ಪಾಟ್ನಾ: ಬಿಹಾರದಲ್ಲಿ ನಿರಂತರವಾಗಿ, ಸಿಕ್ಕಾಪಟೆ ಮಳೆ ಸುರಿಯುತ್ತಿದೆ. ಗುಡುಗು-ಮಿಂಚು ಸಹಿತ ಮಳೆಯಾಗುತ್ತಿದ್ದು, ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ನದಿಗಳು ತುಂಬಿ ಹರಿಯುತ್ತಿವೆ. ಮಣ್ಣು ಕುಸಿತ, ಮನೆ ಕುಸಿತದಂಥ ಅವಘಡಗಳು ಸಂಭವಿಸುತ್ತಿವೆ. ಭವಾನಿಪುರದ ಮೋತಿಹಾರದಲ್ಲಿ ನೋಡುನೋಡುತ್ತಿದ್ದಂತೆಯೇ ಮನೆಯೊಂದು ಕುಸಿದುಬಿದ್ದಿದೆ. ಆ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಅತಿಯಾದ ಮಳೆಯಿಂದಾಗಿ ಸಿಕ್ರಹ್ನಾ (ಬುರ್ಹಿ ಗಂಡಕ್) ನದಿಯ ನೀರಿನ ಮಟ್ಟ ಏರಿದೆ. ಇದರಿಂದಾಗಿ ನದಿ ದಡದಲ್ಲಿ ಮಣ್ಣಿನ ಸವಕಳಿ ಉಂಟಾಗುತ್ತಿದೆ. ನದಿ ದಡದಲ್ಲಿ ಇರುವ ಮನೆಗಳಿಗೆ ಇದು ಅಪಾಯ ತಂದೊಡ್ಡುತ್ತಿದೆ. ಇದೀಗ ಕುಸಿದು ಬಿದ್ದಿರುವ ಮನೆಯೂ ಕೂಡ ಸಿಕ್ರಹ್ನಾ ನದಿ ದಡದಲ್ಲಿಯೇ ಇದ್ದಿದ್ದಾಗಿತ್ತು. ಅತಿಯಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಈ ಮನೆ ತೀವ್ರವಾಗಿ ಹಾನಿಗೊಳಗಾದ ಹಿನ್ನೆಲೆಯಲ್ಲಿ, ಅದರಲ್ಲಿದ್ದ ನಿವಾಸಿಗಳು ಮನೆ ತೊರೆದಾಗಿತ್ತು. ಮನೆ ಕುಸಿದು ನದಿಗೆ ಬಿದ್ದು, ಅದರ ಭಗ್ನಾವಶೇಷಗಳೆಲ್ಲ ನದಿಯಲ್ಲಿ ತೇಲಿ ಹೋಗುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಬಿಹಾರದಲ್ಲಿ ಬುಧವಾರದವರೆಗೂ ಮಳೆ ಮುಂದುವರಿಯಲಿದೆ. ಹಾಗೇ, ಉತ್ತರಾಖಂಡ, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಅಸ್ಸಾಂ, ಮೇಘಾಲಯ, ರಾಯಲ್ಸೀಮಾ, ತಮಿಳುನಾಡು, ಪುದುಚೇರಿಗಳಲ್ಲಿ ಅತಿಯಾದ ಮಳೆಯಾಗಲಿದೆ ಎಂದು ಇಂದು ಹವಾಮಾನ ಇಲಾಖೆ ತಿಳಿಸಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರ್ಯಾಣ, ಚಂಡೀಗಢ್, ದೆಹಲಿ ಮತ್ತು ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿಟ್ ಬಲ್ಚೀಸ್ತಾನ್, ಉತ್ತರ ಪ್ರದೇಶ, ಛತ್ತೀಸ್ಗಢ, ನಾಗಾಲ್ಯಾಂಡ್, ಮಣಿಪುರದ ಕೆಲವು ಕಡೆ ಗುಡುಗು-ಮಿಂಚು-ಗಾಳಿ(30-40 ಕಿಮೀ ವೇಗ)ಸಹಿತ ಮಳೆ ಬೀಳಲಿದೆ ಎಂದೂ ಐಎಂಡಿ ಅಂದಾಜಿಸಿದೆ.
#WATCH | Bihar: A house collapses in Bhawanipur, Motihari as incessant rainfall leads to a rise in water level of Sikrahna (Burhi Gandak) river, leading to soil erosion at river banks. The house was damaged due to heavy rainfall and unoccupied at the time of the incident. pic.twitter.com/JVRwcnr9xI
— ANI (@ANI) July 4, 2021
ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್ಗೆ ಸ್ವಾತಂತ್ರ್ಯ ದಿನದ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ
A house collapses Due to Heavy Rainfall in Bhawanipur Of Bihar
Published On - 3:24 pm, Sun, 4 July 21