ಟ್ರ್ಯಾಕ್ಟರ್​ ಟ್ರಾಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು; ಮೂವರ ದುರ್ಮರಣ, ಒಬ್ಬನಿಗೆ ಗಾಯ

ಮೂರು ಮೃತದೇಹಗಳನ್ನು ರೋಹ್ಟಕ್​​ನ ಪಿಜಿಐ ಆಸ್ಪತ್ರೆಗೆ, ಪೋಸ್ಟ್​ಮಾರ್ಟಮ್​​ಗಾಗಿ ಕಳಿಸಲಾಗಿದೆ. ಗಾಯಗೊಂಡ ಒಬ್ಬಾತನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.

ಟ್ರ್ಯಾಕ್ಟರ್​ ಟ್ರಾಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು; ಮೂವರ ದುರ್ಮರಣ, ಒಬ್ಬನಿಗೆ ಗಾಯ
ರೊಹ್ಟಕ್​​ನಲ್ಲಿ ಕಾರು ಅಪಘಾತ
Follow us
TV9 Web
| Updated By: Lakshmi Hegde

Updated on: Feb 06, 2022 | 9:36 AM

ಕಾರೊಂದು ಟ್ರ್ಯಾಕ್ಟರ್​ ಟ್ರಾಲಿಗೆ ಡಿಕ್ಕಿ (Accident) ಹೊಡೆದ ಪರಿಣಾಮ ಮೂವರು ಮೃತಪಟ್ಟು, ಒಬ್ಬರು ಗಾಯಗೊಂಡ ಘಟನೆ ಹರ್ಯಾಣದ ರೊಹ್ಟಕ್​​ ಜಿಲ್ಲೆಯ (Rohtak District)ಲಾಹ್ಲಿಯಲ್ಲಿ ನಡೆದಿದೆ. ಮೃತರಾದ ಮೂವರಲ್ಲಿ ಇಬ್ಬರ ಗುರುತು ಸಿಕ್ಕಿದೆ. ಅದರಲ್ಲಿ ಒಬ್ಬನ ಹೆಸರು ವಿವೇಕ್​ ಎಂದಾಗಿದ್ದು ರೋಹ್ಟಕ್​ನ ಚುನ್ನಿಪುರದವನು. ಇನ್ನೊಬ್ಬಾತ ಪಂಜಾಬ್​ನ ಜಿರಕ್​ಪುರದವನು ಎಂದು ಹೇಳಲಾಗಿದೆ. ಮೂರನೇಯವರ ಹೆಸರಾಗಲಿ, ಊರಾಗಲಿ ಇನ್ನೂ ತಿಳಿದಿಲ್ಲ. 

ಮೂರು ಮೃತದೇಹಗಳನ್ನು ರೋಹ್ಟಕ್​​ನ ಪಿಜಿಐ ಆಸ್ಪತ್ರೆಗೆ, ಪೋಸ್ಟ್​ಮಾರ್ಟಮ್​​ಗಾಗಿ ಕಳಿಸಲಾಗಿದೆ. ಗಾಯಗೊಂಡ ಒಬ್ಬಾತನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಕಲನೌರ್​ ಸ್ಟೇಶನ್​ ಅಧಿಕಾರಿ ಸುಶೀಲಾ ತಿಳಿಸಿದ್ದಾರೆ. ಪಂಜಾಬ್ ರಾಜ್ಯದ ನಂಬರ್​ ಪ್ಲೇಟ್​ ಇರುವ ಕಾರು ಕಲನೌರ್​​ನಿಂದ ರೋಹ್ಕಟ್​ ಕಡೆಗೆ ಹೋಗುತ್ತಿತ್ತು. ಟ್ರ್ಯಾಕ್ಟರ್​ ಟ್ರಾಲಿ ಎದುರಿನಿಂದ ಬರುತ್ತಿತ್ತು. ಕಾರು ತುಂಬ ವೇಗದಿಂದ ಹೋಗುತ್ತಿತ್ತು. ಒಂದು ತಿರುವಿನಲ್ಲಿ ಟ್ರಾಲಿಯ ಹಿಂಬದಿಗೆ ಕಾರು ಡಿಕ್ಕಿಯಾಗಿದೆ. ಕಾರು ಚೂರುಚೂರಾಗಿದೆ. ಇದೊಂದು ಭಯಾನಕ ಅಪಘಾತವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ಎಎನ್​ಐ ವರದಿ ಮಾಡಿದೆ. ಹಾಗೇ, ಪೊಲೀಸರು ತನಿಖೆಯನ್ನೂ ಪ್ರಾರಂಭ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಯಚೂರು: ತೊಗರಿಯ ಗುಣಮಟ್ಟ ಪರೀಕ್ಷೆಗೆ ಅನುಗುಣವಾಗಿ ಬೆಲೆ ನಿಗದಿ; ದರ ಕುಸಿತದಿಂದ ರೈತರು ಕಂಗಾಲು

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್