ರಾಹುಲ್ ಗಾಂಧಿ ಇ.ಡಿ ವಿಚಾರಣೆ ಮೊದಲ ದಿನದ ಫಲಶೃತಿ ಏನು? ಏನೂ ಇಲ್ಲಾ ಅಂತಿದ್ದಾರೆ ತನಿಖಾಧಿಕಾರಿಗಳು! ಏನಿದರ ಒಳಸುಳಿ?
Enforcement Directorate: ಮೂಲಗಳ ಪ್ರಕಾರ ಇ.ಡಿ ತನಿಖಾಧಿಕಾರಿಗಳು ಹೇಳುವಂತೆ ಮೊದಲ ದಿನ ರಾಹುಲ್ ಗಾಂಧಿ ಪ್ರತಿ ಪ್ರಶ್ನೆಗೂ ಉತ್ತರಿಸುವಾಗ ಬಹಳ ಜಾಗರೂಕರಾಗಿದ್ದರು. ರಾಹುಲ್‌ಗೆ ತಮ್ಮ ವಕೀಲರು ಕೆಲವು ಅಂಶಗಳನ್ನು ಹೇಗೆ ಉತ್ತರಿಸಬೇಕು ಮತ್ತು ಹೇಗೆ ತಪ್ಪಿಸಬೇಕು ಎಂಬುದರ ಕುರಿತು ಬೋಧನೆ ಮಾಡಿರುವಂತೆ ಕಂಡುಬಂದಿತಂತೆ.
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತನಿಖೆ ನಡೆಸುತ್ತಿರುವ ಬಗ್ಗೆ ನಮಗೆ ತೃಪ್ತಿ ಇಲ್ಲ ಎಂದು ಜಾರಿ ನಿರ್ದೇಶನಾಲಯದ ಕಚೇರಿಯ ತನಿಖಾಧಿಕಾರಿಗಳು ಹೇಳಿದ್ದಾರೆ. ನ್ಯಾಷನಲ್ ಹೆರಾಲ್ಡ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ (National Herald case) ಜಾರಿ ನಿರ್ದೇಶನಾಲಯವು (ಇ.ಡಿ Enforcement Directorate) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಪ್ರಶ್ನಿಸುವುದರ ಕುರಿತು ಹೈವೋಲ್ಟೇಜ್ ನಾಟಕ ಮುಂದುವರೆದಿದೆ. ಇ.ಡಿ ತನಿಖಾಧಿಕಾರಿಗಳು ರಾಹುಲ್ ಗಾಂಧಿಯವರ (Rahul Gandhi) ಹೆಚ್ಚಿನ ಉತ್ತರಗಳಿಂದ ತೃಪ್ತರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅವರು ಮೊದಲೇ ಪಾಠ ಮಾಡಿಸಿಕೊಂಡು ಬಂದವರಂತೆ, ಗಿಳಿಯಂತೆ, ಅಷ್ಟಕ್ಕೆ ಇಷ್ಟೇ ಎಂದು ಕ್ಲುಪ್ತವಾಗಿ ಉತ್ತರಿಸುತ್ತಿದ್ದಾರಂತೆ.
ಮೂಲಗಳ ಪ್ರಕಾರ ಇ.ಡಿ ತನಿಖಾಧಿಕಾರಿಗಳು ಹೇಳುವಂತೆ ಮೊದಲ ದಿನ ರಾಹುಲ್ ಗಾಂಧಿ ಪ್ರತಿ ಪ್ರಶ್ನೆಗೂ ಉತ್ತರಿಸುವಾಗ ಬಹಳ ಜಾಗರೂಕರಾಗಿದ್ದರು. ರಾಹುಲ್‌ಗೆ ತಮ್ಮ ವಕೀಲರು ಕೆಲವು ಅಂಶಗಳನ್ನು ಹೇಗೆ ಉತ್ತರಿಸಬೇಕು ಮತ್ತು ಹೇಗೆ ತಪ್ಪಿಸಬೇಕು ಎಂಬುದರ ಕುರಿತು ಬೋಧನೆ ಮಾಡಿರುವಂತೆ ಕಂಡುಬಂದಿತಂತೆ.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಹುಲ್ ಗಾಂಧಿಯವರ ಹೆಚ್ಚಿನ ವಿವರಣೆಗಳು ಮತ್ತು ಉತ್ತರಗಳಿಂದ ತನಿಖಾಧಿಕಾರಿಗಳು ತೃಪ್ತರಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಮೊದಲನೇ ದಿನದ ವಿಚಾರಣೆಯ ಮೊದಲಾರ್ಧದಲ್ಲಿ ರಾಹುಲ್ ಗಾಂಧಿ ಅವರಿಗೆ ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿನ ಷೇರುಗಳು ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಮತ್ತು ಯಂಗ್ ಇಂಡಿಯಾ ಒಳಗೊಂಡ ಕೆಲವು ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲಾಯಿತು. ಆ ಪತ್ರಿಕೆಗಳನ್ನು ಪರಿಶೀಲಿಸುವಂತೆ ರಾಹುಲ್ ಗಾಂಧಿಗೆ ಕೇಳಲಾಯಿತು.
ನಂತರ, ಈ ಕಂಪನಿಗಳ ಕಾರ್ಯಾಚರಣೆಯಲ್ಲಿ ಅವರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಯಿತಂತೆ. ತಡವಾಗಿ, ರಾತ್ರಿ 9.30ರ ವೇಳೆಗೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕಾರಣ ರಾಹುಲ್ ಅವರೇ ಎಂದು ತಿಳಿದುಬಂದಿದೆ. ಏಕೆಂದರೆ ಅವರು ತಾವು ನೀಡಿರುವ ಕೆಲವು ಉತ್ತರಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರಂತೆ. ಅದರಿಂದ ತಮ್ಮ ಕಡೆಯಿಂದಲೇ ವಿಳಂಬವಾಗಿದೆ ಎಂದು ಅಧಿಕಾರಿಗಳಿಗೆ ರಾಹುಲ್ ಗಾಂಧಿ ತಿಳಿಸಿದರಂತೆ. ಅದಕ್ಕೆ ರಾಹುಲ್ ಕ್ಷಮೆಯಾಚಿಸಿದರಂತೆ. ನಿನ್ನೆಯ ವಿಚಾರಣೆ ವೇಳೆ ಸಮಯದ ಅಭಾವದಿಂದ ಕೆಲವು ಪ್ರಶ್ನೆಗಳು ಹಾಗೆಯೇ ಉಳಿದಿದ್ದರಿಂದ ಮಂಗಳವಾರ ಹಾಜರಾಗುವಂತೆ ರಾಹುಲ್ ಗಾಂಧಿಗೆ ಸೂಚಿಸಲಾಗಿತ್ತು.
ಇದನ್ನೂ ಓದಿ: Sonia Gandhi: ಕೋವಿಡ್ ಇರುವ ಸೋನಿಯಾ ಗಾಂಧಿ ಇ.ಡಿ ವಿಚಾರಣೆಗೆ ಆಸ್ಪತ್ರೆಯಿಂದ ಎದ್ದು ಬರುತ್ತಾರಾ?
ಇದನ್ನೂ ಓದಿ: ಕರ್ನಾಟಕ ನೂತನ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇಮಕ
Published On - 8:02 pm, Tue, 14 June 22