ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವ ವಿಚಾರ, ಜಮ್ಮು ಕಾಶ್ಮೀರದಲ್ಲಿ 100 ಅಡಿ ಎತ್ತರ ರಾಷ್ಟ್ರ ಧ್ವಜ ಸ್ಥಾಪನೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 11, 2023 | 3:24 PM

ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ 100 ಅಡಿ ಎತ್ತರದಲ್ಲಿ ಭಾರತೀಯ ರಾಷ್ಟ್ರ ಧ್ವಜವನ್ನು, ಭಾರತೀಯ ಸೇನೆಯು ಸ್ಥಾಪಿಸಿದೆ. ಇದು ಸ್ಥಳೀಯ ನಿವಾಸಿಗಳು ಮಾತ್ರವಲ್ಲದೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ವಿಷಯವಾಗಿದೆ.

ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ 100 ಅಡಿ ಎತ್ತರದಲ್ಲಿ ಭಾರತೀಯ ರಾಷ್ಟ್ರ ಧ್ವಜವನ್ನು, ಭಾರತೀಯ ಸೇನೆಯು ಸ್ಥಾಪಿಸಿದೆ. ಇದು ಸ್ಥಳೀಯ ನಿವಾಸಿಗಳು ಮಾತ್ರವಲ್ಲದೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ವಿಷಯವಾಗಿದೆ. ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನೂರು ಅಡಿ ಎತ್ತರದ ರಾಷ್ಟ್ರಧ್ವಜವನ್ನು ಭಾರತೀಯ ಸೇನೆಯು ಸ್ಥಾಪನೆ ಮಾಡಿದ್ದು, ಭಾರತೀಯ ಸೇನೆಗೆ ಮಾತ್ರವಲ್ಲದೆ ಆ ಪ್ರದೇಶದ ನಿವಾಸಿಗಳಿಗೂ ಹಾಗೂ ಭಾರತೀಯ ನಾಗರಿಕರಾದ ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ದೋಡಾದ ಸುಂದರವಾದ ಮತ್ತು ಹಿತಕರವಾದ ಬೆಟ್ಟಗಳ ನಡುವೆ ಸ್ಥಾಪಿಸಲಾದ ಈ ಧ್ವಜವು ಸೈನ್ಯ ಮತ್ತು ಸ್ಥಳೀಯ ಜನರಲ್ಲಿ ರಾಷ್ಟ್ರೀಯತೆ ಭಾವನೆಯನ್ನು ಮೂಡಿಸುತ್ತದೆ. ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಸ್ಥಳೀಯರು ಭಾರತೀಯ ಸೇನೆಗೆ ಕೃತಜ್ಞತೆ ಸಲ್ಲಿಸಿದರು.

ಎತ್ತರವಾಗಿ ಮತ್ತು ಸುಂದರವಾಗಿ ನಿಂತಿರುವ ಈ ರಾಷ್ಟ್ರ ಧ್ವಜದ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಆದರೆ ಖಂಡಿತವಾಗಿಯೂ ಇದು ಪ್ರತಿಯೊಬ್ಬ ಭಾರತೀಯ ಪ್ರಜೆಯು ಹೆಮ್ಮೆ ಪಡುವಂತೆ ಮಾಡುತ್ತಿದೆ ಮತ್ತು ಇದು ದೋಡಾ ಜಿಲ್ಲೆಯ ನಿವಾಸಿಗಳಲ್ಲಿ ವಿಶೇಷವಾಗಿ ಯುವ ಪೀಳಿಗೆಯಲ್ಲಿ ದೇಶ ಪ್ರೇಮದ ಭಾವನೆಯನ್ನು ಮೂಡಿಸುವಲ್ಲಿ ಬಹಳ ದೂರ ಸಾಗುತ್ತದೆ ಎಂದು ದೋಡಾ ಜಿಲ್ಲಾ ಕಮಿಷನರ್ ವಿಶೇಷ್ ಪಾಲ್ ಮಹಾಜನ್ ಹೇಳುತ್ತಾರೆ.

ಇದನ್ನೂ ಓದಿ: Jammu and Kashmir: ಜಮ್ಮು  ಕಾಶ್ಮೀರ ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

ಭಾರತೀಯ ಸೇನೆಯು ಇಲ್ಲಿ ನಮ್ಮ ರಾಷ್ಟ್ರೀಯ ಧ್ವಜನವನ್ನು ಹಾರಿಸಿದೆ, ಈ ಪುಣ್ಯಭೂಮಿಯಲ್ಲಿ ಇಷ್ಟು ದೊಡ್ಡ ಧ್ವಜವನ್ನು ಹಾರಿಸಿದ್ದು ದೋಡಾ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲು’ ಎಂದು ತಾಹಿರ್ ಫಾರೂಕ್ ಎಂಬ ವಿದ್ಯಾರ್ಥಿ ಹೇಳುತ್ತಾನೆ. ನಾನು 1996ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದ್ದೇನೆ. ನಾನು ದೋಡಾದಲ್ಲಿ ಇಂತಹ ಬೃಹತ್ ರಾಷ್ಟ್ರ ಧ್ವಜವನ್ನು ನೋಡುತ್ತಿರುವುದು ಇದೇ ಮೊದಲು. ಇದನ್ನು ಮಾಡಿದ್ದಕ್ಕಾಗಿ ಭಾರತೀಯ ಸೇನೆ ಮತ್ತು ಆಡಳಿತದ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಮಾಜಿ ಸೈನಿಕ ಹಕೀಮ್ ಹೇಳಿದ್ದಾರೆ. ನಮ್ಮ ಹೆಮ್ಮೆಯ ರಾಷ್ಟ್ರ ಧ್ವಜವನ್ನು ಹಾರಿಸಿದಾಗ ನಾನು ಈ ಕಾರ್ಯಕ್ರದಲ್ಲಿ ಭಾಗವಹಿಸಿ, ಹಾಡಿದ್ದಕ್ಕೆ ನನಗೆ ಸಂತೋಷವಾಯಿತು ಎಂದು ಸ್ಥಳೀಯ ನಿವಾಸಿ ಸಿಮ್ರಾನ್ ಶರ್ಮ ಹೇಳಿಕೆ ನೀಡಿದ್ದಾರೆ.

Published On - 3:20 pm, Sat, 11 March 23