AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾವನ್ನು ಮಣಿಸಿದ 82ವರ್ಷದ ವೃದ್ಧೆ ಬೋರಲಾಗಿ ಮಲಗಿ ಆಕ್ಸಿಜನ್​ ಮಟ್ಟ ಹೆಚ್ಚಿಸಿಕೊಂಡಿದ್ದು ಹೇಗೆ..? ಇದೊಂದು ಸರಳ ಟ್ರಿಕ್​ !

ಕೊರೊನಾ ಸೋಂಕಿಗೆ ತುತ್ತಾಗಿದ್ದ ವಿದ್ಯಾದೇವಿಯವರಿಗೆ ಒಂದು ದಿನ ಆಮ್ಲಜನಕ ಪ್ರಮಾಣ 79ಕ್ಕೆ ಬಂದಿತ್ತು. ಆಗಂತೂ ಇಡೀ ಮನೆಯವರು ಹೆದರಿದ್ದೆವು. ಆದರೆ ಅದನ್ನು ವೆಂಟಿಲೇಟರ್​ ಇಲ್ಲದೆ ಮನೆಯಲ್ಲೇ ಸರಿಪಡಿಸಲಾಯಿತು ಎನ್ನುತ್ತಾರೆ ಅವರ ಪುತ್ರ ಹರಿ ಮೋಹನ್​.

ಕೊರೊನಾವನ್ನು ಮಣಿಸಿದ 82ವರ್ಷದ ವೃದ್ಧೆ ಬೋರಲಾಗಿ ಮಲಗಿ ಆಕ್ಸಿಜನ್​ ಮಟ್ಟ ಹೆಚ್ಚಿಸಿಕೊಂಡಿದ್ದು ಹೇಗೆ..? ಇದೊಂದು ಸರಳ ಟ್ರಿಕ್​ !
ವಿದ್ಯಾ ದೇವಿ
Lakshmi Hegde
|

Updated on:Apr 28, 2021 | 4:13 PM

Share

ಕೊರೊನಾ ಎರಡನೇ ಅಲೆ ದೇಶದ ಜನರನ್ನು ಮತ್ತೊಮ್ಮೆ ಆತಂಕಕ್ಕೆ ನೂಕಿದೆ. ಎಲ್ಲೆಡೆ ಕೊವಿಡ್​ ಸೋಂಕಿನ ಭೀಕರತೆ, ಆಕ್ಸಿಜನ್​, ಔಷಧಗಳ ಕೊರತೆಯ ಬಗ್ಗೆಯೇ ಸುದ್ದಿಗಳು ವರದಿಯಾಗುತ್ತಿವೆ. ಇಂದು ಅಷ್ಟು ಜನ ಸತ್ತರು..ಹಾಸಿಗೆ ಸಿಗದೆ ಉಸಿರು ನಿಲ್ಲಿಸಿದರು.. ಬರೀ ಇಂಥ ವರದಿಗಳನ್ನು ನೋಡಿ ನಿಜಕ್ಕೂ ಮನಸು ಕಂಗಾಲಾಗುತ್ತಿರುವಾಗ ಇಲ್ಲೊಂದು ಸಕಾರಾತ್ಮಕ ಸುದ್ದಿ ಬೆಳಕಿಗೆ ಬಂದಿದೆ ನೋಡಿ. ಕೊರೊನಾ ಬಗ್ಗೆ ಭಯ ಪಡಬಾರದು..ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದು, ಆತ್ಮವಿಶ್ವಾಸದಿಂದ ಇದ್ದರೆ ಖಂಡಿತ ಗುಣಮುಖರಾಗಬಹುದು ಎಂಬುದಕ್ಕೆ ಈ 82 ವರ್ಷದ ವೃದ್ಧೆಯೇ ಸಾಕ್ಷಿ.

ಈ ವೃದ್ಧೆ ವಿದ್ಯಾದೇವಿ (82) ಉತ್ತರಪ್ರದೇಶದ ಗೋರಖ್​ಪುರದ ಅಲಿನಗರ್​ ನಿವಾಸಿ. ಕೇವಲ 12 ದಿನಗಳಲ್ಲಿ ಕೊರೊನಾವನ್ನು ಮಣಿಸಿ ಇದೀಗ ಆರೋಗ್ಯವಾಗಿದ್ದಾರೆ. ವೈದ್ಯರ ಸಲಹೆಯಂತೇ ನಡೆದು ಕೊವಿಡ್​ ಸೋಂಕಿನ ವಿರುದ್ಧ ಹೋರಾಡಿದ್ದಾರೆ.

ಬೋರಲಾಗಿ ಮಲಗುವುದು ತುಂಬ ಅನುಕೂಲ ಕೊರೊನಾ ಸೋಂಕಿಗೆ ತುತ್ತಾಗಿದ್ದ ವಿದ್ಯಾದೇವಿಯವರಿಗೆ ಒಂದು ದಿನ ಆಮ್ಲಜನಕ ಪ್ರಮಾಣ 79ಕ್ಕೆ ಬಂದಿತ್ತು. ಆಗಂತೂ ಇಡೀ ಮನೆಯವರು ಹೆದರಿದ್ದೆವು. ಆದರೆ ಅದನ್ನು ವೆಂಟಿಲೇಟರ್​ ಇಲ್ಲದೆ ಮನೆಯಲ್ಲೇ ಸರಿಪಡಿಸಲಾಯಿತು ಎನ್ನುತ್ತಾರೆ ಅವರ ಪುತ್ರ ಹರಿ ಮೋಹನ್​. ಆಮ್ಲಜನಕ ಮಟ್ಟ ಹೆಚ್ಚಿಸಲು ವಿದ್ಯಾದೇವಿಯರು ಕಂಡುಕೊಂಡ ಮಾರ್ಗವೆಂದರೆ ಬೋರಲಾಗಿ ಮಲಗಿ ಉಸಿರಾಡುವುದು. ಹೀಗೆ ಬೋರಲಾಗಿ ಮಲಗುವ ವೇಳೆ ಎದೆಯ ಕೆಳಗೆ ಮತ್ತು ಕಾಲಿನ ಕೆಳಗೆ ಒಂದು ತಲೆದಿಂಬು ಇಟ್ಟುಕೊಂಡು ಸ್ವಲ್ಪ ಜೋರಾಗಿ ಉಸಿರಾಡಬೇಕು. ಇದೇ ಮಾರ್ಗವನ್ನು ಅನುಸರಿಸುವ ಮೂಲಕ ವಿದ್ಯಾದೇವಿಯವರು ಆಮ್ಲಜನಕ ಮಟ್ಟ ಹೆಚ್ಚಿಸಿಕೊಂಡಿದ್ದಾರೆ.

ಹೀಗೆ ಬೋರಲಾಗಿ ಉಸಿರಾಟ ಮಾಡಿದ್ದರ ಪರಿಣಾಮ 79 ಇದ್ದ ಆಮ್ಲಜನಕ ಮಟ್ಟ ಕೇವಲ ನಾಲ್ಕೇ ದಿನದಲ್ಲಿ 94 ಕ್ಕೆ ಏರಿತು ಎಂದು ತಿಳಿಸಿದ್ದಾರೆ ಹರಿಮೋಹನ್​. ಇನ್ನು ವಿದ್ಯಾದೇವಿಯವರಷ್ಟೇ ಅಲ್ಲ, ಅವರ ಪುತ್ರ ಹರಿಮೋಹನ್ ಸೇರಿ ಎಲ್ಲರಿಗೂ ಕೊರೊನಾ ಸೋಂಕು ತಗುಲಿದ್ದರೂ, ಯಾರೂ ಧೃತಿಗೆಡದೆ ವೈದ್ಯರ ಸಲಹೆಯಂತೆ ಔಷಧಿ ತೆಗೆದುಕೊಂಡಿದ್ದಾರೆ. ಹಾಗೇ ಆಮ್ಲಜನಕ ಮಟ್ಟದ ಸಮತೋಲನ ಮಾಡಿಕೊಳ್ಳಲು ಬೋರಲಾಗಿ ಮಲಗಿ ಉಸಿರಾಡುವ ಟೆಕ್ನಿಕ್​ನ್ನೇ ಅಳವಡಿಸಿಕೊಂಡಿದ್ದರು.

ಮನೆಮಂದಿಗೆಲ್ಲ ಕೊರೊನಾ ಸೋಂಕು ತಗುಲಿದಾಗ ಮೊದಲು ಭಯವಾಗಿತ್ತು. ಅದರಲ್ಲೂ 82ವರ್ಷದ ವೃದ್ಧ ತಾಯಿಯ ಬಗ್ಗೆ ತುಂಬ ಹೆದರಿಕೆಯಯಿತ್ತು. ಆದರೆ ವೈದ್ಯರು ಧೈರ್ಯ ತುಂಬಿದರು ಎನ್ನುತ್ತಾರೆ ಹರಿಮೋಹನ್. ಇನ್ನು ಆಕ್ಸಿಜನ್​ ಮಟ್ಟ ಕುಸಿತವಾದಾಗ ಬೋರಲಾಗಿ ಮಲಗಿ ಉಸಿರಾಡುವ ಮೂಲಕ ಅದನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನು ವೈದ್ಯರೂ ಕೂಡ ಶಿಫಾರಸ್ಸು ಮಾಡುತ್ತಾರೆ. ಈ ವಿಧಾನವನ್ನು ನೀವು ಮಂಚದ ಮೇಲೆ ಮಲಗಿ ಮಾಡಬಹುದು ಅಥವಾ ನೆಲದ ಮೇಲೆ ಒಂಚು ಹಾಸಿಗೆ ಹಾಸಿಕೊಂಡೂ ಮಾಡಬಹುದಾಗಿದೆ. ಹೀಗೆ ಬೋರಲಾಗಿ ಮಲಗಿದಾಗ ಜೋರಾಗಿ, ಆಳವಾಗಿ ಉಸಿರು ಎಳೆದುಕೊಂಡು, ಅದನ್ನು ಬಿಡಬೇಕು. ಎದೆಯ ಕೆಳಗೆ ಮತ್ತು ಕಾಲಿನ ಕೆಳಗೆ ಒಂದು ದಿಂಬು ಇಟ್ಟುಕೊಳ್ಳಬೇಕು. ಇಲ್ಲಿದೆ ನೋಡಿ ಬೋರಲಾಗಿ ಮಲಗುವ ಮೂಲಕ ಆಕ್ಸಿಜನ್ ಮಟ್ಟ ಹೆಚ್ಚಿಸಿಕೊಳ್ಳುವ ವಿಧಾನ ತೋರಿಸುವ ವಿಡಿಯೋ..ಇದು ಸೋಷಿಯಲ್​ ಮೀಡಿಯಾಗಳಲ್ಲಿ ಕೂಡ ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಇದನ್ನೂ ಓದಿ: ತೆಲುಗಿನ ಖ್ಯಾತ ನಟಿಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ

Samantha Akkineni Birthday: ಸಮಂತಾ ಅಕ್ಕಿನೇನಿ ನಟನೆಯ ಈ ಐದು ಚಿತ್ರಗಳನ್ನು ಮಿಸ್​ ಮಾಡಿಕೊಳ್ಳದೇ ನೋಡಿ

Published On - 4:11 pm, Wed, 28 April 21