AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿಯಾಚೆಗಿನ ಮಿಲಿಟರಿ ದಾಳಿ ನಂತರ ಮಿಜೋರಾಂಗೆ ಪ್ರವೇಶಿಸಿದ್ದಾರೆ ನೂರಕ್ಕೂ ಹೆಚ್ಚು ಮ್ಯಾನ್ಮಾರ್ ಪ್ರಜೆಗಳು

Myanmar: ಇತ್ತೀಚಿನ ದಿನಗಳಲ್ಲಿ ಗಡಿಯುದ್ದಕ್ಕೂ ದಾಳಿ ಕಾರಣದಿಂದಾಗಿ ಮ್ಯಾನ್ಮಾರ್ ಪ್ರಜೆಗಳು ಮಿಜೋರಾಂಗೆ ಬರುತ್ತಿರುವುದು ಕಂಡು ಬಂದಿದೆ. ಈ ಜನರು ಚಾಂಫೈ ಮತ್ತು ಹ್ನಾಥಿಯಾಲ್ ಜಿಲ್ಲೆಗಳನ್ನು ಪ್ರವೇಶಿಸಿದ್ದಾರೆ. ಗಡಿಯುದ್ದಕ್ಕೂ ಪರಿಸ್ಥಿತಿ ಸುಧಾರಿಸಿದ ತಕ್ಷಣ ಅವರು ಹಿಂತಿರುಗುತ್ತಾರೆ ಎಂದು ನಾನು ನಂಬಿರುವುದಾಗಿ ಮಿಜೋರಾಂ ಮುಖ್ಯ ಕಾರ್ಯದರ್ಶಿ ಲಾಲ್ನುಮಾವಿಯಾ ಚುವಾಂಗೊ ಹೇಳಿದರು.

ಗಡಿಯಾಚೆಗಿನ ಮಿಲಿಟರಿ ದಾಳಿ ನಂತರ ಮಿಜೋರಾಂಗೆ ಪ್ರವೇಶಿಸಿದ್ದಾರೆ ನೂರಕ್ಕೂ ಹೆಚ್ಚು ಮ್ಯಾನ್ಮಾರ್ ಪ್ರಜೆಗಳು
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 12, 2021 | 5:28 PM

Share

ಮಿಜೋರಾಂ: ಗಡಿಯುದ್ದಕ್ಕೂ ಸೇನಾ ದಾಳಿಯ ನಂತರ ಕಳೆದ ಕೆಲವು ದಿನಗಳಲ್ಲಿ 100 ಕ್ಕೂ ಹೆಚ್ಚು ಮ್ಯಾನ್ಮಾರ್  (Myanmar) ಪ್ರಜೆಗಳು ಮಿಜೋರಾಂನ (Mizoram) ಎರಡು ಜಿಲ್ಲೆಗಳನ್ನು ಪ್ರವೇಶಿಸಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕಳೆದ ಕೆಲವು ದಿನಗಳಲ್ಲಿ ಮ್ಯಾನ್ಮಾರ್‌ನಿಂದ ನೂರಾರು ಜನರು ಮಿಜೋರಾಂ ಪ್ರವೇಶಿಸಿದ್ದಾರೆ ಎಂದು ನಾನು ಕೇಳಿದ್ದೇನೆ. ಆದರೆ ಪ್ರಸ್ತುತ ಎಷ್ಟು ಜನ ಕ್ವಾರಂಟೈನ್ ನಲ್ಲಿದ್ದಾರೆ ಎಂಬ ನಿಖರ ಅಂಕಿಅಂಶ ನನ್ನ ಬಳಿ ಇಲ್ಲ ಎಂದು ಮಿಜೋರಾಂ ಗೃಹ ಸಚಿವ ಲಾಲ್ಚಮ್ಲಿಯಾನ ಹೇಳಿದರು. ಮಾಧ್ಯಮ ವರದಿಗಳ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ಮಿಜೋರಾಂನ ಗಡಿಯ ಬಳಿ ಮ್ಯಾನ್ಮಾರ್‌ನಲ್ಲಿನ ಮಿಲಿಟರಿ ಆಡಳಿತ ಮತ್ತು ನೆರೆಯ ರಾಷ್ಟ್ರದ ಸೇನೆಯನ್ನು ವಿರೋಧಿಸುವ ಸಶಸ್ತ್ರ ನಾಗರಿಕರ ನಡುವೆ “ತೀವ್ರವಾದ ಹೋರಾಟ” ಭುಗಿಲೆದ್ದಿದೆ. ಹಿಂಸಾಚಾರದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿರುವ ಮ್ಯಾನ್ಮಾರ್ ಪ್ರಜೆಗಳು ಮಿಜೋರಾಂಗೆ ಬಂದಿದ್ದಾರೆ ಎಂದು ನಂಬಲಾಗಿದೆ.

ಈ ವರ್ಷದ ಮಾರ್ಚ್‌ನಿಂದ ಸಾವಿರಾರು ಮ್ಯಾನ್ಮಾರ್ ಪ್ರಜೆಗಳು ವಿಶೇಷವಾಗಿ ಭಾರತದ ಗಡಿಯ ಹತ್ತಿರ ವಾಸಿಸುತ್ತಿರುವವರು ಮಿಜೋರಾಂ ಪ್ರವೇಶಿಸಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಅವರಲ್ಲಿ 10,000 ಕ್ಕೂ ಹೆಚ್ಚು ಜನರು ಪ್ರಸ್ತುತ ಈಶಾನ್ಯ ರಾಜ್ಯದಲ್ಲಿ ವಾಸಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗಡಿಯುದ್ದಕ್ಕೂ ದಾಳಿ ಕಾರಣದಿಂದಾಗಿ ಮ್ಯಾನ್ಮಾರ್ ಪ್ರಜೆಗಳು ಮಿಜೋರಾಂಗೆ ಬರುತ್ತಿರುವುದು ಕಂಡು ಬಂದಿದೆ. ಈ ಜನರು ಚಾಂಫೈ ಮತ್ತು ಹ್ನಾಥಿಯಾಲ್ ಜಿಲ್ಲೆಗಳನ್ನು ಪ್ರವೇಶಿಸಿದ್ದಾರೆ. ಗಡಿಯುದ್ದಕ್ಕೂ ಪರಿಸ್ಥಿತಿ ಸುಧಾರಿಸಿದ ತಕ್ಷಣ ಅವರು ಹಿಂತಿರುಗುತ್ತಾರೆ ಎಂದು ನಾನು ನಂಬಿರುವುದಾಗಿ ಮಿಜೋರಾಂ ಮುಖ್ಯ ಕಾರ್ಯದರ್ಶಿ ಲಾಲ್ನುಮಾವಿಯಾ ಚುವಾಂಗೊ ಹೇಳಿದರು.

ಮಿಜೋರಾಂ ಮತ್ತು ಮ್ಯಾನ್ಮಾರ್ 510 ಕಿಮೀ ಗಡಿಯನ್ನು ಹಂಚಿಕೊಂಡಿವೆ. ಮಿಜೋರಾಂ ಪ್ರವೇಶಿಸಿದ ಹೆಚ್ಚಿನ ನಿರಾಶ್ರಿತರು ಮ್ಯಾನ್ಮಾರ್‌ನ ಚಿನ್ ರಾಜ್ಯದಿಂದ ಬಂದವರು. ಇದು ರಾಜ್ಯದ ಆರು ಜಿಲ್ಲೆಗಳಾದ ಚಂಪೈ, ಹ್ನಾಥಿಯಾಲ್, ಸೆರ್ಚಿಪ್, ಸೈತುಯಲ್, ಸಿಯಾಹಾ ಮತ್ತು ಲಾವ್ಂಗ್‌ಟಲೈನ್ನು ಹೊಂದಿಗೆ. ಮಿಜೋಸ್ ಮತ್ತು ಚಿನ್ಸ್ ನಿಕಟ ಜನಾಂಗೀಯ ಸಂಬಂಧಗಳನ್ನು ಹಂಚಿಕೊಂಡಿದ್ದಾರೆ.

“ಕಳೆದ ಕೆಲವು ದಿನಗಳಿಂದ ಸಣ್ಣ ಗುಂಪುಗಳಲ್ಲಿ ಹಲವಾರು ಗುಂಪುಗಳು ನಮ್ಮ ಜಿಲ್ಲೆಯನ್ನು ವಿವಿಧ ಗಡಿಗಳ ಮೂಲಕ ಪ್ರವೇಶಿಸಿವೆ. ಇತ್ತೀಚಿನ ದಿನಗಳಲ್ಲಿ ಒಳಹರಿವಿನ ನಿಖರವಾದ ಅಂಕಿಅಂಶ ನಮ್ಮಲ್ಲಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಸುಮಾರು 730 ಜನರು ಬಂದಿದ್ದಾರೆ. ಅವರಿಗೆ 6-7 ಹಳ್ಳಿಗಳಲ್ಲಿ ಗ್ರಾಮದ ಹಿರಿಯರು ವಸತಿ ನೀಡುತ್ತಿದ್ದಾರೆ ”ಎಂದು ಹ್ನಾಥಿಯಾಲ್ ನ ಹೆಚ್ಚುವರಿ ಉಪ ಆಯುಕ್ತ ಸೈಜಿಕ್‌ಪುಯಿ ಹೇಳಿದರು.

ಬುಧವಾರ 35 ಮ್ಯಾನ್ಮಾರ್ ಪ್ರಜೆಗಳು, ಅವರಲ್ಲಿ ಹೆಚ್ಚಿನವರು ವಯಸ್ಸಾದ ಮತ್ತು ದುರ್ಬಲ ಮಹಿಳೆಯರು ಮತ್ತು ಸಣ್ಣ ಮಕ್ಕಳು ನಮ್ಮ ಜಿಲ್ಲೆಯನ್ನು ಪ್ರವೇಶಿಸಿದರು. ಸ್ಥಳೀಯ ಎನ್‌ಜಿಒಗಳು ಜೌಲ್‌ಸೀ ಗ್ರಾಮದಿಂದ ನಿರ್ಮಿಸಲಾಗಿರುವ ತಾತ್ಕಾಲಿಕ ಆಶ್ರಯದಲ್ಲಿ ಅವರಿಗೆ ಅವಕಾಶ ಕಲ್ಪಿಸಿವೆ ಎಂದು  ಚಾಂಪೈ ಉಪ ಆಯುಕ್ತೆ ಮಾರಿಯಾ ಸಿಟಿ ಜುವಾಲಿ ಹೇಳಿದರು.

ಇದನ್ನೂ ಓದಿ: ಗಡಿ ಸಂಘರ್ಷ: ಮಿಜೋರಾಂ ರಾಜ್ಯದ ನಾಗರಿಕನ ಮೇಲೆ ಅಸ್ಸಾಂ ಪೊಲೀಸರ ಗುಂಡಿನ ದಾಳಿ

ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣ ನಾಮಫಲಕದಿಂದ ಅದಾನಿ ಏರ್​​ಪೋರ್ಟ್ಸ್ ಟ್ಯಾಗ್ ಮಾಯ

(Over 100 Myanmar nationals have entered two districts of Mizoram after military offensive across border)

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ