Telangana: MP LADS ನಿಧಿಯನ್ನು ಸ್ವಂತ ಕೆಲಸಕ್ಕೆ ಬಳಸಿಕೊಂಡ ತೆಲಂಗಾಣ ಬಿಜೆಪಿ ಸಂಸದ
ತೆಲಂಗಾಣ ಬಿಜೆಪಿ ಸಂಸದ ಸೋಯಮ್ ಬಾಪು ರಾವ್ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (LADS) ಹಣವನ್ನು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬಳಸುವ ಬದಲು ತಮ್ಮದೇ ಸ್ವಂತ ಕಾರಣಗಳಿಗಾಗಿ ಬಳಸಿದ್ದಾರೆಂದು ಒಪ್ಪಿಕೊಂಡಿದ್ದಾರೆ.
ಅದಿಲಾಬಾದ್: ತೆಲಂಗಾಣ (Telangana) ಬಿಜೆಪಿ ಸಂಸದ ಸೋಯಮ್ ಬಾಪು ರಾವ್ (Soyam Bapu Rao) ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (LADS) ಹಣವನ್ನು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬಳಸುವ ಬದಲು ತಮ್ಮದೇ ಸ್ವಂತ ಕಾರಣಗಳಿಗಾಗಿ ಬಳಸಿದ್ದಾರೆಂದು ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಆದಿಲಾಬಾದ್‌ನಲ್ಲಿ ಬಿಜೆಪಿ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಸಭೆಯಲ್ಲಿ ಸಂಸದರು ತಮ್ಮ ಸ್ವಂತ ಉದ್ದೇಶಕ್ಕೆ ಹಣವನ್ನು ಬಳಸಿಕೊಂಡಿರುವುದನ್ನು ಬಹಿರಂಗಪಡಿಸಿದಾಗ ಬಿಜೆಪಿ ನಾಯಕರು ಒಂದು ಬಾರಿ ತಬ್ಬಿಬ್ಬಾಗಿದ್ದಾರೆ.
ಕೇಂದ್ರದಿಂದ ಸಂಸದರ ಎಲ್ಎಡಿಎಸ್ ನಿಧಿಗೆ ಎರಡನೇ ಬಾರಿಗೆ ಬಂದಿರುವ 2.5 ಕೋಟಿ ರೂ.ವನ್ನು ಎಂಪಿಟಿಸಿ ಮತ್ತು ಕೌನ್ಸಿಲರ್‌ಗಳಿಗೆ ಒಂದಿಷ್ಟು ಹಣ ನೀಡಿದ್ದೇವೆ. ಆ ಜಾಗದಲ್ಲಿ ನನಗೆ ಮನೆ ಇಲ್ಲದ ಕಾರಣ ಸ್ವಲ್ಪ ಹಣವನ್ನು ಮನೆ ನಿರ್ಮಾಣಕ್ಕೆ ಮತ್ತು ಸ್ವಲ್ಪ ಹಣವನ್ನು ನನ್ನ ಮಗನ ಮದುವೆಗೆ ಬಳಸಿದ್ದೇನೆ. ಇದು ಸತ್ಯ. ಆದರೆ ನಾನು LADSನ ಒಂದು ಭಾಗವನ್ನು ಮಾತ್ರ ಬಳಸಿದ್ದೇನೆ. ಈ ಹಿಂದೆ ಅನೇಕ ಸಂಸದರು ತಮ್ಮ ಸ್ವಂತ ಕಾರಣಗಳಿಗಾಗಿ ಒಟ್ಟು ಹಣವನ್ನು ಬಳಸಿದ್ದಾರೆ, ಇದನ್ನು ನೀವು ಗಮನಿಸಬೇಕು. ಇಂದು ನಮ್ಮ ಪಕ್ಷದ ಕೆಲವು ನಾಯಕರು ಈ ಬಗ್ಗೆ ಹಲವು ರೀತಿಯಲ್ಲಿ ಟೀಕೆ ಮಾಡುತ್ತಿದ್ದಾರೆ, ಆದರೆ ಈ ಹಿಂದಿನ ಸಂಸದರು ಎಷ್ಟು ಬಳಸಿಕೊಂಡಿದ್ದಾರೆ ಎಂದು ತಿಳಿಸುತ್ತಿಲ್ಲ.
ಇದನ್ನೂ ಓದಿ:Telangana: ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ತೆಲಂಗಾಣ ವಿಶ್ವವಿದ್ಯಾಲಯದ ಉಪಕುಲಪತಿ ರವೀಂದರ್ ಗುಪ್ತಾ
ಇಂದು ಭಾರತದ ಯಾವುದೇ ಸಂಸದರು 5 ಕೋಟಿ ರೂ. ಪಡೆಯಲು ಸಾಧ್ಯವಿಲ್ಲ. ಬಂಡಿ ಸಂಜಯ್ಗೆ ಈ ನಿಧಿ ಸಿಕ್ಕಿಲ್ಲ. ಅರವಿಂದನಿಗೂ ಇಷ್ಟು ನಿಧಿ ಸಿಗುವುದಿಲ್ಲ. ಆದರೆ ನಾನು ನಿಮಗಾಗಿ ಏನು ಮಾಡಿದ್ದೇನೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ನಿನ್ನೆಯಷ್ಟೇ ನನಗೆ ದೆಹಲಿಯಿಂದ ಕರೆ ಬಂದಿತ್ತು. ನನ್ನ ಪಿಎ ಕರೆ ಮಾಡಿ ಸರ್ ನಿಮ್ಮ ಖಾತೆಗೆ ಹಣ ಬರುತ್ತಿದೆ ಎಂದರು. ಎಂಪಿಟಿಸಿ ಮತ್ತು ಕೌನ್ಸಿಲರ್‌ಗಳಿಗೆ 5 ಕೋಟಿ ನೀಡಲು ನಿರ್ಧರಿಸಿದ್ದೇವೆ. ನನ್ನ ವೈಯಕ್ತಿಕ ಕಾರಣಗಳಿಗಾಗಿ ನಾನು ಇನ್ನೂ ಹಣವನ್ನು ಬಳಸಬಹುದು ಆದರೆ ನಾವು ಅದನ್ನೂ ಬಳಸುವುದಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ