ರಾಜಸ್ಥಾನ: ಪೋಷಕರ ಜತೆ ದೇವಸ್ಥಾನಕ್ಕೆ ಹೋಗಿದ್ದ ಬಾಲಕನನ್ನು ಎಳೆದೊಯ್ದ ಹುಲಿ
ದೇವಾಲಯಕ್ಕೆ ಭೇಟಿ ನೀಡಲು ಪೋಷಕರೊಂದಿಗೆ ಹೋಗಿದ್ದ 7 ವರ್ಷದ ಬಾಲಕನ್ನು ಹುಲಿ(Tiger) ಕೊಂದಿರುವ ಘಟನೆ ವರದಿಯಾಗಿದೆ. ಏಳು ವರ್ಷದ ಕಾರ್ತಿಕ್ ಸುಮನ್ ಎಂಬ ಬಾಲಕನನ್ನು ಎಳೆದೊಯ್ದಿದೆ. ಆತನ ಅಜ್ಜಿ ಹಾಗೂ ಚಿಕ್ಕಪ್ಪನ ಎದುರೇ ಹುಲಿ ಎಳೆದೊಯ್ದಿತ್ತು. ಆ ಹುಡುಗನ ಅಜ್ಜಿ ತನ್ನ ಮೊಮ್ಮಗನ ಕೈಯನ್ನು ಹಿಡಿದಿದ್ದಾಗ ಹುಲಿ ಪೊದೆಯಿಂದ ಹಾರಿ, ಮಗುವಿನ ಕುತ್ತಿಗೆಯನ್ನು ಕಚ್ಚಿ ಪೊದೆಯೊಳಗೆ ಎಳೆದುಕೊಂಡು ಹೋಯಿತು ಎಂದು ಹೇಳಿದರು.

ರಾಜಸ್ಥಾನ, ಏಪ್ರಿಲ್ 17: ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದೊಳಗಿರುವ ದೇವಾಲಯಕ್ಕೆ ಭೇಟಿ ನೀಡಲು ಪೋಷಕರೊಂದಿಗೆ ಹೋಗಿದ್ದ 7 ವರ್ಷದ ಬಾಲಕನ್ನು ಹುಲಿ(Tiger) ಕೊಂದಿರುವ ಘಟನೆ ವರದಿಯಾಗಿದೆ. ಏಳು ವರ್ಷದ ಕಾರ್ತಿಕ್ ಸುಮನ್ ಎಂಬ ಬಾಲಕನನ್ನು ಎಳೆದೊಯ್ದಿದೆ. ಆತನ ಅಜ್ಜಿ ಹಾಗೂ ಚಿಕ್ಕಪ್ಪನ ಎದುರೇ ಹುಲಿ ಎಳೆದೊಯ್ದಿತ್ತು. ಆ ಹುಡುಗನ ಅಜ್ಜಿ ತನ್ನ ಮೊಮ್ಮಗನ ಕೈಯನ್ನು ಹಿಡಿದಿದ್ದಾಗ ಹುಲಿ ಪೊದೆಯಿಂದ ಹಾರಿ, ಮಗುವಿನ ಕುತ್ತಿಗೆಯನ್ನು ಕಚ್ಚಿ ಪೊದೆಯೊಳಗೆ ಎಳೆದುಕೊಂಡು ಹೋಯಿತು ಎಂದು ಹೇಳಿದರು.
ಸುಮನ್ ಮತ್ತು ಅವರ ಕುಟುಂಬ ಬುಂಡಿ ಜಿಲ್ಲೆಯ ಹಳ್ಳಿಯಿಂದ ಪ್ರಯಾಣ ಬೆಳೆಸಿತ್ತು
ದೇವಾಲಯಕ್ಕೆ ಭೇಟಿ ನೀಡಿದ ನಂತರ ಅವರು ರಸ್ತೆಯ ಪಕ್ಕದಲ್ಲಿ ಫೋಟೊಗೆ ಪೋಸ್ ಕೊಟ್ಟಿದ್ದರು. ದುರಂತ ಸಾವಿಗೆ ಸ್ವಲ್ಪ ಮೊದಲು ತೆಗೆದ ಫೋಟೋಗಳಲ್ಲಿ, ಜೀನ್ಸ್ ಮತ್ತು ನೀಲಿ ಟಿ-ಶರ್ಟ್ ಧರಿಸಿದ ಸುಮನ್ ನಾಚಿಕೆಯಿಂದ ನಗುತ್ತಾ ಪೋಸ್ ನೀಡುತ್ತಿರುವುದು ಕಂಡುಬರುತ್ತದೆ. ಒಂದು ಫೋಟೋದಲ್ಲಿ ನಗುತ್ತಿರುವ ಹುಡುಗ ಕೋತಿಯ ಪಕ್ಕದಲ್ಲಿ ಕುಳಿತಿದ್ದಾನೆ.
ಅರಣ್ಯ ಇಲಾಖೆಯ ತಂಡ ಶವವನ್ನು ಹೊರತೆಗೆದಿದೆ
ಮರಣೋತ್ತರ ಪರೀಕ್ಷೆಯ ನಂತರ, ಶವವನ್ನು ಸುಮನ್ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪ್ರಾರ್ಥನೆ ಮುಗಿಸಿ ಹಿಂತಿರುಗುತ್ತಿದ್ದಾಗ ಹುಲಿ ದಾಳಿ ಮಾಡಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಮಗು ತನ್ನ ಅಜ್ಜಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹುಲಿಯೊಂದು ಬಾಲಕನ ಕುತ್ತಿಗೆಗೆ ಬಾಯಿ ಹಾಕಿ ಎಳೆದುಕೊಂಡು ಹೋಗಿದೆ. ದಾಳಿ ಮಾಡಿದ ಹುಲಿಯನ್ನು ಇನ್ನೂ ಗುರುತಿಸಲಾಗಿಲ್ಲ, ಇತ್ತೀಚಿನ ವಾರಗಳಲ್ಲಿ ಈ ಪ್ರದೇಶದಲ್ಲಿ ಕನಿಷ್ಠ ಮೂರು ಹೆಣ್ಣು ಹುಲಿಗಳು ಕಾಣಿಸಿಕೊಂಡಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಮೈಸೂರಲ್ಲಿ ಹುಲಿ ದಾಳಿ: ಮೇಕೆ ಮೇಯಿಸುತ್ತಿದ್ದ ಮಹಿಳೆಯನ್ನು ತಿಂದು ತೇಗಿದ ವ್ಯಾಘ್ರ
ಈ ಘಟನೆಯಿಂದಾಗಿ ಕೃಷಿ ಸಚಿವ ಕಿರೋಡಿ ಲಾಲ್ ಮೀನಾ ಅವರು ತ್ರಿನೇತ್ರ ಗಣೇಶ ದೇವಸ್ಥಾನಕ್ಕೆ ಹೋಗುವ ರಸ್ತೆಯ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ, ಏಕೆಂದರೆ ಈ ರಸ್ತೆಯು ಭಾರೀ ಸಂಚಾರ ದಟ್ಟಣೆಯಿಂದ ಕೂಡಿದೆ. ಸಚಿವರು ಕಾರ್ತಿಕ್ ಸುಮನ್ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಈ ಪ್ರದೇಶದಲ್ಲಿ ಹುಲಿಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ರಣಥಂಬೋರ್ ಅಂದಾಜು 70 ಹೆಚ್ಚು ಹುಲಿಗಳಿವೆ. ಹೆಣ್ಣು ಹುಲಿ 15 ರಿಂದ 20 ಚದರ ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರೆ, ಗಂಡು ಹುಲಿ ಹತ್ತು ಪಟ್ಟು ದೊಡ್ಡ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಬಹುದು. ಉದ್ಯಾನವನದ ಮಧ್ಯಭಾಗವು 300 ಚದರ ಕಿ.ಮೀ ಗಿಂತ ಕಡಿಮೆಯಿದ್ದು, ಪ್ರತ್ಯೇಕ ಹುಲಿಗಳು ತಾನು ವಾಸಿಸಲು ಮತ್ತು ಬೇಟೆಯಾಡಲು ಪ್ರದೇಶಗಳನ್ನು ಹುಡುಕುವುದರಿಂದ ಅವು ಪರಸ್ಪರ ಮತ್ತು ಮನುಷ್ಯರೊಂದಿಗೆ ಸಂಘರ್ಷಕ್ಕೆ ಒಳಗಾಗುತ್ತಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:30 am, Thu, 17 April 25