ಸಾರಿಗೆ ನೌಕರರ ಮುಷ್ಕರ.. ವಿಶೇಷ ರೈಲುಗಳ ವ್ಯವಸ್ಥೆ ಮಾಡಿದ ರೈಲ್ವೆ ಇಲಾಖೆ: ಎಲ್ಲೆಲ್ಲಿ?

central railway special train services: ಕರ್ನಾಟಕದಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೇ ಇಲಾಖೆಯು ಬೀದರ್, ವಿಜಯಪುರ, ಮೈಸೂರು, ಬಾಗಲಕೋಟೆ, ಕಾರವಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ವಿವರ ಇಲ್ಲಿದೆ ನೋಡಿ

  • TV9 Web Team
  • Published On - 11:40 AM, 8 Apr 2021
ಸಾರಿಗೆ ನೌಕರರ ಮುಷ್ಕರ.. ವಿಶೇಷ ರೈಲುಗಳ ವ್ಯವಸ್ಥೆ ಮಾಡಿದ ರೈಲ್ವೆ ಇಲಾಖೆ: ಎಲ್ಲೆಲ್ಲಿ?
ರೈಲು

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಏಪ್ರಿಲ್ 7ರಿಂದ ರಾಜ್ಯದಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ ಕೈಗೊಂಡಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ತಪ್ಪಿಲು ವಿಶೇಷ ರೈಲು ವ್ಯವಸ್ಥೆ ಕಲ್ಪಿಸುವಂತೆ ಭಾರತೀಯ ರೈಲ್ವೇ ಇಲಾಖೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದರು. ಅದರಂತೆ ಮನವಿಗೆ ಸ್ಪಂದಿಸಿರುವ ಕೇಂದ್ರ ರೈಲ್ವೇ ಇಲಾಖೆಯು ಬೀದರ್, ವಿಜಯಪುರ, ಮೈಸೂರು, ಬಾಗಲಕೋಟೆ, ಕಾರವಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ವಿಶೇಷ ರೈಲು ವ್ಯವಸ್ಥೆ ಮಾಡಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಅನಿರ್ದಿಷ್ಟಾವದಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದೇ ವೇಳೆ ಯುಗಾದಿ ಹಬ್ಬ ಸಹ ಬರುತ್ತಿದ್ದ ಜನರಿಗೆ ತೊಂದರೆ ಆಗಬಾರದೆಂದು ಅವರ ಪ್ರಯಾಣಕ್ಕೆ ಅನುಕೂಲವಾಗಲೆಂದು ನೈಋತ್ಯ ರೈಲ್ವೇ ಗುರುವಾರದಿಂದ ಏಪ್ರಿಲ್ 14ರ ವರೆಗೆ ಹೆಚ್ಚಿನ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಹೊಸ ವರ್ಷದ ಸಂಭ್ರಮದಲ್ಲಿ ಆಚರಿಸುವ ಯುಗಾದಿ ಹಬ್ಬಕ್ಕೆ ಜನ ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವುದು ಹೆಚ್ಚಾಗಿರುತ್ತೆ. ಆದ್ರೆ ಸಾರಿಗೆ ನೌಕರರ ಮುಷ್ಕರದಿಂದ ಜನರಿಗೆ ಸಮಸ್ಯೆಯಾಗಬಾರದೆಂದು ರೈಲು ಸೇವೆಯನ್ನು ಹೆಚ್ಚಿಸಲಾಗಿದೆ.

Special Train

Special Train

Special Train

ಇದನ್ನೂ ಓದಿ: ಮುಂಬೈನಲ್ಲಿ ಕೊವಿಡ್ ನಿರ್ಬಂಧ: ರೈಲು ಸಂಚಾರ ಸ್ಥಗಿತಗೊಳ್ಳುವ ಭಯದಿಂದ ಊರಿನತ್ತ ಹೆಜ್ಜೆ ಹಾಕಿದ ವಲಸೆ ಕಾರ್ಮಿಕರು

(Karnataka Bus Strike Special Train Services Arranged By Central Railway In Karnataka)