Viral Video: ಹಕ್ಕಿಯಿಂದ ಮುಜುಗರಕ್ಕೀಡಾದ ವ್ಯಕ್ತಿ; ವಿಚಿತ್ರವಾಗಿ ಆಹಾರ ತಿನ್ನಿಸಲು ಹೋದವನಿಗೆ ಭರ್ಜರಿ ಅವಮಾನ ಮಾಡಿದ ಪಕ್ಷಿ

ಅದೊಂದು ನದಿ ಸೇತುವೆ. ಅಲ್ಲಿ ತುಂಬ ಸೀಗಲ್​ ಹಕ್ಕಿಗಳು ಹಾರಾಡುತ್ತಿದ್ದವು. ವ್ಯಕ್ತಿಯೊಬ್ಬ ಈ ಹಕ್ಕಿಗಳಿಗೆ ಫನ್ನಿಯಾಗಿ ತಿಂಡಿಯ ತುಂಡೊಂದನ್ನು ಕೊಡಲು ಮುಂದಾದ. ತನ್ನ ಬಾಯಲ್ಲಿ ಆ ತಿಂಡಿಯನ್ನು ಕಚ್ಚಿಕೊಂಡು ಮುಖ ಮೇಲೆ ಮಾಡಿ ನಿಂತ.

Viral Video: ಹಕ್ಕಿಯಿಂದ ಮುಜುಗರಕ್ಕೀಡಾದ ವ್ಯಕ್ತಿ; ವಿಚಿತ್ರವಾಗಿ ಆಹಾರ ತಿನ್ನಿಸಲು ಹೋದವನಿಗೆ ಭರ್ಜರಿ ಅವಮಾನ ಮಾಡಿದ ಪಕ್ಷಿ
ಬಾಯಲ್ಲಿ ಆಹಾರ ಕಚ್ಚಿಕೊಂಡು ಹಕ್ಕಿಗಳಿಗೆ ತಿನಿಸಲು ಹೋದ ವ್ಯಕ್ತಿ
Follow us
Lakshmi Hegde
|

Updated on:Apr 08, 2021 | 11:20 AM

ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ, ಪಕ್ಷಿಗಳಿಗೆ ಸಂಬಂಧಪಟ್ಟ ಫನ್ನಿ ವಿಡಿಯೋಗಳು ತುಂಬ ವೈರಲ್​ ಆಗುತ್ತವೆ. ಹಾಗೇ ಈಗೊಂದು ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದರೆ ನಗು ತಡೆಯಲು ಸಾಧ್ಯವೇ ಇಲ್ಲ. ಹಾರಾಡುತ್ತಿದ್ದ ಪಕ್ಷಿಗಳಿಗೆ ವಿಚಿತ್ರವಾಗಿ ಆಹಾರ ತಿನ್ನಿಸಲು ಹೋದವನಿಗೆ ಹಕ್ಕಿಯೊಂದು ಸರಿಯಾಗಿ ಬುದ್ಧಿಕಲಿಸಿದೆ ಎನ್ನುತ್ತಿದ್ದಾರೆ ಈ ವಿಡಿಯೋ ನೋಡಿದವರು.

ಅದೆಷ್ಟೋ ಜನರು ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ನೀಡುತ್ತಾರೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಹಲವರು ತಮ್ಮ ಮನೆ ಮುಂದೆ ನೀರಿಟ್ಟು ಬೀದಿ ನಾಯಿಗಳು, ಬೆಕ್ಕುಗಳ ಬಾಯಾರಿಕೆ ನೀಗಿಸುತ್ತಾರೆ. ಆಹಾರವನ್ನೂ ನೀಡುತ್ತಾರೆ. ಹಾಗೇ ಟೆರೇಸ್​ ಮೇಲೆ ಕಾಳು, ನೀರು ಇಟ್ಟು ಪಕ್ಷಿಗಳಿಗೆ ಅನುಕೂಲ ಮಾಡಿಕೊಡುತ್ತಾರೆ. ಇದನ್ನೆಲ್ಲ ಅವರು ಮೂಕ ಪ್ರಾಣಿ, ಪಕ್ಷಿಗಳ ಮೇಲಿನ ಪ್ರೀತಿಗಾಗಿ ಮಾಡುತ್ತಾರೆ. ಅದರಲ್ಲೇ ತೃಪ್ತಿ ಕಂಡುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಹಕ್ಕಿಗಳಿಗೆ ಆಹಾರ ಕೊಡುವ ನೆಪದಲ್ಲಿ ಅವುಗಳೊಂದಿಗೆ ಆಟವಾಡಲು ಹೋಗಿ ಮುಜುಗರಕ್ಕೀಡಾಗಿದ್ದಾರೆ.

ಅದೊಂದು ನದಿ ಸೇತುವೆ. ಅಲ್ಲಿ ತುಂಬ ಸೀಗಲ್​ ಹಕ್ಕಿಗಳು ಹಾರಾಡುತ್ತಿದ್ದವು. ವ್ಯಕ್ತಿಯೊಬ್ಬ ಈ ಹಕ್ಕಿಗಳಿಗೆ ಫನ್ನಿಯಾಗಿ ತಿಂಡಿಯ ತುಂಡೊಂದನ್ನು ಕೊಡಲು ಮುಂದಾದ. ತನ್ನ ಬಾಯಲ್ಲಿ ಆ ತಿಂಡಿಯನ್ನು ಕಚ್ಚಿಕೊಂಡು ಮುಖ ಮೇಲೆ ಮಾಡಿ ನಿಂತ. ಹಾರಿ ಬಂದ ಹಕ್ಕಿಯೊಂದು ಸರಿಯಾಗಿ ಅವನ ಮುಖದ ಮೇಲೆ ಮಲವಿಸರ್ಜನೆ (ಪಿಷ್ಟಿ) ಮಾಡಿತು. ಆ ಹೊಲಸು ಸರಿಯಾಗಿ ಆತನ ಮೂಗು, ಬಾಯಿಯ ಬಳಿಯೇ ಬಿದ್ದಿದೆ. ವಿಡಿಯೋ ಚಿತ್ರೀಕರಣ ಮಾಡುತ್ತಿದ್ದವರೂ ಇದನ್ನು ನೋಡಿ ಬಿದ್ದುಬಿದ್ದು ನಕ್ಕಿದ್ದಾರೆ. ಹೀಗೆ ಹಕ್ಕಿ ಪಿಷ್ಟಿ ಹಾಕಿಸಿಕೊಂಡವನು ಮಾತ್ರ ತಲೆ ಬಗ್ಗಿಸಿ ನಿಂತಿದ್ದಾನೆ. ತುಂಬ ಅಸಹ್ಯಪಟ್ಟುಕೊಳ್ಳುವ ಸರದಿ ಅವನಾದಗಿತ್ತು. ಈ ವಿಡಿಯೋವನ್ನು ಅಮೆರಿಕದ ಮಾಜಿ ಫುಟ್​ಬಾಲ್​ ಆಟಗಾರ ರೆಕ್ಸ್ ಚಾಪ್ಮನ್ಹಾರ್ಸ್ ಶೇರ್​ ಮಾಡಿಕೊಂಡಿದ್ದು, ತುಂಬ ವೈರಲ್​ ಆಗುತ್ತಿದೆ. ನೆಟ್ಟಿಗರು ತುಂಬ ಫನ್ನಿಫನ್ನಿ ಕಾಮೆಂಟ್​ಗಳನ್ನು ನೀಡುತ್ತಿದ್ದಾರೆ.

(A Bird give Punishment to who try feed them in funny way)

Published On - 11:19 am, Thu, 8 April 21

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು