ಕುರಿತು ಮಾಡಿದ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂಬ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಸುಳ್ಳು. ಪ್ರವಾದಿ ಮೊಹಮ್ಮದ್ ವಿರುದ್ಧ ಬಿಜೆಪಿ ಸದಸ್ಯರಾದ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಮಾಡಿದ ಹೇಳಿಕೆಗಳ ವಿರುದ್ಧ ಕುವೈತ್, ಕತಾರ್, ಸೌದಿ ಅರೇಬಿಯಾ ಸೇರಿದಂತೆ ಹಲವಾರು ಅರಬ್ ರಾಷ್ಟ್ರಗಳು ಪ್ರತಿಭಟನೆ ನಡೆಸಿದ್ದವು. ಈ ಬಗ್ಗೆ ಅಂತರ ಕಾಯ್ದುಕೊಂಡಿದ್ದ ಬಿಜೆಪಿ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಟೈಮ್ಸ್ ನೌ ಮತ್ತು ಇತರ ಸುದ್ದಿ ವಾಹಿನಿಗಳಲ್ಲಿ ರಕ್ಷಣಾ ತಜ್ಞರಾಗಿ ಪ್ಯಾನೆಲಿಸ್ಟ್ ಆಗಿ ಕಾಣಿಸಿಕೊಂಡಿರುವ ನಿವೃತ್ತ ಮೇಜರ್ ಜನರಲ್ ಜಿಡಿ ಬಕ್ಷಿ ಅವರ ಹೆಸರಿನಲ್ಲಿರುವ ನಕಲಿ ಟ್ವಿಟರ್ ಖಾತೆಯ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಸ್ಕ್ರೀನ್ ಶಾಟ್ ನಲ್ಲಿ 34 ದೇಶಗಳು ನೂಪುರ್ ಶರ್ಮಾ ಮತ್ತು ಭಾರತವನ್ನು ಅವರನ್ನು ಅಧಿಕೃತವಾಗಿ ಬೆಂಬಲಿಸಿವೆ ಎಂದು ಹೇಳಿಕೊಳ್ಳುತ್ತಿದೆ. ರಷ್ಯಾ ನೆದರ್ಲ್ಯಾಂಡ್ಸ್ ಫ್ರಾನ್ಸ್ ಇಸ್ರೇಲ್ ಸೇರಿದಂತೆ ಒಟ್ಟು 34 ದೇಶಗಳು ನೂಪುರ್ ಶರ್ಮಾ ಮತ್ತು ಭಾರತವನ್ನು ಬೆಂಬಲಿಸಿದವು. ಜೈ ಶ್ರೀ ರಾಮ್ ಎಂದು ಟ್ವೀಟ್ನಲ್ಲಿ ಹೇಳಿದೆ. ಫ್ಯಾಕ್ಟ್ ಚೆಕ್ ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿರುವ ಬೂಮ್ ಲೈವ್, ಯಾವುದೇ ದೇಶಗಳು ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅಥವಾ ಭಾರತವನ್ನು ಬೆಂಬಲಿಸುವ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಗೂಗಲ್ ನಲ್ಲಿ ಸಂಬಂಧಿತ ಕೀವರ್ಡ್ ಹುಡುಕಾಟ ನಡೆಸಿದ್ದು 34 ದೇಶಗಳು ಶರ್ಮಾ ಅವರ ಟೀಕೆಗಳನ್ನು ಬೆಂಬಲಿಸಿವೆ ಎಂದು ಯಾವುದೇ ಪತ್ರಿಕೆ ವರದಿ ಮಾಡಲಿಲ್ಲ. ಪ್ರವಾದಿ ವಿರೋಧಿ ಹೇಳಿಕೆಗಳ ಕುರಿತು ಡಚ್ ಬಲಪಂಥೀಯ ರಾಜಕಾರಣಿ ಗೀರ್ಟ್ ವೈಲ್ಡರ್ಸ್ ಶರ್ಮಾ ಅವರನ್ನು ಬೆಂಬಲಿಸುವ ಟ್ವೀಟ್ ಹೊರತುಪಡಿಸಿ, ಈ ವಿಷಯದ ಬಗ್ಗೆ ನೆದರ್ಲೆಂಡ್ಸ್‌ನಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವೈಲ್ಡರ್ಸ್ ಡಚ್ ಸಂಸತ್ತಿನಲ್ಲಿ ವಿರೋಧ ಪಕ್ಷದ ಸದಸ್ಯರಾಗಿದ್ದಾರೆ ಮತ್ತು ಬಲಪಂಥೀಯ ನಿಲುವುಳ್ಳವರಾಗಿದ್ದಾರೆ.
It is ridiculous that Arab and Islamic countries are angered by Indian politician #NupurSharma @NupurSharmaBJP for speaking the truth about #ProphetMuhammad who indeed married Aisha when she was six years old and consumed the marriage when she was nine. Why does India apologize?
ಇದನ್ನೂ ಓದಿ— Geert Wilders (@geertwilderspvv) June 6, 2022
ರಷ್ಯಾ, ಇಸ್ರೇಲ್ ಮತ್ತು ಫ್ರಾನ್ಸ್‌ನ ವಿದೇಶಾಂಗ ಸಚಿವಾಲಯದ ಹ್ಯಾಂಡಲ್‌ಗಳನ್ನೂ ಪರಿಶೀಲಿಸಿದ್ದು ಅಲ್ಲಿ ಯಾವುದೇ ಟ್ವೀಟ್ ಕಂಡುಬಂದಿಲ್ಲ ಎಂದು ಬೂಮ್ ಲೈವ್ ವರದಿ ಮಾಡಿದೆ.
ಇತರ ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 9:05 pm, Tue, 14 June 22