Aurangzeb: ಭಾರತದ ಮುಸ್ಲಿಮರು ಔರಂಗಜೇಬ್​ನ ವಂಶಸ್ಥರಲ್ಲ: ದೇವೇಂದ್ರ ಫಡ್ನವಿಸ್

ಮಹಾರಾಷ್ಟ್ರದಲ್ಲಿ ಔರಂಗಬೇಬನ ಚರ್ಚೆ ಆರಂಭವಾಗಿದೆ. ಭಾರತದಲ್ಲಿನ ಯಾವುದೇ ಮುಸಲ್ಮಾನರು ಔರಂಗಜೇಬನ ವಂಶಸ್ಥರಲ್ಲ, ಮೊಘಲ್ ಚಕ್ರವರ್ತಿಯನ್ನು ತಮ್ಮ ನಾಯಕ ಎಂದು ಪರಿಗಣಿಸುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ

Aurangzeb: ಭಾರತದ ಮುಸ್ಲಿಮರು ಔರಂಗಜೇಬ್​ನ ವಂಶಸ್ಥರಲ್ಲ: ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್
Follow us
ನಯನಾ ರಾಜೀವ್
|

Updated on:Jun 19, 2023 | 12:16 PM

ಮಹಾರಾಷ್ಟ್ರದಲ್ಲಿ ಔರಂಗಬೇಬನ ಚರ್ಚೆ ಶುರುವಾಗಿದೆ,  ಭಾರತದಲ್ಲಿನ ಯಾವುದೇ ಮುಸಲ್ಮಾನರು ಔರಂಗಜೇಬ್​ನ ವಂಶಸ್ಥರಲ್ಲ, ಮೊಘಲ್ ಚಕ್ರವರ್ತಿಯನ್ನು ತಮ್ಮ ನಾಯಕ ಎಂದು ಪರಿಗಣಿಸುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(Devendra Fadnavis) ಹೇಳಿದ್ದಾರೆ. ಔರಂಗಜೇಬ್ ನಮ್ಮ ನಾಯಕನಾಗುವುದು ಹೇಗೆ? ನಮ್ಮ ರಾಜ ಒಬ್ಬನೇ ಅದು ಛತ್ರಪತಿ ಶಿವಾಜಿ, ದೇಶದ ರಾಷ್ಟ್ರೀಯ ಚಿಂತನೆ ಇರುವ ಮುಸ್ಲಿಮರು ಔರಂಗಜೇಬ್​ ಅವರನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.

ಮೊಘಲ್ ದೊರೆ ಔರಂಗಜೇಬನನ್ನು ಹೊಗಳುವ ಸಾಮಾಜಿಕ ಮಾಧ್ಯಮ ಸಂದೇಶಗಳು ಹಾಗೂ ವಾಟ್ಸ್​ಆ್ಯಪ್ ಸ್ಟೇಟಸ್​ಗಳು ಹಿಂಸಾಚಾರಕ್ಕೆ ಕಾರಣವಾಗಿದೆ.

ಮತ್ತಷ್ಟು ಓದಿ: ಮಹಾರಾಷ್ಟ್ರದಲ್ಲಿ ಔರಂಗಜೇಬ್ ಫೋಟೊ ಹಿಡಿದು ನೃತ್ಯ ಮಾಡಿದ 8 ಜನರ ವಿರುದ್ಧ ಪ್ರಕರಣ ದಾಖಲು

ಕೊಲ್ಹಾಪುರದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ನಂತರ ಅಸಾದುದ್ದೀನ್ ಓವೈಸಿಗೆ ದೇವೇಂದ್ರ ಫಡ್ನವಿಸ್ ತಿರುಗೇಟು ನೀಡಿದ್ದರು. ಮಹಾರಾಷ್ಟ್ರದ ಒಂದಷ್ಟು ಜಿಲ್ಲೆಗಳಲ್ಲಿ ಔರಂಗಜೇಬನ ಮಕ್ಕಳು ಜನಿಸಿದ್ದಾರೆ , ತಮ್ಮ ಪೋಸ್ಟರ್​ಗಳಲ್ಲಿ ಔರಂಗಜೇಬನ ಫೋಟೊ ಹಾಕಿದ್ದಾರೆ ಇದರಿಂದ ಗಲಾಟೆ ಆರಂಭವಾಗಿದೆ, ಓವೈಸಿ ಕೂಡ ಔರಂಗಜೇಬನ ವಂಶಸ್ಥರು ಎಂದು ಹೇಳಿದ್ದರು.

ಔರಂಗಜೇಬ್​ನ ಪೋಸ್ಟರ್​ ಹಾಕಿದ ಬಳಿಕ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ, ಡಾ. ಬಿಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಅವರು ಔರಂಗಜೇಬ್​ನ ಸಮಾಧಿಗೆ ಭೇಟಿ ನೀಡಿದ್ದಾರೆ ಇದರ ಬೆನ್ನಲ್ಲೇ ದೇವೇಂದ್ರ ಫಡ್ನವಿಸ್ ಈ ಹೇಳಿಕೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:16 pm, Mon, 19 June 23