ಪುರಿಯಲ್ಲಿ ರಥಯಾತ್ರೆ ಬಳಿಕ ದೇವರ ವಿಗ್ರಹ ಉರುಳಿ 7 ಮಂದಿಗೆ ಗಾಯ; ವಿಡಿಯೋ ವೈರಲ್

|

Updated on: Jul 09, 2024 | 10:41 PM

ಇಂದು (ಮಂಗಳವಾರ) ಸಂಜೆ ಪುರಿಯಲ್ಲಿ ಮೂರು ದೇವರ ಮೂರ್ತಿಗಳನ್ನು ರಥದಿಂದ ಗುಂಡಿಚಾ ದೇವಸ್ಥಾನದ ಅಡಪ ಮಂಟಪಕ್ಕೆ ಕೊಂಡೊಯ್ಯುತ್ತಿದ್ದಾಗ ಬಾಲಭದ್ರ ವಿಗ್ರಹ ಮಗುಚಿದ ಪರಿಣಾಮ ಈ ಘಟನೆ ನಡೆದಿದೆ.

ಪುರಿಯಲ್ಲಿ ರಥಯಾತ್ರೆ ಬಳಿಕ ದೇವರ ವಿಗ್ರಹ ಉರುಳಿ 7 ಮಂದಿಗೆ ಗಾಯ; ವಿಡಿಯೋ ವೈರಲ್
ಪುರಿಯಲ್ಲಿ ರಥಯಾತ್ರೆ ವೇಳೆ ಬಾಲಭದ್ರ ದೇವರ ವಿಗ್ರಹ ಉರುಳಿ 7 ಮಂದಿಗೆ ಗಾಯ
Follow us on

ಪುರಿ: ಒಡಿಶಾದ ಪುರಿಯಲ್ಲಿ ನಡೆದ ರಥಯಾತ್ರೆಯ ನಂತರ ನಡೆದ ಸಮಾರಂಭದಲ್ಲಿ ಭಗವಾನ್ ಬಾಲಭದ್ರ ದೇವರ ವಿಗ್ರಹವು ಉರುಳಿ ಬಿದ್ದು 7 ಭಕ್ತರು ಗಾಯಗೊಂಡಿದ್ದಾರೆ. ಇಂದು ಸಂಜೆ ಮೂರು ಮೂರ್ತಿಗಳನ್ನು ರಥದಿಂದ ಗುಂಡಿಚಾ ದೇವಸ್ಥಾನದ ಅಡಪ ಮಂಟಪಕ್ಕೆ ಕೊಂಡೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ.

ಒಡಹುಟ್ಟಿದ ದೇವತೆಗಳಾದ ಜಗನ್ನಾಥ, ಬಾಲಭದ್ರ ಮತ್ತು ದೇವಿ ಸುಭದ್ರರ ರಥಗಳು ಸೋಮವಾರ ಗುಂಡಿಚಾ ದೇವಸ್ಥಾನವನ್ನು ತಲುಪಿದವು, ಇದರೊಂದಿಗೆ ಒಡಿಶಾದ ಪುರಿಯಲ್ಲಿ ರಥಯಾತ್ರೆಯ ಮೊದಲ ಹಂತದ ಆಚರಣೆಗಳು ಮುಕ್ತಾಯಗೊಂಡವು.

ಇದನ್ನೂ ಓದಿ: Viral Video: ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್

ಇತರ ಧಾರ್ಮಿಕ ವಿಧಿ- ವಿಧಾನಗಳು ಮುಗಿದ ನಂತರ, ಮೂರ್ತಿಗಳ ‘ಪಹಂಡಿ’ ಪ್ರಾರಂಭವಾಯಿತು. ಅಲ್ಲಿ ಮೂರು ವಿಗ್ರಹಗಳನ್ನು ಸೇವಕರು ಮೂರ್ತಿಗಳನ್ನು ನಿಧಾನವಾಗಿ ರಥದ ಮೂಲಕ ಅಡಪ ಮಂಟಪಕ್ಕೆ ಕೊಂಡೊಯ್ಯುತ್ತಿದ್ದರು. ತಾಳಧ್ವಜ ಎಂಬ ರಥದಿಂದ ಬಾಲಭದ್ರ ದೇವರ ವಿಗ್ರಹವನ್ನು ತೆಗೆದುಕೊಳ್ಳುವಾಗ ರಥದ ಚರಮಲದಲ್ಲಿ ವಿಗ್ರಹವು ಜಾರಿಬಿದ್ದು, ಸೇವಕರ ಮೇಲೆ ಬಿದ್ದಿತು.

ತಕ್ಷಣ ರಕ್ಷಣಾ ಸಿಬ್ಬಂದಿ ಮತ್ತು ಇತರ ಸೇವಕರು ಸ್ಥಳಕ್ಕೆ ಧಾವಿಸಿ ವಿಗ್ರಹವನ್ನು ಎತ್ತಿದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. 2 ದಿನಗಳ ಕಾಲ ನಡೆದ ಈ ರಥಯಾತ್ರೆಯಲ್ಲಿ ಜನದಟ್ಟಣೆಯಿಂದಾಗಿ ಭಾನುವಾರ ಮತ್ತು ಸೋಮವಾರ ಕ್ರಮವಾಗಿ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದರು.

ಇದನ್ನೂ ಓದಿ: Viral Video: ಹಾಸ್ಟೆಲ್​​ನಲ್ಲಿ ನೀಡಿದ ಚಟ್ನಿಯಲ್ಲಿ ಈಜಾಡಿದ ಇಲಿ; ಶಾಕಿಂಗ್ ವಿಡಿಯೋ ವೈರಲ್

ಸಾವಿರಾರು ಜನರು ರಥಗಳನ್ನು ಎಳೆದರೆ, ಈ ಮೆರವಣಿಗೆಯನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ರಸ್ತೆಬದಿಯಲ್ಲಿ ಜಮಾಯಿಸಿದರು. ಭಾನುವಾರದಿಂದ ರಥಯಾತ್ರೆ ಆರಂಭವಾಗಿತ್ತು. ಮೂರು ಭವ್ಯವಾದ ರಥಗಳು ಗ್ರ್ಯಾಂಡ್ ರಸ್ತೆಯಲ್ಲಿರುವ ಗುಂಡಿಚಾ ದೇವಸ್ಥಾನದ ಹೊರಗೆ ಉಳಿಯುತ್ತವೆ. ಮಂಗಳವಾರ ಶಾಸ್ತ್ರೋಕ್ತವಾಗಿ ದೇಗುಲದೊಳಗೆ ದೇವರನ್ನು ಕೊಂಡೊಯ್ಯಲಾಯಿತು. ಈ ದೇವಾಲಯದಲ್ಲಿ ದೇವತೆಗಳು ಒಂದು ವಾರ ಇರುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:40 pm, Tue, 9 July 24