40 ವರ್ಷದ ಕೊವಿಡ್​ ಸೋಂಕಿತನಿಗಾಗಿ ಬೆಡ್​ ಬಿಟ್ಟುಕೊಟ್ಟು ಮನೆಗೆ ಹೋಗಿದ್ದ 85ರ ವೃದ್ಧ ಸಾವು; ಹಿರಿಜೀವದ ತ್ಯಾಗಕ್ಕೆ ಸಲಾಂ ಎನ್ನುತ್ತಿದ್ದಾರೆ ನೆಟ್ಟಿಗರು

|

Updated on: Apr 28, 2021 | 4:58 PM

ನಾರಾಯಣ್​ ದಾಖಲಾಗಿದ್ದ ಆಸ್ಪತ್ರೆಗೆ ಕೊವಿಡ್ 19 ಸೋಂಕಿತ ಪತಿಯನ್ನು ಕರೆದುಕೊಂಡು ಬಂದಿದ್ದ ಮಹಿಳೆ ವೈದ್ಯರ ಬಳಿ ಹೇಗಾದರೂ ಒಂದು ಬೆಡ್​ ವ್ಯವಸ್ಥೆ ಮಾಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದರು.

40 ವರ್ಷದ ಕೊವಿಡ್​ ಸೋಂಕಿತನಿಗಾಗಿ ಬೆಡ್​ ಬಿಟ್ಟುಕೊಟ್ಟು ಮನೆಗೆ ಹೋಗಿದ್ದ 85ರ ವೃದ್ಧ ಸಾವು; ಹಿರಿಜೀವದ ತ್ಯಾಗಕ್ಕೆ ಸಲಾಂ ಎನ್ನುತ್ತಿದ್ದಾರೆ ನೆಟ್ಟಿಗರು
ನಾರಾಯಣ್ ದಬಲ್ಕರ್​
Follow us on

40 ವರ್ಷದ ಕೊರೊನಾ ರೋಗಿಗಾಗಿ ಆಸ್ಪತ್ರೆಯ ಹಾಸಿಗೆ ಬಿಟ್ಟುಕೊಟ್ಟು ಮನೆಗೆ ನಡೆದಿದ್ದ 85ವರ್ಷದ ಕೊರೊನಾ ಸೋಂಕಿತ ವೃದ್ಧ ನಿನ್ನೆ ಮನೆಯಲ್ಲೇ ಮೃತಪಟ್ಟಿದ್ದಾರೆ. ಹೀಗೆ ಮಧ್ಯವಯಸ್ಕನಿಗಾಗಿ ಬೆಡ್​ ಬಿಟ್ಟು ಮನೆ ಸೇರಿದ್ದವರು ಆರ್​ಎಸ್​​ಎಸ್​ನ ಸದಸ್ಯರೂ ಆಗಿದ್ದ ನಾರಾಯಣ್​ ದಬಾಲ್ಕರ್​ ಅವರು. ಕೊರೊನಾ ಸೋಂಕು ತಗುಲಿದ್ದ ಕಾರಣ ಚಿಕಿತ್ಸೆ ಪಡೆಯಲು ನಾಗ್ಪುರದ ಇಂದಿರಾ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಇವರು ದಾಖಲಾಗಿದ್ದ ಆಸ್ಪತ್ರೆಗೆ ಕೊವಿಡ್ 19 ಸೋಂಕಿತ ಪತಿಯನ್ನು ಕರೆದುಕೊಂಡು ಬಂದಿದ್ದ ಮಹಿಳೆ ವೈದ್ಯರ ಬಳಿ ಹೇಗಾದರೂ ಒಂದು ಬೆಡ್​ ವ್ಯವಸ್ಥೆ ಮಾಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದರು. ಆಸ್ಪತ್ರೆಯಲ್ಲಿ ಹಾಸಿಗೆ ಖಾಲಿ ಇಲ್ಲ ಎಂದರೂ ಆಕೆ ಒಂದೇ ಸಮ ಮನವಿ ಮಾಡಿಕೊಳ್ಳುತ್ತಿದ್ದರು. ಅದನ್ನು ನೋಡಿದ ನಾರಾಯಣ್​, ಸ್ವಯಂ ಪ್ರೇರಿತರಾಗಿ ಡಿಸ್​ಚಾರ್ಜ್ ಆಗಲು ನಿರ್ಧರಿಸಿದರು. ಈ ಬಗ್ಗೆ ವೈದ್ಯರಿಗೆ ತಿಳಿಸಿದಾಗ ವೈದ್ಯರೂ ಮೊದಲು ಒಪ್ಪಲಿಲ್ಲ. ನಿಮಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಅವರಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದ್ದಾರೆ. ಆದರೆ ನಾರಾಯಣ್​, ನನಗೆ 85ವರ್ಷ ಆಯಿತು. ನಾನು ಜೀವನ ನೋಡಿದ್ದೇನೆ. ನನಗೆ ಏನಾದರೂ ಆದರೆ ಪರವಾಗಿಲ್ಲ. ಆ ಮಹಿಳೆಯ ಪತಿಯನ್ನು ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಿ. ಅವರ ಮಕ್ಕಳು ಇನ್ನೂ ಚಿಕ್ಕವರು .. ನನ್ನನ್ನು ಹೋಗಲು ಬಿಟ್ಟು, ಆತನಿಗೆ ಹಾಸಿಗೆ ಕೊಡಿ ಎಂದು ಹೇಳಿ ವೈದ್ಯಕೀಯ ಸಿಬ್ಬಂದಿಯನ್ನು ಒಪ್ಪಿಸಿದ್ದಾರೆ. ಇವರ ಉದಾರತೆಗೆ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾಗೇ, ಮಗಳಿಗೂ ತನ್ನ ನಿರ್ಧಾರ ಹೇಳಿದ ವೃದ್ಧ ನಾರಾಯಣ್​ ದಲ್ಕರ್ ಕೊನೆಗೂ ಪಟ್ಟು ಬಿಡದೆ ಮನೆಗೆ ಬಂದಿದ್ದರು. ಹಾಗೆ ಆಸ್ಪತ್ರೆಯಿಂದ ಮನೆಗೆ ಬಂದ ಮೂರೇ ದಿನಕ್ಕೆ ಮೃತರಾಗಿದ್ದಾರೆ.
ಕೊವಿಡ್​ 19 ಸೋಂಕಿತರಾಗಿದ್ದ ನನ್ನ ತಂದೆಗೆ ಏಪ್ರಿಲ್​ 22ರಂದು ಆಮ್ಲಜನಕ ಮಟ್ಟ ಕಡಿಮೆಯಾಗಿತ್ತು. ತುಂಬ ಪ್ರಯತ್ನಪಟ್ಟ ನಂತರ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿತ್ತು. ಆದರೆ ಅವರು ಬೇರೆ ರೋಗಿಗಾಗಿ ಅದನ್ನು ಬಿಟ್ಟು ಮನೆಗೆ ವಾಪಸ್ ಬಂದರು ಎಂದು ನಾರಾಯಣ್​ ಪುತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಸಹ ಈ ಪೋಸ್ಟ್ ಸಿಕ್ಕಾಪಟೆ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ಈ ಹಿರಿ ಜೀವದ ತ್ಯಾಗವನ್ನು ಮನಸಾರೆ ಹೊಗಳಿದ್ದಾರೆ.

ಇದನ್ನೂ ಓದಿ: IPL 2021: ನೀವೇನೂ ದೇಶಕ್ಕಾಗಿ ಆಡಲು ಹೋಗಿಲ್ಲ! ಬೇಕಿದ್ರೆ ಸ್ವಂತ ಖರ್ಚಿನಲ್ಲಿ ತಾಯ್ನಾಡಿಗೆ ವಾಪಸ್ಸಾಗಿ; ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್

ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್​ರನ್ನು ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಗೆ ಶಿಫ್ಟ್ ಮಾಡಿ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ

85 year old man who walked out of a hospital for a young Covid patient is died In Nagpur

Published On - 4:57 pm, Wed, 28 April 21