ತೆಲಂಗಾಣ: ಸಿಆರ್ಪಿಎಫ್ ಎಸ್ಐಯನ್ನು ಗುಂಡು ಹಾರಿಸಿ ಕೊಂದು, ಅದೇ ಗನ್ನಿಂದ ಶೂಟ್ ಮಾಡಿಕೊಂಡ ಹೆಡ್ಕಾನ್ಸ್ಟೇಬಲ್
CRPF | Mulugu District: ಸಿಆರ್ಪಿಎಫ್ ಹೆಡ್ ಕಾನ್ಸ್ಟೇಬಲ್ ಒಬ್ಬ ಎಸ್ಐ ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ. ನಂತರ ತನ್ನ ಮೇಲೆ ಗುಂಡುಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತೆಲಂಗಾಣ: ಹೈದರಾಬಾದ್ನಿಂದ ಸುಮಾರು 285 ಕಿಮೀ ದೂರದಲ್ಲಿರುವ ಮುಲುಗು (Mulugu) ಜಿಲ್ಲೆಯ ವೆಂಕಟಾಪುರಂ ಗ್ರಾಮದಲ್ಲಿ ಸಿಆರ್‌ಪಿಎಫ್‌ನಲ್ಲಿ (CRPF) ಕೆಲಸ ಮಾಡುತ್ತಿದ್ದ ಒಬ್ಬ ಯೋಧ ತನ್ನ ಸಹದ್ಯೋಗಿ ಮೇಲೆ ಗುಂಡು ಹಾರಿಸಿದ್ದಾನೆ. ಅಲ್ಲದೇ ಅದೇ ಗನ್ನಿಂದ ತನ್ನ ಮೇಲೂ ಗುಂಡು ಹಾರಿಸಿಕೊಂಡಿದ್ದಾನೆ. ವೆಂಕಟಾಪುರಂ ಮಂಡಲ ಕೇಂದ್ರದ 39 ಬೆಟಾಲಿಯನ್ನಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ. ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗ್ರಾಮ್ ಸಿಂಗ್ ಪಿಟಿಐಗೆ ಮಾಹಿತಿ ನೀಡಿದ್ದು, ಸ್ಟೀಫನ್ ಎಂಬ ಹೆಡ್ಕಾನ್ಸ್ಟೇಬಲ್ ಮತ್ತು ಎಸ್ಐ ಉಮೇಶ್ ಚಂದ್ರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಸ್ಟೀಫನ್ ತನ್ನ ಗನ್ನಿಂದ ಉಮೇಶ್ ಚಂದ್ರ ಮೇಲೆ ಫೈರ್ ಮಾಡಿದ್ದಾನೆ. ನಂತರ ಅದೇ ಗನ್ನಿಂದ ಗುಂಡು ಹಾರಿಸಿಕೊಂಡು, ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದಿದ್ದಾರೆ.
ಘಟನೆಯಲ್ಲಿ ಎಸ್ಐ ಉಮೇಶ್ ಚಂದ್ರ ಸಾವನ್ನಪ್ಪಿದ್ದು, ಹೆಡ್ ಕಾನ್ಸ್ಟೇಬಲ್ ಸ್ಟೀಫನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಇದನ್ನೂ ಓದಿ:
ಉಡುಪಿ ಜಿಲ್ಲೆಯಲ್ಲಿ ಹೆಚ್ಚಿದ ಒಮಿಕ್ರಾನ್ ಭೀತಿ; ಶನಿವಾರ ಒಂದೇ ದಿನ 14 ಮಂದಿಗೆ ಸೋಂಕು ಧೃಡ
Published On - 11:11 am, Sun, 26 December 21