Chhattisgarh: ಫೋನ್‌ನಲ್ಲಿ ಮಾತನಾಡುತ್ತಾ ಬಸ್ ಚಾಲನೆ, ಸೇತುವೆಗೆ ಡಿಕ್ಕಿ, 26 ಪ್ರಯಾಣಿಕರಿಗೆ ಗಾಯ
ಛತ್ತೀಸ್‌ಗಢದ ಘರ್ಘೋಡಾ ಪ್ರದೇಶದ ಬಳಿ ವೇಗವಾಗಿ ಬಂದ ಬಸ್(Bus) ಸೇತುವೆಗೆ ಡಿಕ್ಕಿ ಹೊಡೆದು 26 ಜನರು ಗಾಯಗೊಂಡಿದ್ದಾರೆ.
ಛತ್ತೀಸ್‌ಗಢದ ಘರ್ಘೋಡಾ ಪ್ರದೇಶದ ಬಳಿ ವೇಗವಾಗಿ ಬಂದ ಬಸ್(Bus) ಸೇತುವೆಗೆ ಡಿಕ್ಕಿ ಹೊಡೆದು 26 ಜನರು ಗಾಯಗೊಂಡಿದ್ದಾರೆ. ರೈಲ್ವೆ ಸೇತುವೆಯ ಮೇಲೆ ಸಂಭವಿಸಿದ ಬಸ್ ಅಪಘಾತದಲ್ಲಿ ಸುಮಾರು 26 ಜನರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಚಾಲಕ ವಾಹನ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡುವುದರಲ್ಲಿ ನಿರತರಾಗಿದ್ದರಿಂದ ಅಪಘಾತ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಏಪ್ರಿಲ್‌ನಲ್ಲಿ ಇದೇ ರೀತಿಯ ಅಪಘಾತದಲ್ಲಿ ಛತ್ತೀಸ್‌ಗಢದಲ್ಲಿ ಬಸ್ ಪಲ್ಟಿಯಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 40 ಜನರು ಗಾಯಗೊಂಡಿದ್ದರು. ಆ ಸಮಯದಲ್ಲಿ, ಗಾಯಾಳುಗಳನ್ನು ತಕ್ಷಣವೇ ಅಂಬಾಗರ್ ಚೌಕಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು. ಬಸ್ ದೊಂಡಿ ಲೋಹರಾ ಪ್ರದೇಶದ ಗ್ರಾಮಕ್ಕೆ ತೆರಳುತ್ತಿತ್ತು.
#WATCH | Chhattisgarh | 26 people injured, including two critically injured, after a speeding bus lost control and rammed into a bridge. The incident occurred at a bridge near Gharghoda in Raigarh district.
SDOP Deepak Mishra says, “A total of 26 people are injured. Two… pic.twitter.com/mezuKaNW0X
— ANI MP/CG/Rajasthan (@ANI_MP_CG_RJ) June 19, 2023
ಮತ್ತೊಂದು ಘಟನೆ ಮಸ್ಸೂರಿ-ಡೆಹ್ರಾಡೂನ್ ರಸ್ತೆಯಲ್ಲಿ ಬಸ್ ಕಂದಕಕ್ಕೆ ಬಿದ್ದ ಪರಿಣಾಮ ಬಸ್ ಚಾಲಕ ಸೇರಿದಂತೆ 22 ಜನರು ಗಾಯಗೊಂಡಿದ್ದರು. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಹಾಯದಿಂದ ಎಲ್ಲಾ ಗಾಯಾಳುಗಳನ್ನು ರಕ್ಷಿಸಲಾಗಿದೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ