ಸಿಬ್ಬಂದಿ ನಿರ್ಲಕ್ಷ್ಯದಿಂದ 7 ವರ್ಷದ ಬಾಲಕಿ 18 ಗಂಟೆಗಳ ಕಾಲ ತರಗತಿಯಲ್ಲಿ ಲಾಕ್

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 22, 2022 | 5:13 PM

ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಶಾಲೆಯೊಂದರಲ್ಲಿ 7 ವರ್ಷದ ಬಾಲಕಿಯೊಬ್ಬಳು ಸಿಬ್ಬಂದಿ ನಿರ್ಲಕ್ಷ್ಯದಿಂದ  18 ಗಂಟೆಗಳ ಕಾಲ ಶಾಲಾ ಕೊಠಡಿಯಲ್ಲಿ ಕಳೆದಿರುವ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳನೇ ಬೀಗ ಹಾಕಿ ಹೋಗಿದ್ದಾರೆ.

ಸಿಬ್ಬಂದಿ ನಿರ್ಲಕ್ಷ್ಯದಿಂದ 7 ವರ್ಷದ ಬಾಲಕಿ 18 ಗಂಟೆಗಳ ಕಾಲ ತರಗತಿಯಲ್ಲಿ ಲಾಕ್
Follow us on

ಉತ್ತರಪ್ರದೇಶ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಶಾಲೆಯೊಂದರಲ್ಲಿ 7 ವರ್ಷದ ಬಾಲಕಿಯೊಬ್ಬಳು ಸಿಬ್ಬಂದಿ ನಿರ್ಲಕ್ಷ್ಯದಿಂದ  18 ಗಂಟೆಗಳ ಕಾಲ ಶಾಲಾ ಕೊಠಡಿಯಲ್ಲಿ ಕಳೆದಿರುವ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳನೇ ಬೀಗ ಹಾಕಿ ಹೋಗಿದ್ದಾರೆ. ಶಾಲೆಯಲ್ಲಿ ಯಾರು ಇದ್ದಾರೆ, ಇಲ್ಲ ಎಂದು ನೋಡದೇ ಸಿಬ್ಬಂದಿಗಳು ಬಾಲಕಿಯನ್ನು ಬಿಟ್ಟು ಹೋಗಿದ್ದಾರೆ ತರಗತಿಯಲ್ಲಿ ಮಕ್ಕಳು ಎಲ್ಲರೂ ಹೋಗಿದರ ಎಂದು ಪರಿಶೀಲಸದೆ ಇರುವುದು ಶಾಲಾ ಸಿಬ್ಬಂದಿಗಳ ವೈಪಲ್ಯ ಎಂದು ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ಬೆಳಗ್ಗೆ ಶಾಲೆ ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆ.

ಗುನ್ನೌರ್ ತಾಹಸಿಲ್‌ನ ಧನರಿ ಪಟ್ಟಿಯಲ್ಲಿರುವ ಪ್ರಾಥಮಿಕ ಶಾಲೆಯ 1ನೇ ತರಗತಿ ವಿದ್ಯಾರ್ಥಿ ಮಂಗಳವಾರ ಶಾಲಾ ಅವಧಿಯ ನಂತರ ಶಾಲೆಯಲ್ಲಿಯೇ ಹಿಂದುಳಿದಿದ್ದಾನೆ ಎಂದು ಬ್ಲಾಕ್ ಶಿಕ್ಷಣಾಧಿಕಾರಿ ಪೋಪ್ ಸಿಂಗ್ ತಿಳಿಸಿದ್ದಾರೆ. ಇಂದು ಬೆಳಗ್ಗೆ ಶಾಲೆ ತೆರೆದಾಗ ಈ ಬಾಲಕಿ ಶಾಲೆ ಒಳಗೆ ಇರುವುದು ಪತ್ತೆಯಾಗಿದೆ, ಬಾಲಕಿ ಆರೋಗ್ಯವಾಗಿದ್ದಾಳೆ ಎಂದು ಬಿಇಒ ತಿಳಿಸಿದರು.

ಮಂಗಳವಾರ ಶಾಲೆ ಮುಗಿಸಿ ಮನೆಗೆ ಬಾರದೆ ಇದ್ದಾಗ ಬಾಲಕಿಯ ಅಜ್ಜಿ ಶಾಲೆಗೆ ಬಂದಿದ್ದು, ಅಲ್ಲಿ ಮಕ್ಕಳಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾಗ ಆಕೆಯ ಚಿಕ್ಕಪ್ಪ ತಿಳಿಸಿದ್ದಾರೆ. ಮನೆಯವರು ಅರಣ್ಯ ಪ್ರದೇಶದಲ್ಲಿ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಬುಧವಾರ ಬೆಳಗ್ಗೆ 8 ಗಂಟೆಗೆ ಶಾಲೆ ತೆರೆದಾಗ ಬಾಲಕಿ ರಾತ್ರಿಯಿಡೀ ಶಾಲಾ ಕೊಠಡಿಯಲ್ಲಿ ಇರುವುದು ಬೆಳಕಿಗೆ ಬಂದಿದೆ.

ಶಾಲಾ ಅವಧಿ ಮುಗಿದರೂ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಕೊಠಡಿಗಳನ್ನು ಪರಿಶೀಲಿಸಿಲ್ಲ ಎಂದು ಬ್ಲಾಕ್ ಶಿಕ್ಷಣಾಧಿಕಾರಿ ಸಿಂಗ್ ತಿಳಿಸಿದ್ದಾರೆ. ಇದು ನಿರ್ಲಕ್ಷ್ಯದ ಪ್ರಕರಣವಾಗಿದ್ದು, ಎಲ್ಲ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.