ಆಸ್ತಿಗಾಗಿ ನಿವೃತ್ತ ಯೋಧನ ಪ್ರಾಣ ತೆಗೆದ ಮೊಮ್ಮಗ

|

Updated on: Sep 05, 2024 | 8:17 AM

ಆಸ್ತಿಗಾಗಿ ಅಜ್ಜನನ್ನೇ ಮೊಮ್ಮಗ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಆರೋಪಿಯನ್ನು 35 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ.

ಆಸ್ತಿಗಾಗಿ ನಿವೃತ್ತ ಯೋಧನ ಪ್ರಾಣ ತೆಗೆದ ಮೊಮ್ಮಗ
ಭೋಜರಾಜ್​
Follow us on

ಆಸ್ತಿಗಾಗಿ ಮೊಮ್ಮಗ ನಿವೃತ್ತ ಸೈನಿಕನ ಕೊಲೆ ಮಾಡಿರುವ ಘಟನೆ ದೆಹಲಿಯ ಆದರ್ಶ್​ ನಗರದಲ್ಲಿ ನಡೆದಿದೆ. ಆರೋಪಿಯನ್ನು 35 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ.

1985 ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತರಾದ ಮಾಜಿ ಹವಾಲ್ದಾರ್ ಭೋಜರಾಜ್ ಅವರು ತಮ್ಮ ಪಿಂಚಣಿ ಹಣವನ್ನು ತನ್ನ ಇಬ್ಬರು ಪುತ್ರರಾದ ಜಯವೀರ್ ಮತ್ತು ಸುರೇಶ್ ಅವರಿಗೆ ಕೊಡುತ್ತಿದ್ದರು. ಅವರು ಇಬ್ಬರು ಪುತ್ರರಿಗೂ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು ಆದರೆ ಆಜಾದ್‌ಪುರ ಗ್ರಾಮದಲ್ಲಿ ಪ್ರತ್ಯೇಕವಾಗಿ ಇದ್ದರು.

ಪಿಂಚಣಿ ಹಣ ಹಂಚಿಕೆ ವಿಚಾರವಾಗಿ ಸುರೇಶ್ ಅವರ ಪುತ್ರ ಪ್ರದೀಪ್ ಭೋಜರಾಜ್ ಜತೆ ವಾಗ್ವಾದ ನಡೆಸಿದಾಗ ಈ ಘಟನೆ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಪ್ರದೀಪ್ ಭೋಜರಾಜ್ ಅವರನ್ನು ದೊಣ್ಣೆಯಿಂದ ಪದೇ ಪದೇ ಥಳಿಸಿ ಪ್ರಜ್ಞೆ ತಪ್ಪಿಸುತ್ತಿದ್ದ ಎನ್ನಲಾಗಿದೆ.

ಮತ್ತಷ್ಟು ಓದಿ: ಪತ್ನಿಯ ಕೊಲೆ ಮಾಡಿ, ಶವವನ್ನು ಕಾರಿನಲ್ಲಿಟ್ಟು ಓಡಿ ಹೋಗಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

ಭೋಜರಾಜ್ ತೀವ್ರವಾಗಿ ಗಾಯಗೊಂಡಿದ್ದು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದ್ದು, ಪ್ರದೀಪ್‌ನನ್ನು ಪತ್ತೆ ಹಚ್ಚಿ ಬಂಧಿಸುವ ಪ್ರಯತ್ನ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ