ಕೊರೊನಾ ಗೆದ್ದ 98 ವರ್ಷದ ಸಮರ ವೀರ ‘ಸಿಪಾಯಿ ರಾಮು’

| Updated By: KUSHAL V

Updated on: Aug 16, 2020 | 3:43 PM

ಮುಂಬೈ: 98 ವರ್ಷದ ಯುದ್ಧ ಅನುಭವಿಯಾಗಿರುವ ನಿವೃತ್ತ ಸಿಪಾಯಿ ರಾಮು ಲಕ್ಷ್ಮಣ್ ಸಕ್ಪಾಲ್ ಇತ್ತೀಚೆಗೆ ಕೋವಿಡ್ -19 ವಿರುದ್ಧದ ಸಮರದಲ್ಲಿ ಜಯಗಳಿಸಿದ್ದಾರೆ. ಮುಂಬೈನ ನೇರುಲ್ ನಿವಾಸಿ ಆಗಿರುವ ರಾಮು ಲಕ್ಷ್ಮಣ್ ಸಕ್ಪಾಲ್ ಅವರಿಗೆ ತೀವ್ರ ಅನಾರೋಗ್ಯವಾದ ಹಿನ್ನೆಲೆಯಲ್ಲಿ ನೌಕಾಪಡೆಯ ಆಸ್ಪತ್ರೆ ಹಡಗು ಅಶ್ವಿನಿಗೆ ದಾಖಲಿಸಲಾಗಿತ್ತು. ಆಗ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಜೊತೆಗೆ, ಕೆಲವು ವಾರಗಳ ಹಿಂದೆ ಕೋವಿಡ್ -19 ಪ್ರೇರಿತ ನ್ಯುಮೋನಿಯಾದಿಂದ ಸಹ ಬಳಲುತ್ತಿದ್ದರು. ಸದ್ಯ ಸಕ್ಪಾಲ್​ರವರು  ಕೊರೊನಾದಿಂದ ಗುಣಮುಖರಾಗಿದ್ದು, ಐಎನ್​ಹೆಚ್​ಎಸ್ ಅಶ್ವಿನಿಯ (INHS Asvini) […]

ಕೊರೊನಾ ಗೆದ್ದ 98 ವರ್ಷದ ಸಮರ ವೀರ ‘ಸಿಪಾಯಿ ರಾಮು’
Follow us on

ಮುಂಬೈ: 98 ವರ್ಷದ ಯುದ್ಧ ಅನುಭವಿಯಾಗಿರುವ ನಿವೃತ್ತ ಸಿಪಾಯಿ ರಾಮು ಲಕ್ಷ್ಮಣ್ ಸಕ್ಪಾಲ್ ಇತ್ತೀಚೆಗೆ ಕೋವಿಡ್ -19 ವಿರುದ್ಧದ ಸಮರದಲ್ಲಿ ಜಯಗಳಿಸಿದ್ದಾರೆ. ಮುಂಬೈನ ನೇರುಲ್ ನಿವಾಸಿ ಆಗಿರುವ ರಾಮು ಲಕ್ಷ್ಮಣ್ ಸಕ್ಪಾಲ್ ಅವರಿಗೆ ತೀವ್ರ ಅನಾರೋಗ್ಯವಾದ ಹಿನ್ನೆಲೆಯಲ್ಲಿ ನೌಕಾಪಡೆಯ ಆಸ್ಪತ್ರೆ ಹಡಗು ಅಶ್ವಿನಿಗೆ ದಾಖಲಿಸಲಾಗಿತ್ತು. ಆಗ ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿತ್ತು. ಜೊತೆಗೆ, ಕೆಲವು ವಾರಗಳ ಹಿಂದೆ ಕೋವಿಡ್ -19 ಪ್ರೇರಿತ ನ್ಯುಮೋನಿಯಾದಿಂದ ಸಹ ಬಳಲುತ್ತಿದ್ದರು.

ಸದ್ಯ ಸಕ್ಪಾಲ್​ರವರು  ಕೊರೊನಾದಿಂದ ಗುಣಮುಖರಾಗಿದ್ದು, ಐಎನ್​ಹೆಚ್​ಎಸ್ ಅಶ್ವಿನಿಯ (INHS Asvini) ಸಿಬ್ಬಂದಿ ಸೋಂಕು ಗೆದ್ದ ಸಮರ ವೀರನಿಗೆ ಆತ್ಮೀಯ ವಿದಾಯ ಹೇಳಿದ್ದಾರೆ. INHS ಅಶ್ವಿನಿ ನೌಕೆ ಸಶಸ್ತ್ರ ಪಡೆಗಳಿಂದ ನಿವೃತ್ತಗೊಂಡ ಸೋಂಕಿತ ಯೋಧರಿಗೆ ಕೋವಿಡ್ -19 ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.

ಕಿಲ್ಲರ್ ಕೊರೊನಾ ವೈರಸ್​ನಿಂದ ಯಶಸ್ವಿಯಾಗಿ ಗೆದ್ದು ಬಂದ ಭಾರತದ ಅನೇಕ ವೃದ್ಧರಲ್ಲಿ ನಿವೃತ್ತ ಸಿಪಾಯಿ ರಾಮು ಸಕ್ಪಾಲ್ ಕೂಡ ಒಬ್ಬರು. ತಮ್ಮ 98ನೇ ವಯಸ್ಸಿನಲ್ಲೂ ವೈರಸ್ ವಿರುದ್ಧ ಛಲ ಬಿಡದೆ ಹೋರಾಡಿ ಗೆದ್ದ ಸಮರ ವೀರನಿಗೆ ಸಲ್ಯೂಟ್​.