Ayodhya: ಅತಿಯಾದ ತಾಪಮಾನದಿಂದಾಗಿ ಕರ್ತವ್ಯನಿರತ ಟ್ರಾಫಿಕ್ ಪೊಲೀಸ್ ಸಾವು
ಉತ್ತರ ಪ್ರದೇಶ(Uttar Pradesh) ದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಹೀಟ್ ಸ್ಟ್ರೋಕ್ನಿಂದಾಗಿ ಅಯೋಧ್ಯೆಯಲ್ಲಿ ಟ್ರಾಫಿಕ್ ಪೊಲೀಸ್ ಒಬ್ಬರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.
ಉತ್ತರ ಪ್ರದೇಶ(Uttar Pradesh) ದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಹೀಟ್ ಸ್ಟ್ರೋಕ್ನಿಂದಾಗಿ ಅಯೋಧ್ಯೆಯಲ್ಲಿ ಟ್ರಾಫಿಕ್ ಪೊಲೀಸ್ ಒಬ್ಬರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ವಿನೋದ್ ಸೋಂಕರ್( 40) ಟ್ರಾಫಿಕ್ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ತೀವ್ರ ಶಾಖದ ಕಾರಣ ತಲೆ ತಿರುಗಿ ಬಿದ್ದಿದ್ದಾರೆ, ಮತ್ತೆ ಮೇಲೇಳಲು ಸಾಧ್ಯವೇ ಆಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿನೋದ್ ಸೋಂಕರ್ ಅವರು ಭಾನುವಾರ ಮಧ್ಯಾಹ್ನ ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನದ ಬಳಿ ಕರ್ತವ್ಯದಲ್ಲಿದ್ದರು ಎಂದು ವೃತ್ತ ಅಧಿಕಾರಿ (ಸಂಚಾರ) ಪ್ರಮೋದ್ ಯಾದವ್ ತಿಳಿಸಿದ್ದಾರೆ.
ತೀವ್ರ ಸೆಕೆಯಿಂದಾಗಿ ಸೋಂಕರ್ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಅಯೋಧ್ಯೆಯ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ ಅಜಯ್ ರಾಜಾ ಹೇಳಿದ್ದಾರೆ. ಸಾವಿಗೆ ಹೀಟ್ ಸ್ಟ್ರೋಕ್ ಕಾರಣವೇ ಎಂಬುದರ ಕುರಿತು ಇನ್ನೂ ಮಾಹಿತಿ ಲಭ್ಯವಾಗಬೇಕಿದೆ.
ಮತ್ತಷ್ಟು ಓದಿ: Uttar Pradesh: ಅತಿಯಾದ ತಾಪಮಾನದಿಂದಾಗಿ 72 ಗಂಟೆಗಳಲ್ಲಿ 54 ಮಂದಿ ಸಾವು, 400 ಮಂದಿ ಅಸ್ವಸ್ಥ
ಉತ್ತರ ಪ್ರದೇಶ(Uttar Pradesh)ದಲ್ಲಿ ಅತಿಯಾದ ಶಾಖದಿಂದಾಗಿ 54 ಮಂದಿ ಸಾವನ್ನಪ್ಪಿದ್ದಾರೆ. 2 ದಿನಗಳ ಹಿಂದೆ 400 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ 54 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 400 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವಿಗೆ ಬೇರೆ ಬೇರೆ ಕಾರಣಗಳಿದ್ದರೂ, ತೀವ್ರ ಶಾಖವೂ ಒಂದು ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
ತೀವ್ರ ಶಾಖದಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು. ತೀವ್ರವಾದ ಶಾಖದ ಅಲೆಯು ಉತ್ತರ ಪ್ರದೇಶದವನ್ನು ಆವರಿಸಿದೆ, ಹೆಚ್ಚಿನ ಸ್ಥಳಗಳು ಗರಿಷ್ಠ ಉಷ್ಣಾಂಶ 40 ಡಿಗ್ರಿಗಳಿಗಿಂತ ಹೆಚ್ಚಿದೆ.
ಹಠಾತ್ ಸಾವುಗಳು ಮತ್ತು ಜ್ವರ, ಉಸಿರಾಟದ ತೊಂದರೆ ಮತ್ತು ಇತರ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಜೂನ್ 15 ರಂದು 23 ಮಂದಿ ಮೃತಪಟ್ಟಿದ್ದಾರೆ, ಮರುದಿನ 20 ಮಂದಿ, 17 ರಂದು 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆ ಬಲ್ಲಿಯಾ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಎಸ್‌ಕೆ ಯಾದವ್ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ