10 ಬಾರಿ ಕಚ್ಚಿ ವ್ಯಕ್ತಿಯ ಕೊಂದು ಶವದ ಪಕ್ಕದಲ್ಲಿಯೇ ಬೆಳಗ್ಗೆವರೆಗೂ ಮಲಗಿತ್ತು ಹಾವು
ಯುವಕನಿಗೆ ಹಾವೊಂದು ಹತ್ತು ಬಾರಿ ಕಡಿದು ಅವನನ್ನು ಸಾಯಿಸಿ ಶವದ ಜತೆ ಬೆಳಗ್ಗೆವರೆಗೂ ಕಳೆದಿರುವ ಘಟನೆ ಮೀರತ್ನಲ್ಲಿ ನಡೆದಿದೆ. ಬೆಳಗ್ಗೆ ಮನೆಯವರಿಗೆ ಈ ವಿಷಯ ತಿಳಿದಾಗ ಬೆಚ್ಚಿಬಿದ್ದಿದ್ದಾರೆ. ಹಾವಾಡಿಗನನ್ನು ಕರೆಸಿ ಹಾವನ್ನು ಹಿಡಿಸಲಾಗಿದೆ. ಕೂಡಲೇ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಅಷ್ಟರೊಳಗೆ ಆತ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಈ ಘಟನೆಯ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಮೀರತ್, ಏಪ್ರಿಲ್ 17: ಹಾವೊಂದು ವ್ಯಕ್ತಿಗೆ 10 ಬಾರಿ ಕಚ್ಚಿ ಸಾಯಿಸಿ, ಬೆಳಗ್ಗೆಯವರೆಗೂ ಶವದ ಪಕ್ಕದಲ್ಲೇ ಹಾವು(Snake) ಮಲಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ. ಸಾಮಾನ್ಯವಾಗಿ ಹಾವುಗಳು ಒಮ್ಮೆ ಕಡಿದು ಅಲ್ಲಿಂದ ಓಡಿ ಹೋಗುತ್ತವೆ. ಆದರೆ ಈ ಹಾವು 10 ಬಾರಿ ಕಡಿದಿದ್ದು, ಆತ ಸತ್ತ ಬಳಿಕವೂ ಅವನ ಪಕ್ಕದಲ್ಲೆ ಮಲಗಿರುವುದು ಸಹಜ ಎಂದೆನಿಸಿಲ್ಲ.
ಬೆಳಗ್ಗೆ ಮನೆಯವರಿಗೆ ಈ ವಿಷಯ ತಿಳಿದಾಗ ಬೆಚ್ಚಿಬಿದ್ದಿದ್ದಾರೆ. ಹಾವಾಡಿಗನನ್ನು ಕರೆಸಿ ಹಾವನ್ನು ಹಿಡಿಸಲಾಗಿದೆ. ಕೂಡಲೇ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಅಷ್ಟರೊಳಗೆ ಆತ ಮೃತಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಈ ಘಟನೆಯ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಈ ಘಟನೆ ಮೀರತ್‌ನ ಬಹಸುಮಾ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಬರ್‌ಪುರ್ ಸಾದತ್ ಗ್ರಾಮದ್ದಾಗಿದೆ. ಮಾಹಿತಿಯ ಪ್ರಕಾರ, ಈ ಗ್ರಾಮದಲ್ಲಿ ವಾಸಿಸುತ್ತಿದ್ದ 25 ವರ್ಷದ ಅಮಿತ್ ಅಲಿಯಾಸ್ ಮಿಕ್ಕಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಮರಳಿದ ಅವರು ಊಟದ ನಂತರ ಮಲಗಿದ್ದ.
ಮತ್ತಷ್ಟು ಓದಿ: ಹಾವು ಕಡಿತ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿಲ್ಲ ಸಾಕಾಗುವಷ್ಟು ಔಷಧಿ: ಸಾವನ್ನಪ್ಪುವವರ ಸಂಖ್ಯೆ ಏರಿಕೆ
ಬೆಳಗ್ಗೆ, ಕುಟುಂಬ ಸದಸ್ಯರು ಅವನನ್ನು ಎಬ್ಬಿಸಲು ಪ್ರಯತ್ನಿಸಿದಾಗ, ಅವನ ದೇಹದಲ್ಲಿ ಯಾವುದೇ ಚಲನೆ ಇಲ್ಲದಿರುವುದು ಮತ್ತು ಅವನ ಇಡೀ ದೇಹವು ನೀಲಿ ಬಣ್ಣಕ್ಕೆ ತಿರುಗಿರುವುದನ್ನು ಅವರು ನೋಡಿದ್ದರು. ಜತೆಗೆ ವಿಷಪೂರಿತ ಹಾವು ಕೂಡ ಅಲ್ಲೇ ಇತ್ತು. ದೇಹದ ಹತ್ತು ಕಡೆ ಹಾವು ಕಚ್ಚಿದೆ ಎಂದು ವೈದ್ಯರು ಹೇಳಿದ್ದಾರೆ.
ಸಾಮಾನ್ಯವಾಗಿ ಹಾವುಗಳು ಕಚ್ಚಿದ ನಂತರ ಸ್ಥಳದಿಂದ ಹೊರಟು ಹೋಗುತ್ತವೆ, ಆದರೆ ಈ ಸಂದರ್ಭದಲ್ಲಿ, ಆಶ್ಚರ್ಯಕರವಾಗಿ, ಕಚ್ಚಿದ ನಂತರವೂ, ಹಾವು ಬೆಳಿಗ್ಗೆ ತನಕ ಅದೇ ಸ್ಥಳದಲ್ಲಿ ಇತ್ತು.
ಅಷ್ಟೊಂದು ಗದ್ದಲದ ನಂತರವೂ ಹಾವು ಅಲ್ಲಿಂದ ಕದಲಲಿಲ್ಲ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅಮಿತ್ ಅವರ ನಾಲ್ವರು ಒಡಹುಟ್ಟಿದವರಲ್ಲಿ ಎರಡನೆಯವರಾಗಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆಸ್ಪತ್ರೆಯಿಂದ ಮೆಮೊ ಬಂದ ನಂತರ ಮೃತ ದೇಹಕ್ಕೆ ಪಂಚನಾಮ ಮಾಡಲಾಗಿದೆ ಎಂದು ಹೇಳಿದರು. ಕುಟುಂಬದವರು ಯಾವುದೇ ದೂರು ಬಂದಿಲ್ಲ. ಮತ್ತೊಂದೆಡೆ, ಗ್ರಾಮಸ್ಥರು ಈ ಘಟನೆಯನ್ನು ಬಹಳ ನಿಗೂಢ ಎಂದು ಹೇಳುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ