ದೆಹಲಿ: ಜೂನ್ 10ರಂದು ಲೂಧಿಯಾನದಲ್ಲಿ ನಡೆದ 8 ಕೋಟಿ 49 ಲಕ್ಷ ರೂಪಾಯಿ ದರೋಡೆಗೆ ಸಂಬಂಧಿಸಿದಂತೆ ‘ಡಾಕು ಹಸೀನಾ’ ಎಂದು ಕರೆಯಲ್ಪಡುವ ಮಂದೀಪ್ ಕೌರ್ ದಂಪತಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಇವರನ್ನು ಪತ್ತೆ ಮಾಡಲು ಸಹಾಯವಾಗಿದ್ದು 10 ರೂ, ಜ್ಯೂಸ್. ಮಂದೀಪ್ ಕೌರ್ ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್ ಅವರನ್ನು ಉತ್ತರಾಖಂಡದ ಚಮೋಲಿಯ ಹೇಮಕುಂಡ್ ಸಾಹಿಬ್‌ನಲ್ಲಿ ಬಂಧಿಸಲಾಗಿದೆ. ಈ ಪ್ರಕರಣವನ್ನು ಭೇದಿಸಲು ಪ್ರಮುಖವಾಗಿ ಸಹಾಯವಾಗಿದ್ದು ಅವರು ಸಿಖ್ ದೇಗುಲಕ್ಕೆ ಭೇಟಿ ನೀಡುತ್ತಿದ್ದು. ದಂಪತಿಯ ಹೊರತಾಗಿ, ಪಂಜಾಬ್‌ನ ಗಿಡ್ಡರ್‌ಬಾಹಾದಿಂದ ಮತ್ತೊಬ್ಬ ಆರೋಪಿ ಗೌರವ್ ಎಂಬಾತನನ್ನೂ ಪೊಲೀಸರು ಹಿಡಿದಿದ್ದಾರೆ. ಇದುವರೆಗೆ ಪ್ರಕರಣದ ಆರೋಪಿಗಳಾಗಿರುವ 12 ಜನರ ಪೈಕಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹಾಕಿದ 10 ರೂ. ಜ್ಯೂಸ್ ಆಮಿಷಕ್ಕೆ ಬಿದ್ದ ದಂಪತಿಯಿಂದ 21 ಲಕ್ಷ ರೂ. ವಶವಡಿಸಿಕೊಳ್ಳಲಾಗಿದೆ.
ಮಂದೀಪ್ ಕೌರ್ ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್ ನೇಪಾಳಕ್ಕೆ ಪಲಾಯನ ಮಾಡಲು ಯೋಜನೆ ಹಾಕಿದ್ದರು ಎಂದು ಪಂಜಾಬ್ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಆದರೆ ಅದಕ್ಕೂ ಮೊದಲು ಅವರು ಹರಿದ್ವಾರ, ಕೇದಾರನಾಥ ಮತ್ತು ಹೇಮಕುಂಟ್ ಸಾಹಿಬ್ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಯೋಜನೆಯನ್ನು ಹಾಕಿದ್ದರು.
ಉತ್ತರಾಖಂಡದ ಸಿಖ್ ದೇಗುಲಕ್ಕೆ ಭೇಟಿ ನೀಡುತ್ತಿದ್ದ ಅಪಾರ ಸಂಖ್ಯೆಯ ಭಕ್ತರು ನಡುವೆ ಅವರಿಬ್ಬರನ್ನು ಗುರುತಿಸುವುದು ಕಷ್ಟವಾಗಿತ್ತು. ಹಾಗಾಗಿ ಯಾತ್ರಾರ್ಥಿಗಳಿಗೆ ಉಚಿತ ಪಾನೀಯ ಸೇವೆಯನ್ನು ಹಮ್ಮಿಕೊಳ್ಳಲು ಪೊಲೀಸರು ಮುಂದಾಗಿದ್ದರು.
ಈ ವೇಳೆ ಆರೋಪಿ ದಂಪತಿ ಡ್ರಿಂಕ್ ಸ್ಟಾಲ್ ಬಳಿ ಬಂದಿದ್ದಾರೆ. ಈ ಸಮಯದಲ್ಲಿ ಯಾರು ನಮ್ಮನ್ನು ಗುರುತಿಸಬಾರದು ಎಂದು ಮುಖಗಳನ್ನು ಮುಚ್ಚಿಕೊಂಡಿದ್ದರು, ಆದರೆ ಜ್ಯೂಸ್ ಕುಡಿಯಲು ತಮ್ಮ ಬಟ್ಟೆಯನ್ನು ಸರಿಸಲೇಬೇಕಿತ್ತು. ಈ ವೇಳೆ ಪೊಲೀಸರು ಅವರನ್ನು ಗುರುತಿಸಿದ್ದಾರೆ.
ಮಂದೀಪ್ ಕೌರ್ ಮತ್ತು ಜಸ್ವಿಂದರ್ ಸಿಂಗ್ ಅವರ ಗುರುತಿನ ಹೊರತಾಗಿಯೂ ಅವರನ್ನು ತಕ್ಷಣವೇ ಬಂಧಿಸಲಾಗಿಲ್ಲ. ಪೊಲೀಸರು ಅವರಿಗೆ ಹೇಮಕುಂಡ್ ಸಾಹಿಬ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಟ್ಟರು. ಆ ನಂತರವೇ ದಂಪತಿಯನ್ನು ಪೊಲೀಸರು ಸ್ವಲ್ಪ ದೂರದವರೆಗೆ ಬೆನ್ನಟ್ಟಿದ್ದಾರೆ.
ಅರನ್ನು ಹಿಡಿಯಲು ಒಂದು ಕಾರ್ಯಚರಣೆ ಹೆಸರು ಇಟ್ಟಿದ್ದರು. ‘ರಾಣಿ ಜೇನುನೊಣ ಹಿಡಿಯೋಣ’ ಎಂದು. ಲುಧಿಯಾನ ಪೊಲೀಸ್ ಕಮಿಷನರ್ ಮನ್ದೀಪ್ ಸಿಂಗ್ ಸಿಧು ಅವರ ಪ್ರಕಾರ, ಮನ್ದೀಪ್ ಕೌರ್ ಅವರ ದ್ವಿಚಕ್ರ ವಾಹನದಿಂದ 12 ಲಕ್ಷ ರೂ. ಮತ್ತು ಆಕೆಯ ಪತಿ ಜಸ್ವಿಂದರ್ ಸಿಂಗ್ ಅವರ ಬರ್ನಾಲಾ ಮನೆಯಿಂದ 9 ಲಕ್ಷ ರೂ. ದರೋಡೆ ಮಾಡಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: Bengaluru News: ದರೋಡೆಗೆ ಸಂಚು ರೂಪಿಸಿದ್ದ ರೌಡಿಶೀಟರ್ನ ಐವರು ಸಹಚರರ ಸೆರೆ
8.49 ಕೋಟಿ ಲೂಧಿಯಾನ ದರೋಡೆಯ ಹಿಂದಿನ ಆರೋಪಿ ಡಾಕು ಹಸೀನಾ ಎಂದು ಕರೆಯಲ್ಪಡುವ ಮಂದೀಪ್ ಕೌರ್. ಅವರು ಜೂನ್ 10ರಂದು ನ್ಯೂ ರಾಜಗುರು ನಗರ ಪ್ರದೇಶದ ಕಚೇರಿಯಲ್ಲಿ ಸಿಎಂಎಸ್ ಸೆಕ್ಯುರಿಟೀಸ್ ಕಂಪನಿಯ ಐವರು ಉದ್ಯೋಗಿಯಾಗಿದ್ದರು. ತನಿಖೆಯ ಪ್ರಕಾರ ಅವರು ತಕ್ಷಣ ಶ್ರೀಮಂತರಾಗಬೇಕು ಎಂಬ ಕಾರಣಕ್ಕೆ ಈ ಕಾರ್ಯವನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ. ಮೊದಲು ವಿಮಾ ಏಜೆಂಟ್ ಮತ್ತು ವಕೀಲರ ಸಹಾಯಕರಾಗಿ ಕೆಲಸ ಮಾಡಿದರು. ನಂತರ 2023 ಫೆಬ್ರವರಿಯಲ್ಲಿ ಜಸ್ವಿಂದರ್ ಸಿಂಗ್ ಅವರನ್ನು ವಿವಾಹವಾದರು ಎಂದು ಪ್ರಾರ್ಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ