G20: ಇಂದಿನಿಂದ 3 ದಿನಗಳ ಕಾಲ ತಮಿಳುನಾಡಿನಲ್ಲಿ ಮಹಾಬಲಿಪುರಂನಲ್ಲಿ 3ನೇ ಎಸ್​ಎಫ್​ಡಬ್ಲ್ಯುಜಿ ಸಭೆ

3rd SFWG Meeting at Mahabalipuram: ಗುವಾಹಟಿ ಮತ್ತು ಉದಯಪುರದ ಬಳಿಕ ತಮಿಳುನಾಡಿನ ಮಹಾಬಲಿಪುರಂನಲ್ಲಿ ಎಸ್​ಎಫ್​ಡಬ್ಲ್ಯೂಜಿ ಸಭೆ ನಡೆಯಲಿದೆ. ಜಿ20 ಶೃಂಗಸಭೆಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಭಾಗವಾಗಿ ಈ ಸಭೆ ನಡೆಯುತ್ತಿದೆ.

G20: ಇಂದಿನಿಂದ 3 ದಿನಗಳ ಕಾಲ ತಮಿಳುನಾಡಿನಲ್ಲಿ ಮಹಾಬಲಿಪುರಂನಲ್ಲಿ 3ನೇ ಎಸ್​ಎಫ್​ಡಬ್ಲ್ಯುಜಿ ಸಭೆ
ಜಿ20
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 19, 2023 | 10:47 AM

ಚೆನ್ನೈ: ಭಾರತ ಆತಿಥ್ಯ ವಹಿಸಿರುವ ಜಿ20 ಶೃಂಗಸಭೆ ನಿಮಿತ್ತ (G20 Summit) ತಮಿಳುನಾಡಿನ ಮಹಾಬಲಿಪುರಂನಲ್ಲಿ ಇಂದಿನಿಂದ (ಜೂನ್ 19) ಜೂನ್ 21ರವರೆಗೂ ಎಸ್​ಎಫ್​ಡಬ್ಲ್ಯುಜಿ ಸಭೆ ನಡೆಯಲಿದೆ. ಸುಸ್ಥಿರ ಹಣಕಾಸು ಕಾರ್ಯಕಾರಿ ಗುಂಪಿನ (SFWG- Sustainable Finance Working Group) 3ನೇ ಸಭೆ ಇದಾಗಿದೆ. ಜಿ20ಸುಸ್ಥಿರ ಹಣಕಾಸು ದಿಗ್ದರ್ಶನದಲ್ಲಿ ಮೂರು ಆದ್ಯತಾ ವಲಯಗಳಿಗೆ (Priorities Sectors) ಏನೇನು ಆಗಬೇಕೆಂದು ಮಾಡಲಾದ ಶಿಫಾರಸುಗಳನ್ನು ಯಾವ್ಯಾವುದನ್ನು ಅಂತಿಮಗೊಳಿಸಬೇಕು ಎಂಬುದರತ್ತ ಈ ಸಭೆಯಲ್ಲಿ ಗಮನ ಹರಿಸಲಾಗುತ್ತದೆ. ಕ್ಲೈಮೇಟ್ ಫೈನಾನ್ಸ್​ಗೆ ಸಂಪನ್ಮೂಲಗಳ ಕ್ರೋಢೀಕರಣ; ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಹಣಕಾಸು ಒದಗಿಸುವುದು; ಮತ್ತು ಸುಸ್ಥಿರ ಅಭಿವೃದ್ಧಿಗೆ ಹಣಕಾಸು ವ್ಯವಸ್ಥೆಯನ್ನು ಬಲಪಡಿಸುವುದು, ಇವು ಮೂರು ಆದ್ಯತಾ ವಲಯಗಳಾಗಿವೆ.

ಜಿ20 ಮಹಾಸಭೆಯ ಅಂಗವಾಗಿ ಭಾರತದ ವಿವಿಧೆಡೆ ಹಂತಹಂತವಾಗಿ ವಿವಿಧ ಕಾರ್ಯಕ್ರಮಗಳನ್ನು ಈ ವರ್ಷದ ಆದಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ನಿಟ್ಟಿನಲ್ಲಿ ತಮಿಳುನಾಡಿನಲ್ಲೂ ಕಾರ್ಯಕ್ರಮಗಳು ನಡೆಯುತ್ತಿವೆ. ಮಹಾಬಲಿಪುರಂನಲ್ಲಿ 3 ದಿನಗಳ ಕಾಲ ನಡೆಯುವ ಈ 3ನೇ ಎಸ್​ಎಫ್​ಡಬ್ಲ್ಯೂಜಿ ಸಭೆಯಲ್ಲಿ ಜಿ20 ಸದಸ್ಯ ದೇಶಗಳಿಂದ ಪ್ರತಿನಿಧಿಗಳು ಸೇರಲಿದ್ದಾರೆ. ಜಿ20 ಸದಸ್ಯ ದೇಶಗಳಿಂದ ಮಾತ್ರವಲ್ಲದೇ ಆಹ್ವಾನಿತ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಘಟನೆಗಳ ಸದಸ್ಯರೂ ಸೇರಿ ಸುಮಾರು 100 ಮಂದಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿಜಮ್ಮು ಕಾಶ್ಮೀರದಲ್ಲಿ ನಡೆದ ಜಿ20 ಸಮ್ಮೇಳನಕ್ಕೆ ಮುನ್ನ ಉಗ್ರ ದಾಳಿಗೆ ಸಂಚು ನಡೆಸಿತ್ತು ಪಾಕ್

ಹಸಿರು ತಂತ್ರಜ್ಞಾನ ಮತ್ತು ಕಾರ್ಬನ್ ಕಡಿಮೆ ಬಳಸುವ ತಂತ್ರಜ್ಞಾನಗಳಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜಿಸುವ ನಿಟ್ಟಿನಲ್ಲಿ ಯಾವ್ಯಾವ ನೀತಿ ಅಳವಡಿಸಿಕೊಳ್ಳಬೇಕು ಎಂಬಿತ್ಯಾದಿ ಪರಿವರ್ತನಾ ಕಾರ್ಯಗಳು ಹಾಗೂ ಹವಾಮಾನ ಹೂಡಿಕೆಗಳಿಗೆ ಏನೇನು ಸಾಧ್ಯಾಸಾಧ್ಯತೆ ಇದೆ ಎನ್ನುವುದರ ಪಟ್ಟಿಯನ್ನು ಎಸ್​ಎಫ್​ಡಬ್ಲ್ಯುಜಿ ಸಭೆಯಲ್ಲಿ ತಯಾರಿಸುವ ನಿರೀಕ್ಷೆ ಇದೆ.

ಇವತ್ತಿನಿಂದ ನಡೆಯುತ್ತಿರುವ ಎಸ್​ಎಫ್​ಡಬ್ಲ್ಯೂಜಿ ಸಭೆ 3ನೇಯದ್ದಾಗಿದೆ. ಈ ಹಿಂದೆ ಅಸ್ಸಾಮ್​ನ ಗುವಾಹಟಿಯಲ್ಲಿ ಮೊದಲ ಸಭೆ ನಡೆದಿತ್ತು. ರಾಜಸ್ಥಾನದ ಉದಯಪುರ್​ನಲ್ಲಿ 2ನೇ ಸಭೆ ಆಗಿತ್ತು. ಈಗ ಮಹಾಬಲಿಪುರಂನಲ್ಲಿನಲ್ಲಿ 3ನೇ ಸಭೆ ನಡೆಯುತ್ತಿದೆ. ಈ ಮೂರು ಸಭೆಗಳಲ್ಲಿ ನಡೆದಿರುವ ಮತ್ತು ನಡೆಯುವ ಚರ್ಚೆ ಮತ್ತು ಸಂಧಾನಗಳ ಅಂಶಗಳನ್ನು 3ನೇ ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರುಗಳ (FMCBG- Finance Ministers and Central Bank Governors) ಸಭೆಯಲ್ಲಿ ಪರಿಗಣಿಸಲಾಗುತ್ತದೆ. ಅದು ಮುಂದಿನ ತಿಂಗಳು (ಜುಲೈ) ನಡೆಯುತ್ತದೆ.

ಇದನ್ನೂ ಓದಿInterview: ಜಮ್ಮು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಮೋದಿ ಮಾಸ್ಟರ್​ ಪ್ಲಾನ್ ಜಿ20 ಸಭೆ; ಸಚಿವ ಕಿಶನ್ ರೆಡ್ಡಿ

ಸೆಪ್ಟೆಂಬರ್ ತಿಂಗಳಲ್ಲಿ (ಸೆ. 9-10) ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಜಿ20 ಗುಂಪಿಗೆ ಸೇರಿದ ದೇಶಗಳ ಪೈಕಿ 18 ದೇಶಗಳ ಮುಖ್ಯಸ್ಥರು ಪಾಲ್ಗೊಳ್ಳುತ್ತಿದ್ದಾರೆ. ಈ ಜಿ20 ಗುಂಪಿನಲ್ಲಿ 19 ದೇಶಗಳು ಹಾಗೂ ಯೂರೋಪ್ ಯೂನಿಯನ್ ಇವೆ. ಭಾರತ, ಅಮೆರಿಕ, ರಷ್ಯಾ, ಚೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೊರಿಯಾ, ಬ್ರಿಟನ್, ಟರ್ಕಿ, ಸೌದಿ ಅರೇಬಿಯಾ, ಸೌತ್ ಆಫ್ರಿಕಾ, ಜರ್ಮನಿ, ಫ್ರಾನ್ಸ್, ಇಂಡೋನೇಷ್ಯಾ, ಇಟಲಿ, ಜಪಾನ್, ಕೆನಡಾ, ಅರ್ಜೆಂಟೀನಾ ಇತ್ಯಾದಿ ದೇಶಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:47 am, Mon, 19 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ