ಈ ಬಾರಿ ಭಾರತ ರತ್ನ ಪುರಸ್ಕಾರವನ್ನು ದೇಶದ ಎಲ್ಲ ವೈದ್ಯರು, ನರ್ಸ್​ಗಳಿಗೆ ನೀಡಬೇಕು; ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಒತ್ತಾಯ

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್​, ಭಾರತೀಯ ವೈದ್ಯರಿಗೆ (Indian doctor) ಈ ಬಾರಿ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕು ಎಂದಿದ್ದಾರೆ. ಅಂದರೆ ಭಾರತೀಯ ವೈದ್ಯರು ಅಂದರೆ ಇಡೀ ಆರೋಗ್ಯ ಕ್ಷೇತ್ರವನ್ನು ಇಲ್ಲಿ ಉಲ್ಲೇಖಿಸಿದ್ದಾರೆ.

ಈ ಬಾರಿ ಭಾರತ ರತ್ನ ಪುರಸ್ಕಾರವನ್ನು ದೇಶದ ಎಲ್ಲ ವೈದ್ಯರು, ನರ್ಸ್​ಗಳಿಗೆ ನೀಡಬೇಕು; ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಒತ್ತಾಯ
ಅರವಿಂದ ಕೇಜ್ರಿವಾಲ್
Follow us
TV9 Web
| Updated By: Lakshmi Hegde

Updated on: Jul 04, 2021 | 1:45 PM

ದೆಹಲಿ: ಈ ಬಾರಿ ಕೊವಿಡ್​ 19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡಿದ ದೇಶದ ಆರೋಗ್ಯ ಕ್ಷೇತ್ರದ ಎಲ್ಲ ವೈದ್ಯರು, ನರ್ಸ್​​ಗಳು, ಪ್ಯಾರಾಮೆಡಿಕಲ್​ ಸಿಬ್ಬಂದಿಗೆ ಪ್ರಸಕ್ತ ವರ್ಷ ದೇಶದ ಉನ್ನತ ಗೌರವವಾದ ಭಾರತ ರತ್ನ ಪುರಸ್ಕಾರ ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಒತ್ತಾಯಿಸಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್​, ಭಾರತೀಯ ವೈದ್ಯರಿಗೆ (Indian doctor) ಈ ಬಾರಿ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಬೇಕು ಎಂದಿದ್ದಾರೆ. ಅಂದರೆ ಭಾರತೀಯ ವೈದ್ಯರು ಅಂದರೆ ಇಡೀ ಆರೋಗ್ಯ ಕ್ಷೇತ್ರವನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ಕೊರೊನಾ ಸೋಂಕಿನ ವಿರುದ್ಧ ಆರೋಗ್ಯ ಸಿಬ್ಬಂದಿ ಹಗಲಿರುಳೂ ಶ್ರಮಿಸಿದ್ದಾರೆ. ತಮ್ಮ ಜೀವ, ಜೀವನವನ್ನೂ ಲೆಕ್ಕಿಸದೆ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಾರೆ. ಇದು ಇಡೀ ದೇಶಕ್ಕೆ ಹೆಮ್ಮೆ ತಂದಿದೆ. ಹಾಗಾಗಿ ಅವರಿಗೆ ಭಾರತ ರತ್ನ ನೀಡಬೇಕು. ಹಾಗಾದಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದು ಅರವಿಂದ್ ಕೇಜ್ರಿವಾಲ್​ ಹೇಳಿದ್ದಾರೆ.

ವೈದ್ಯರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಈ ಬಾರಿಯ ರಾಷ್ಟ್ರೀಯ ವೈದ್ಯರ ದಿನದಂದು ಪ್ರಧಾನಿ ನರೇಂದ್ರ ಮೋದಿಯವರೂ ವೈದ್ಯರನ್ನು ಹೊಗಳಿದ್ದಾರೆ. ಕೊರೊನಾ ಸಾಂಕ್ರಾಮಿಕದ ಹೊತ್ತಲ್ಲಿ ಅನೇಕರ ಜೀವ ಕಾಪಾಡಿದ ಹೆಗ್ಗಳಿಕೆಗೆ ವೈದ್ಯರು ಪಾತ್ರರಾಗಿದ್ದಾರೆ. ವೈದ್ಯರ ಕೊಡುಗೆಯನ್ನು ಮರೆಯುವಂತಿಲ್ಲ ಎಂದು ಹೇಳಿದ್ದಾರೆ. ಹಾಗೇ, ರಾಷ್ಟ್ರೀಯ ವೈದ್ಯರ ದಿನದಂದು ಕೊರೊನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡಿದ ಹಲವು ವೈದ್ಯಕೀಯ ಸಿಬ್ಬಂದಿ ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.

2ನೇ ಅಲೆಯಲ್ಲಿ ಜೀವಕಳೆದುಕೊಂಡವರೆಷ್ಟು? ಕೊರೊನಾ ಎರಡನೇ ಅಲೆಯಲ್ಲಿ ದೇಶಾದ್ಯಂತ 798 ವೈದ್ಯರು ಇದೇ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯ ಮಂಡಳಿ ತಿಳಿಸಿದೆ. ಅದರಲ್ಲಿ ಅತಿ ಹೆಚ್ಚು ಅಂದರೆ 128 ವೈದ್ಯರು ದೆಹಲಿಯಲ್ಲೇ ಸಾವನ್ನಪ್ಪಿದ್ದಾರೆ. ಬಿಹಾರದಲ್ಲಿ 115, ಉತ್ತರ ಪ್ರದೇಶದಲ್ಲಿ 79, ಪಶ್ಚಿಮ ಬಂಗಾಳದಲ್ಲಿ 62 ಮತ್ತು ತಮಿಳುನಾಡಿನಲ್ಲಿ 51 ವೈದ್ಯರು ಮೃತಪಟ್ಟಿದ್ದಾರೆ. ಅದೇ ಕೊರೊನಾ ಮೊದಲ ಅಲೆಯಲ್ಲಿ 736 ವೈದ್ಯರು ಸೋಂಕಿನಿಂದ ಜೀವ ಕಳೆದುಕೊಂಡಿದ್ದರು.

ಇದನ್ನೂ ಓದಿ: ರಾಜಸ್ಥಾನದ ರಾಜ್ಯಪಾಲರ ಜೀವನ ಚರಿತ್ರೆ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದ ವಿಶ್ವವಿದ್ಯಾಲಯಗಳ ಕುಲಪತಿಗಳು ಹಿಂತಿರುಗುವಾಗ ಸಿಕ್ಕಿದ್ದು ಪುಸ್ತಕದ 19 ಪ್ರತಿ, ₹68,383 ಬಿಲ್

Delhi Chief Minister Arvind Kejriwal demands Bharat Ratna for healthcare professionals