AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ತೊಗರಿಯ ಗುಣಮಟ್ಟ ಪರೀಕ್ಷೆಗೆ ಅನುಗುಣವಾಗಿ ಬೆಲೆ ನಿಗದಿ; ದರ ಕುಸಿತದಿಂದ ರೈತರು ಕಂಗಾಲು

ಸದ್ಯ ಮಾರುಕಟ್ಟೆಗಿಂದ ಸರ್ಕಾರದ ತೊಗರಿ ಖರೀದಿ ಕೇಂದ್ರಗಳಲ್ಲೇ ಹೆಚ್ಚಿನ ದರವಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್​ಗೆ 4 ಸಾವಿರದಿಂದ 5 ಸಾವಿರದವರೆಗೆ ಬೆಲೆ ಇದ್ದರೆ, ಸರ್ಕಾರದ ಖರೀದಿ ಕೇಂದ್ರದಲ್ಲಿ 6500 ರೂ. ಇದೆ. ಅದರಲ್ಲೂ ಖರೀದಿ ಕೇಂದ್ರಗಳಲ್ಲಿ ತೊಗರಿಯ ಗುಣಮಟ್ಟವನ್ನು ಪರೀಕ್ಷೆ ಮಾಡುವ ಮೂಲಕ ದರದಲ್ಲಿ ವ್ಯತ್ಯಾಸ ಮಾಡಲಾಗುತ್ತದೆ ಎಂದು ತೊಗರಿ ಬೆಳೆದ ರೈತ ಚಂದ್ರಶೇಖರ್ ಆರೋಪಿಸುತ್ತಿದ್ದಾರೆ.

ರಾಯಚೂರು: ತೊಗರಿಯ ಗುಣಮಟ್ಟ ಪರೀಕ್ಷೆಗೆ ಅನುಗುಣವಾಗಿ ಬೆಲೆ ನಿಗದಿ; ದರ ಕುಸಿತದಿಂದ ರೈತರು ಕಂಗಾಲು
ತೊಗರಿ
Follow us
TV9 Web
| Updated By: preethi shettigar

Updated on:Feb 06, 2022 | 9:00 AM

ರಾಯಚೂರು: ಅಕಾಲಿಕ ಮಳೆಯಿಂದ ತತ್ತರಿಸಿದ್ದ ರೈತರಿಗೆ ಈಗ ಮತ್ತೊಂದು ಕಂಟಕ ಎದುರಾಗಿದೆ. ರಾಯಚೂರು ಜಿಲ್ಲೆಯ ರೈತರು ತೊಗರಿ ಬೆಳೆಯನ್ನು(Toor dal) ನಂಬಿಕೊಂಡು ಮಾಡಿದ ಸಾಲ ತೀರತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಭರ್ಜರಿ ಫಸಲಿನ ಮಧ್ಯೆ, ಸೂಕ್ತ ಬೆಲೆ ಸಿಗದೇ ರೈತರು(Farmers) ಈಗ ಮತ್ತೆ ಸಾಲದ ಸುಳಿಗೆ ಸಿಲುಕುವ ಭೀತಿಯಲ್ಲಿದ್ದಾರೆ. ರಾಯಚೂರು ಜಿಲ್ಲೆಯಾದ್ಯಂತ ತೊಗರಿ ಬೆಳೆದ ರೈತರಿಗೆ ದರ ಕುಸಿತದ ಭೀತಿ ಎದುರಾಗಿದೆ. ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ತೊಗರಿಯನ್ನು ಬೆಳೆಯಲಾಗಿದೆ. ತೊಗರಿ ಕಟಾವಿನ ಬೆನ್ನಲ್ಲೆ ಈಗ ಸರ್ಕಾರದಿಂದ(State Government) ಜಿಲ್ಲೆಯಾದ್ಯಂತ ಒಟ್ಟು 61 ತೊಗರಿ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ಸುಮಾರು 11,424 ರೈತರು ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ. ಆದರೆ ಇಲ್ಲಿವರೆಗೆ ಕೇವಲ 31 ಜನ ರೈತರಿಂದ ಮಾತ್ರ ತೊಗರಿ ಖರೀದಿಸಲಾಗಿದೆ. ಹೀಗೆ ತೊಗರಿ ಖರೀದಿ ಪ್ರಮಾಣ ಕುಂಠಿತವಾಗುವುದಕ್ಕೆ ಕಾರಣ ತೊಗರಿ ದರ ಕುಸಿದಿರುವುದು. ಇದು ಸಹಜವಾಗಿಯೇ ರೈತರಲ್ಲಿ ಆತಂಕ ಸೃಷ್ಟಿಸಿದೆ.

ಸದ್ಯ ಮಾರುಕಟ್ಟೆಗಿಂದ ಸರ್ಕಾರದ ತೊಗರಿ ಖರೀದಿ ಕೇಂದ್ರಗಳಲ್ಲೇ ಹೆಚ್ಚಿನ ದರವಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್​ಗೆ 4 ಸಾವಿರದಿಂದ 5 ಸಾವಿರದವರೆಗೆ ಬೆಲೆ ಇದ್ದರೆ, ಸರ್ಕಾರದ ಖರೀದಿ ಕೇಂದ್ರದಲ್ಲಿ 6500 ರೂ. ಇದೆ. ಅದರಲ್ಲೂ ಖರೀದಿ ಕೇಂದ್ರಗಳಲ್ಲಿ ತೊಗರಿಯ ಗುಣಮಟ್ಟವನ್ನು ಪರೀಕ್ಷೆ ಮಾಡುವ ಮೂಲಕ ದರದಲ್ಲಿ ವ್ಯತ್ಯಾಸ ಮಾಡಲಾಗುತ್ತದೆ ಎಂದು ತೊಗರಿ ಬೆಳೆದ ರೈತ ಚಂದ್ರಶೇಖರ್ ಆರೋಪಿಸುತ್ತಿದ್ದಾರೆ.

ಸರ್ಕಾರ ಕೂಡ ಸೂಕ್ತ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಖರೀದಿ ಕೇಂದ್ರದಲ್ಲಿ ಹೆಚ್ಚಿನ ದರವಿದ್ದರೂ ಅದರಿಂದ ಯಾವ ಲಾಭಾನೂ ಇಲ್ಲ. ಬೀಜ, ಗೊಬ್ಬರ, ಆಳು-ಕಾಳು ಅಂತೆಲ್ಲಾ ಸೇರಿ ಎಕರೆಗೆ ಸುಮಾರು 20-30 ಸಾವಿರ ರೂಪಾಯಿ ಹಣ ಖರ್ಚಾಗುತ್ತದೆ. ಸರ್ಕಾರ ಕೊಡುವ 6500 ರೂಪಾಯಿ ಬರೀ ಗಾಡಿ ಬಾಡಿಗೆಗೆ ಸಾಕಾಗಲ್ಲ. ವಿಷ ಕುಡಿಯುವುದೊಂದೆ ಈಗ ಬಾಕಿ ನಮಗೆ ಎಂದು ರೈತ ನರಸಿಂಹ ಕಣ್ಣೀರಿಟ್ಟಿದ್ದಾರೆ.

ತೊಗರಿ ದರವನ್ನು ಕ್ವಿಂಟಲ್​ಗೆ ಕನಿಷ್ಠ 7 ಸಾವಿರದಿಂದ 8 ಸಾವಿರಕ್ಕೆ ಏರಿಸಬೇಕು. ಆಗ ಮಾತ್ರ ಮಾಡಿದ ಸಾಲ ತೀರತ್ತದೆ. ಇನ್ನೂ ಕೆಲ ತೊಗರಿಯ ಗುಣಮಟ್ಟ ವ್ಯತ್ಯಾಸವಾಗುವ ಕಾರಣ, ಅಕಾಲಿಕ ಮಳೆಯಿಂದಲೂ ಇದರಿಂದ ಬೆಳೆಗೆ ಹಾನಿಯಾಗಿ ಸಮಸ್ಯೆ ಎದುರಾಗಿದೆ. ಆ ಬಗ್ಗೆಯೂ ಗಮನ ಹರಿಸಿ ಸೂಕ್ತ ದರ ನಿಗದಿ ಪಡಿಸಿ ಎಂದು ತೊಗರಿ ಬೆಳೆದ ರೈತರು ಸರ್ಕಾರದ ಬಳಿ ಮನವಿ ಮಾಡಿದ್ದಾರೆ.

ವರದಿ: ಭೀಮೇಶ್ ಪೂಜಾರ್

ಇದನ್ನೂ ಓದಿ:

ಸರ್ಕಾರಿ ಬೆಂಬಲ ಬೆಲೆಯಡಿ ಇಂದಿನಿಂದ ತೊಗರಿ ಖರೀದಿ ಆರಂಭ

Farmers Protest: ಇಂದು ಸಂಜೆಯೊಳಗೆ ಗಡಿ ಬಿಟ್ಟು ಹೊರಡುವ ರೈತರು; ವಾಪಸ್​ ಆಗುವುದಕ್ಕೂ ಮೊದಲು ವಿಜಯ ದಿವಸ್​ ಆಚರಣೆ

Published On - 8:59 am, Sun, 6 February 22

ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ