ನಿನ್ನೆ ಬಸಂತಪಂಚಮಿಯಂದು ಹೈದರಾಬಾದ್ನ ಹೊರವಲಯದಲ್ಲಿರುವ ಮುಂಚಿತ್ತಾಲ್ನಲ್ಲಿ ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಪಂಚಲೋಹ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದಾರೆ. ಈ ವೇಳೆ ನಡೆದ ಕೆಲವು ವೈದಿಕ ಕಾರ್ಯಕ್ರಮದಲ್ಲೂ ಕೂಡ ಮೋದಿ ಭಾಗವಹಿಸಿದ್ದಾರೆ ವಿಶೇಷ. ಆದರೆ ಇಲ್ಲೊಂದು ವಿಶೇಷ ಕ್ಷಣ ಎದುರಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಶ್ರೀರಾಮಾನುಜಾಚಾರ್ಯರ ಪ್ರತಿಮೆಗೆ ದಂಡವತ ಪ್ರಣಾಮ ಸಲ್ಲಿಸಿದ ಹೊತ್ತಲ್ಲೇ, ಪುಟ್ಟ ಬಾಲಕನೊಬ್ಬ ಪ್ರಧಾನಿಯವರಿಗೆ ದಂಡವತ ಪ್ರಣಾಮ ಸಲ್ಲಿಸಿದ್ದಾನೆ. ಅವರ ಕಾಲು ಸ್ಪರ್ಶಿಸಿ ಆಶೀರ್ವಾದ ಕೇಳಿದ್ದೇನೆ. ನಂತರ ಮೋದಿಯವರೇ ಖುದ್ದಾಗಿ ಆತನನ್ನು ಹಿಡಿದೆತ್ತಿದ್ದಾರೆ. ಈ ಬಾಲಕ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ಪ್ರಧಾನಿ ಮೋದಿಯವರಿಗೆ ದಂಡವತ ಪ್ರಣಾಮ ಸಲ್ಲಿಸಿದ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ.
#WATCH | A child took the blessing of Prime Minister Narendra Modi while performing ‘dandvat pranam’ during the inauguration ceremony of ‘Statue of Equality’ commemorating the 11th-century Bhakti Saint Sri Ramanujacharya in Hyderabad pic.twitter.com/yeqAmw5hyU
— ANI (@ANI) February 5, 2022
ರಾಮಾನುಜಾಚಾರ್ಯರ ಪಂಚಲೋಹದ ಪ್ರತಿಮೆ (ಸಮಾನತೆ ಪ್ರತಿಮೆ) ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ಅನಾವರಣಗೊಂಡ ಶ್ರೀರಾಮಾನುಜಾಚಾರ್ಯರ ಸಮಾನತೆ ಮೂರ್ತಿ ಈ ದೇಶದ ಯುವಜನರನ್ನು ಪ್ರೋತ್ಸಾಹಿಸಲಿದೆ. ಇದು ರಾಮಾನುಜಾಚಾರ್ಯರ ಜ್ಞಾನ, ನಿರ್ಲಿಪ್ತತೆ ಮತ್ತು ಆದರ್ಶಗಳ ಪ್ರತೀಕವಾದ ಮೂರ್ತಿ ಎಂದು ಹೇಳಿದರು. ಮಹಾನ್ ನಾಯಕ, ಸಮಾನತೆಯನ್ನು ಪ್ರತಿಪಾದಿಸಿದ್ದ ಡಾ. ಅಂಬೇಡ್ಕರ್ ಅವರು ಶ್ರೀರಾಮಾನುಜಾಚಾರ್ಯರ ಬಹುದೊಡ್ಡ ಅನುಯಾಯಿಯಾಗಿದ್ದರು. ಸರ್ವರಿಗೂ ಸಮಬಾಳು, ಸಮಾಜ ಎಂಬ ಅವರ ತತ್ವಾದರ್ಶಗಳನ್ನು ಪಾಲಿಸಿದರು. ರಾಮಾನುಜಾಚಾರ್ಯರು ಸಂಸ್ಕೃತ ಗ್ರಂಥ ಸಂಯೋಜನೆ ಮಾಡಿದರು ಮತ್ತು ಭಕ್ತಿ ಮಾರ್ಗದಲ್ಲಿ ತಮಿಳು ಭಾಷೆಗೂ ಅಷ್ಟೇ ಪ್ರಾಮುಖ್ಯತೆ ನೀಡಿದರು ಎಂದು ಮೋದಿಯವರು ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ವೈದಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ; ಇದು ಅವರ ವ್ರತನಿಷ್ಠೆ ತೋರಿಸುತ್ತದೆ: ಚಿನ್ನ ಜೀಯರ್ ಸ್ವಾಮಿ
Published On - 8:01 am, Sun, 6 February 22