NEET Exam 2021ನೀಟ್ ಪರೀಕ್ಷೆಗೆ ಮುನ್ನ ಸೋಲಿನ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ; ನೀಟ್​​ನಿಂದ ಶಾಶ್ವತ ವಿನಾಯಿತಿ ಕೋರಿ ಮಸೂದೆ ಮಂಡಿಸುವುದಾಗಿ ಹೇಳಿದ ಸ್ಟಾಲಿನ್

| Updated By: ರಶ್ಮಿ ಕಲ್ಲಕಟ್ಟ

Updated on: Sep 12, 2021 | 6:43 PM

ವಿದ್ಯಾರ್ಥಿಯ ಸಾವಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (M K Stalin), ಡಿಎಂಕೆ ಸರ್ಕಾರವು ನಾಳೆ ತಮಿಳುನಾಡು ವಿಧಾನಸಭೆಯಲ್ಲಿ ನೀಟ್​​ನಿಂದ ಶಾಶ್ವತ ವಿನಾಯಿತಿ ಕೋರಿ ಮಸೂದೆಯನ್ನು ಅಂಗೀಕರಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

NEET Exam 2021ನೀಟ್ ಪರೀಕ್ಷೆಗೆ ಮುನ್ನ ಸೋಲಿನ ಭಯದಿಂದ ವಿದ್ಯಾರ್ಥಿ ಆತ್ಮಹತ್ಯೆ; ನೀಟ್​​ನಿಂದ ಶಾಶ್ವತ ವಿನಾಯಿತಿ ಕೋರಿ ಮಸೂದೆ ಮಂಡಿಸುವುದಾಗಿ ಹೇಳಿದ ಸ್ಟಾಲಿನ್
ಪ್ರಾತಿನಿಧಿಕ ಚಿತ್ರ
Follow us on

ಚೆನ್ನೈ: ಸೇಲಂನ 19 ವರ್ಷದ ವೈದ್ಯಕೀಯ ಆಕಾಂಕ್ಷಿಯು ಭಾರತದ ವಿವಿಧ ಕಾಲೇಜುಗಳಲ್ಲಿ ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಬರೆಯುವ (NEET) ಮುನ್ನ  ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಎಸ್ ಧನುಷ್ ಎಂದು ಗುರುತಿಸಲಾಗಿರುವ ವಿದ್ಯಾರ್ಥಿಯು ಆತ್ಮಹತ್ಯೆಯಿಂದ ಸಾವನ್ನಪ್ಪಿರುವ ಶಂಕೆ ಇದ್ದು, ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ಮೂರನೇ ಪ್ರಯತ್ನದಲ್ಲಿ ಸೋಲಿನ ಭಯದಿಂದ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾವುದೇ ಆತ್ಮಹತ್ಯೆ ಟಿಪ್ಪಣಿ ಇಲ್ಲ ಆದರೆ ಸಾಂದರ್ಭಿಕ ಸಾಕ್ಷ್ಯಗಳು ಪರೀಕ್ಷೆಯ ಭಯದಿಂದ ಆತ್ಮಹತ್ಯೆಯಿಂದ ಸಾವನ್ನು ಸೂಚಿಸುತ್ತವೆ. ವೈದ್ಯಕೀಯ ಸೀಟನ್ನು ಪಡೆಯಲು ಇರುವ ಪರೀಕ್ಷೆಯಲ್ಲಿ ಅವರು ಈ ಹಿಂದೆ ಪಾಸ್ ಆಗಿರಲಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಸೇಲಂನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು . ಭಾನುವಾರ ಮುಂಜಾನೆ ವಿದ್ಯಾರ್ಥಿಯು ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದನು.

“ಅವನ ಪೋಷಕರು ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಮತ್ತು ತೇರ್ಗಡೆಯಾಗಲು ಅವನನ್ನು ಒತ್ತಾಯಿಸುತ್ತಿದ್ದರು. ಅವರು ಒತ್ತಡದಲ್ಲಿದ್ದರು ಎಂದು ಕುಟುಂಬವು ಹೇಳುತ್ತದೆ, ”ಎಂದು ಅಧಿಕಾರಿ ಹೇಳಿದರು. ಮೃತ ಬಾಲಕನ ಅಣ್ಣ ಇಂಜಿನಿಯರಿಂಗ್ ಪದವೀಧರನಾಗಿದ್ದು, ಅವರ ತಂದೆ ಕಾರ್ಖಾನೆಯ ಕೆಲಸ ತೊರೆದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರ. ಪೊಲೀಸರು ಐಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ವಿಚಾರಣೆ ನಡೆಸುತ್ತಿದ್ದಾರೆ.

ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ  ಕಳಗಂ (AIADMK) ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ (Edappadi Palaniswami), ಮೃತ ಬಾಲಕನ ಊರಿನವರಾಗಿದ್ದಾರೆ. ಆಡಳಿತಾರೂಢ ದ್ರಾವಿಡ ಮುನ್ನೇಟ್ರ ಕಳಗಂ ಅಥವಾ ಡಿಎಂಕೆ ನೀಟ್ ರದ್ದುಗೊಳಿಸುವ ಭರವಸೆಯನ್ನು ಈಡೇರಿಸಿಲ್ಲ. ಪರೀಕ್ಷೆಗಳು ನಡೆಯುತ್ತವೆ ಅಥವಾ ಇಲ್ಲವೇ ಎಂದು ಅವರು ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟು ಮಾಡಿದರು ಇಲ್ಲ ಎಂದು ಪಳನಿಸ್ವಾಮಿ ಆರೋಪಿಸಿದರು. “ಡಿಎಂಕೆ ಭರವಸೆ ಏನಾಯಿತು?” ಅವರು ಟ್ವೀಟ್ ಮಾಡಿದ್ದಾರೆ.


ವಿದ್ಯಾರ್ಥಿಯ ಸಾವಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (M K Stalin), ಡಿಎಂಕೆ ಸರ್ಕಾರವು ನಾಳೆ ತಮಿಳುನಾಡು ವಿಧಾನಸಭೆಯಲ್ಲಿ ನೀಟ್​​ನಿಂದ ಶಾಶ್ವತ ವಿನಾಯಿತಿ ಕೋರಿ ಮಸೂದೆಯನ್ನು ಅಂಗೀಕರಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಅನ್ಯಾಯ ಕೊನೆಗೊಳ್ಳಲಿ” ಎಂದು ಅವರು ಹೇಳಿದರು. 2017 ರಲ್ಲಿ ತಮಿಳುನಾಡಿನಲ್ಲಿ ನೀಟ್ ಅನ್ನು ಪರಿಚಯಿಸಿದಾಗಿನಿಂದ ಪರೀಕ್ಷೆಯಲ್ಲಿ ಅನುತ್ತೀರ್ಣ ಅಥವಾ ವೈಫಲ್ಯದ ಭಯದಿಂದಾಗಿ ಹತ್ತಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: NEET Exam 2021: ದೇಶದಾದ್ಯಂತ ಇಂದು ಮಧ್ಯಾಹ್ನದಿಂದ ನೀಟ್ ಪರೀಕ್ಷೆ ಶುರು

ಇದನ್ನೂ ಓದಿ:  ಭಾನುವಾರ ವೈದ್ಯಕೀಯ ನೀಟ್ ಪರೀಕ್ಷೆ: ಅಭ್ಯರ್ಥಿಗಳಿಗೆ ಮೊದಲ‌ ಡೋಸ್ ಲಸಿಕೆ ಕಡ್ಡಾಯ, ಬೆಳಗ್ಗೆ 11 ರಿಂದ ದಾಖಲೆಗಳ ಪರಿಶೀಲನೆ

(A 19-year-old medical aspirant dies by suicide before NEET Let the injustice ends says M K Stalin )