ಲುಧಿಯಾನ ನ್ಯಾಯಾಲಯ ಸ್ಫೋಟದಲ್ಲಿ ಪಾಕ್ ಮೂಲದ ಖಲಿಸ್ತಾನಿ ಉಗ್ರರ ಕೈವಾಡ

2008 ರಲ್ಲಿ ತರನ್ ತಾರನ್​​ನಲ್ಲಿ ವೈಯಕ್ತಿಕ ದ್ವೇಷದ ಮೇಲೆ ವ್ಯಕ್ತಿಯನ್ನು ಕೊಂದ ನಂತರ ಸಂಧುವನ್ನು ಮೊದಲ ಬಾರಿಗೆ ಬಂಧಿಸಲಾಯಿತು. ಈ ಕೊಲೆಗೆ ಜೀವಾವಧಿ ಶಿಕ್ಷೆ ವಿಧಿಸಿ ಪಂಜಾಬ್‌ನ ವಿವಿಧ ಜೈಲುಗಳಲ್ಲಿ ಸಂಧು ಶಿಕ್ಷೆ ಅನುಭವಿಸಿದ್ದಾನೆ. ಅಕ್ಟೋಬರ್ 2014 ರಲ್ಲಿ ನಭಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.

ಲುಧಿಯಾನ ನ್ಯಾಯಾಲಯ ಸ್ಫೋಟದಲ್ಲಿ ಪಾಕ್ ಮೂಲದ ಖಲಿಸ್ತಾನಿ ಉಗ್ರರ ಕೈವಾಡ
ಲುಧಿಯಾನ ಬಾಂಬ್ ಸ್ಫೋಟ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 26, 2021 | 12:25 PM

ದೆಹಲಿ: ಪಂಜಾಬ್‌ನ ಲುಧಿಯಾನದ ಸೆಷನ್ಸ್ ಕೋರ್ಟ್‌ನೊಳಗೆ (Ludhiana blast) ನಡೆದ ಸ್ಫೋಟದಲ್ಲಿ ಜರ್ಮನಿಯ (Germany) ಖಲಿಸ್ತಾನ್ ಪರ ಭಯೋತ್ಪಾದಕನೊಂದಿಗೆ (pro-Khalistan terrorist)ನಿರ್ಣಾಯಕ ಪಾತ್ರ ವಹಿಸಿದ್ದ ವ್ಯಕ್ತಿ ಪಾಕಿಸ್ತಾನ ಮೂಲದ ತೀವ್ರಗಾಮಿ ಭಯೋತ್ಪಾದಕ ಗುಂಪುಗಳು ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನಿಂದ ಆಶ್ರಯ ಪಡೆದಿದ್ದಾನೆ ಎಂದು ವರದಿಯಾಗಿದೆ. ‘ಎ’ ವರ್ಗದಲ್ಲಿ ವಾಟೆಂಡ್ ದರೋಡೆಕೋರ ಮತ್ತು ಖಲಿಸ್ತಾನಿ ತೀವ್ರಗಾಮಿ ಹರ್ವಿಂದರ್ ಸಿಂಗ್ ಸಂಧು (Harvinder Singh Sandhu) ಅಲಿಯಾಸ್ ರಿಂದಾ ಸಂಧು ಮತ್ತು ಜಸ್ವಿಂದರ್ ಸಿಂಗ್ ಮುಲ್ತಾನಿ ಜರ್ಮನಿ ಮೂಲದ ಖಲಿಸ್ತಾನ್ ಪರ ಭಯೋತ್ಪಾದಕರಿಗೆ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಪಂಜಾಬ್ ಅನ್ನು ಅಸ್ಥಿರಗೊಳಿಸಲು ಭಯೋತ್ಪಾದಕ ದಾಳಿಗಳನ್ನು ನಡೆಸಲು ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ವಹಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಗುಪ್ತಚರ ಮಾಹಿತಿಯ ಪ್ರಕಾರ ಸುಮಾರು 35 ವರ್ಷ ವಯಸ್ಸಿನ ಸಂಧು ತನ್ನ ಲುಕ್ ಬದಲಿಸುವ ಮೂಲಕ ನಕಲಿ ಗುರುತಿನ ಮೇಲೆ ಭಾರತೀಯ ಪಾಸ್‌ಪೋರ್ಟ್ ಅನ್ನು ಪಡೆದುಕೊಂಡ ನಂತರ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಎಂದು ಶಂಕಿಸಲಾಗಿದೆ. ಈತ ಲಾಹೋರ್‌ನಲ್ಲಿರುವ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ ಮುಖ್ಯಸ್ಥ ವಾಧವಾ ಸಿಂಗ್ ಅವರೊಂದಿಗೆ ಸಂಬಂಧ ಹೊಂದಿದ್ದಾನೆ.

ಪಂಜಾಬ್‌ನ ತರನ್ ತಾರನ್ ಜಿಲ್ಲೆಯ ಸರ್ಹಾಲಿ ಗ್ರಾಮದಿಂದ ಮಹಾರಾಷ್ಟ್ರದ ನಾಂದೇಡ್‌ಗೆ ವಲಸೆ ಬಂದಿರುವ ಸಂಧು, ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳ ದೊಡ್ಡ ಪ್ರಮಾಣದ ಗಡಿಯಾಚೆಗಿನ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಈತ ಪಂಜಾಬ್‌ನ ಮೋಸ್ಟ್ ವಾಂಟೆಡ್ A+ ವರ್ಗದ ದರೋಡೆಕೋರ. ಮಹಾರಾಷ್ಟ್ರ, ಚಂಡೀಗಢ, ಹರ್ಯಾಣ ಮತ್ತು ಪಶ್ಚಿಮ ಬಂಗಾಳ ಇತ್ಯಾದಿಗಳಲ್ಲಿಯೂ ವಾಂಟೆಡ್ ವ್ಯಕ್ತಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2008 ರಲ್ಲಿ ತರನ್ ತಾರನ್​​ನಲ್ಲಿ ವೈಯಕ್ತಿಕ ದ್ವೇಷದ ಮೇಲೆ ವ್ಯಕ್ತಿಯನ್ನು ಕೊಂದ ನಂತರ ಸಂಧುವನ್ನು ಮೊದಲ ಬಾರಿಗೆ ಬಂಧಿಸಲಾಯಿತು. ಈ ಕೊಲೆಗೆ ಜೀವಾವಧಿ ಶಿಕ್ಷೆ ವಿಧಿಸಿ ಪಂಜಾಬ್‌ನ ವಿವಿಧ ಜೈಲುಗಳಲ್ಲಿ ಸಂಧು ಶಿಕ್ಷೆ ಅನುಭವಿಸಿದ್ದಾನೆ. ಅಕ್ಟೋಬರ್ 2014 ರಲ್ಲಿ ನಭಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.

ತನ್ನ ಸಹೋದರನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು 2016ರಲ್ಲಿ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಲ್ಲಿ ಗುರುದ್ವಾರವೊಂದರ ಗ್ರಂಥಿಯನ್ನು ಕೊಂದು ಆತನ ದೇಹವನ್ನು ಕಾಲುವೆಗೆ ಬಿಸಾಡಿದ್ದ. ತನ್ನ ಸಹೋದರನ ಹತ್ಯೆಯ ಸೇಡು ತೀರಿಸಿಕೊಳ್ಳಲು ನಾಂದೇಡ್ ಮತ್ತು ಮಹಾರಾಷ್ಟ್ರದ ವಜೀರಾಬಾದ್‌ನಲ್ಲಿ ಇಬ್ಬರನ್ನು ಈತ ಹತ್ಯೆ ಮಾಡಿದ್ದ.

ತಲೆಮರೆಸಿಕೊಂಡಿರುವ ಆರೋಪಿ ಎಂದು ಈತನನ್ನು ಘೋಷಿಸಲಾಗಿದೆ.10 ಕೊಲೆಗಳು, 6 ಕೊಲೆ ಯತ್ನ ಪ್ರಕರಣಗಳು, 7 ಡಕಾಯಿತಿಗಳು ಮತ್ತು ದರೋಡೆ ಪ್ರಕರಣಗಳು ಸೇರಿದಂತೆ ಕನಿಷ್ಠ 30 ಕ್ರಿಮಿನಲ್ ಪ್ರಕರಣಗಳಲ್ಲಿ ಈತ ವಾಂಟೆಡ್ ವ್ಯಕ್ತಿ. ಅಪಹರಣ, ಸುಲಿಗೆಗಳು ಮತ್ತು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳು ಈತನ ಮೇಲಿದೆ.

2018 ರಲ್ಲಿ ಪಂಜಾಬಿ ಗಾಯಕ ಪರ್ಮಿಶ್ ವರ್ಮಾ ಅವರ ಮೇಲೆ ಗುಂಡಿನ ದಾಳಿ ನಡೆಸಿದ ದರೋಡೆಕೋರ ದಿಲ್‌ಪ್ರೀತ್ ಸಿಂಗ್ ಧಹನ್ ಅಲಿಯಾಸ್ ಬಾಬಾ ಬಂಧನದ ನಂತರ ಸಂಧು ತನ್ನ ಸಹಚರ, ಪಾಕಿಸ್ತಾನ ಮೂಲದ ಭಯೋತ್ಪಾದಕ ಮತ್ತು ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ಮುಖ್ಯಸ್ಥ ವಾಧವಾ ಸಿಂಗ್ ಬಬ್ಬರ್‌ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಬಹಿರಂಗಪಡಿಸಿದರು. ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಲಾಗಿದ್ದ , ಸಂಧು ಜೂನ್ 24, 2021 ರಂದು ವೆಬ್ ನ್ಯೂಸ್ ಚಾನೆಲ್ ಪ್ರೊ ಪಂಜಾಬ್‌ನಲ್ಲಿ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ:  Ludhiana Blast: ಲುಧಿಯಾನ ಕೋರ್ಟ್ ಸ್ಫೋಟದ ಹಿಂದೆ ಖಲಿಸ್ತಾನಿ, ಡ್ರಗ್ಸ್ ಸ್ಮಗ್ಲರ್ ಕೈವಾಡ ಪತ್ತೆ

Published On - 12:24 pm, Sun, 26 December 21

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ