Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಸಂಸದರ ಭೇಟಿಗೆ ಅನುಮತಿ ನಿರಾಕರಿಸಿದ ಲಕ್ಷದ್ವೀಪ ಆಡಳಿತ

Lakshadweep: ರಾಜಕೀಯ ಚಟುವಟಿಕೆಗಳಿಗಾಗಿ ಕಾಂಗ್ರೆಸ್ ಸಂಸದರ ಭೇಟಿ ಖಂಡಿತವಾಗಿಯೂ "ಶಾಂತ, ಶಾಂತಿಯುತ ವಾತಾವರಣವನ್ನು ಭಂಗಗೊಳಿಸುತ್ತದೆ". ಇದು ಸಾರ್ವಜನಿಕರ, ಪರಿಶಿಷ್ಟ ಪಂಗಡದವರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದ ಲಕ್ಷದ್ವೀಪ ಆಡಳಿತ.

ಕಾಂಗ್ರೆಸ್ ಸಂಸದರ ಭೇಟಿಗೆ ಅನುಮತಿ ನಿರಾಕರಿಸಿದ ಲಕ್ಷದ್ವೀಪ ಆಡಳಿತ
ಪ್ರಫುಲ್ ಪಟೇಲ್ (ಕೃಪೆ: ಫೇಸ್ ಬುಕ್)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 04, 2021 | 2:36 PM

ದೆಹಲಿ: ಲಕ್ಷದ್ವೀಪಕ್ಕೆ ಕಾಂಗ್ರೆಸ್ ಸಂಸತ್ ಸದಸ್ಯರ ತಂಡ ಭೇಟಿ ನೀಡುವುದಕ್ಕೆ ಅಲ್ಲಿನ ಆಡಳಿತ ಅನುಮತಿ ನಿರಾಕರಿಸಿದೆ. ಪೊಲೀಸ್ ವರದಿಯ ಪ್ರಕಾರ ಕಾಂಗ್ರೆಸ್ ಸಂಸದರ ಭೇಟಿಯು ಹಿಂಸಾತ್ಮಕ ಚಳವಳಿಯನ್ನು ಪ್ರಚೋದಿಸಬಹುದು, ಇದು ಶಾಂತಿಯನ್ನು ಹಾಳುಮಾಡುವ ಯೋಜಿತ ಪ್ರಯತ್ನದ ಭಾಗವಾಗಿದೆ. ಲಕ್ಷದ್ವೀಪದ ನೂತನ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ಸರಣಿ ವಿವಾದಾತ್ಮಕ ಆದೇಶಗಳಿಂದ ಅಶಾಂತಿ ನೆಲೆಸಿರುವ ದ್ವೀಪಕ್ಕೆ ಭೇಟಿ ನೀಡಲು ಕಾಂಗ್ರೆಸ್ ಸಂಸದರಾದ ಹೈಬಿ ಈಡನ್, ಟಿ.ಎನ್.ಪ್ರತಾಪನ್, ಸಿ.ಆರ್.ರಾಕೇಶ್ ಶರ್ಮಾ ಅನುಮತಿ ಕೋರಿದ್ದರು. ರಾಜಕೀಯ ಚಟುವಟಿಕೆಗಳಿಗಾಗಿ ಕಾಂಗ್ರೆಸ್ ಸಂಸದರ ಭೇಟಿ ಖಂಡಿತವಾಗಿಯೂ “ಶಾಂತ, ಶಾಂತಿಯುತ ವಾತಾವರಣವನ್ನು ಭಂಗಗೊಳಿಸುತ್ತದೆ”. ಇದು ಸಾರ್ವಜನಿಕರ, ಪರಿಶಿಷ್ಟ ಪಂಗಡದವರ ಹಿತಾಸಕ್ತಿಗೆ ವಿರುದ್ಧವಾಗಿದೆ.ಸಾರ್ವಜನಿಕ ಸುವ್ಯವಸ್ಥೆ ಮತ್ತು ಕೇಂದ್ರ ಪ್ರದೇಶದ ಭದ್ರತೆಗೆ ವಿರುದ್ಧವಾಗಿರುತ್ತದೆ. ಮುಖ್ಯ ಭೂಭಾಗದ ಜನರ ಭೇಟಿಯೊಂದಿಗೆ ಕೊವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯನ್ನೂ ಉಲ್ಲೇಖಿಸಿ ಲಕ್ಷದ್ವೀಪ ಆಡಳಿತ ಕಾಂಗ್ರೆಸ್ ಸದಸ್ಯರ ಭೇಟಿಗೆ ನಿರಾಕರಿಸಿದೆ.

“ಲಕ್ಷದ್ವೀಪವು ನಿಗದಿತ ಪ್ರದೇಶವಾಗಿದೆ ಮತ್ತು ಇಡೀ ಸ್ಥಳೀಯ ಜನಸಂಖ್ಯೆಯು ಪರಿಶಿಷ್ಟ ಪಂಗಡವಾಗಿದೆ, ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಆಡಳಿತದ ಕರ್ತವ್ಯ ಮತ್ತು ಬಾಹ್ಯ ಹಸ್ತಕ್ಷೇಪದಿಂದಾಗಿ ತೊಂದರೆ ಉಂಟಾಗದಂತೆ ನೋಡಿಕೊಳ್ಳಿ” ಎಂದು ಆಡಳಿತವು ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

ಲಕ್ಷದ್ವೀಪಕ್ಕೆ ಭೇಟಿ ನೀಡಲು ಅನುಮತಿ ಕೋರಿ ಕಾಂಗ್ರೆಸ್ ಮತ್ತು ಎಡಪಕ್ಷದ ಸಂಸದರು ಈ ಹಿಂದೆ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಜೂನ್ 14 ರಂದು ಕಪ್ಪು ಬಾವುಟ ಪ್ರತಿಭಟನೆಯ ನಡುವೆ ದ್ವೀಪ ತಲುಪಿದ್ದರು.

ಕಳೆದ ತಿಂಗಳುಗಳಲ್ಲಿ ಪಟೇಲ್ ಅವರ ಆದೇಶಗಳ ವಿರುದ್ಧ ಆನ್‌ಲೈನ್‌ನಲ್ಲಿ ಮತ್ತು ಲಕ್ಷದ್ವೀಪದಲ್ಲಿ ಪ್ರತಿಭಟನೆಗಳು ನಡೆದಿವೆ. ಇತ್ತೀಚೆಗೆ, ಹೈಕೋರ್ಟ್ ಅವರ ಕೆಲವು ಪ್ರಸ್ತಾಪಗಳಿಗೆ ಮಧ್ಯಂತರ ತಡೆ ನೀಡಿದ್ದು ಸರಣಿ ಮೇಲ್ಮನವಿಗಳನ್ನು ಆಲಿಸಿತ್ತು.

ಕೋಳಿ, ಗೋಮಾಂಸ ಮತ್ತು ಇತರ ಮಾಂಸವನ್ನು ಶಾಲಾ ಮೆನುವಿನಿಂದ ತೆಗೆದುಹಾಕುವುದು ಮತ್ತು ಡೈರಿ ಫಾರಂಗಳನ್ನು ಮುಚ್ಚುವ ಪಟೇಲ್ ಆದೇಶಕ್ಕೆ ವ್ಯಾಪಕ ಪ್ರತಿಭಟನೆ ನಡೆದಿತ್ತು.

ಕಾಂಗ್ರೆಸ್ ಅಲ್ಲದೆ, ಸಿಪಿಎಂ, ಡಿಎಂಕೆ ಮತ್ತು ಇತರ ಪಕ್ಷಗಳು, ದ್ವೀಪ ಸಮೂಹದಲ್ಲಿ ಬಿಜೆಪಿಯ ಹಲವಾರು ಸದಸ್ಯರು ಈ ಕ್ರಮಗಳನ್ನು ವಿರೋಧಿಸಿದ್ದಾರೆ. ಕೇರಳದಲ್ಲೂ ಪ್ರತಿಭಟನೆಗಳು ಪ್ರತಿಧ್ವನಿಸಿವೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪಟೇಲ್ ಅವರನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರು. ವಿವಾದಾತ್ಮಕ ಆದೇಶಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಕೇರಳವಿಧಾನಸಭೆಯು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತ್ತು.

ಇದನ್ನೂ ಓದಿ: Lakshadweep ಡೈರಿ ಫಾರಂಗಳನ್ನು ಮುಚ್ಚಲು ಮತ್ತು ಶಾಲಾ ಮಕ್ಕಳ ಊಟದ ಮೆನುನಿಂದ ಮಾಂಸಾಹಾರ ತೆಗೆದುಹಾಕುವ ಲಕ್ಷದ್ವೀಪ ಆಡಳಿತದ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ

ಇದನ್ನೂ ಓದಿ:  Save Lakshadweep ಲಕ್ಷದ್ವೀಪದಲ್ಲಿ ಬೀಫ್ ನಿಷೇಧ, ಗೂಂಡಾ ಕಾಯ್ದೆ, ಮದ್ಯ ಮಾರಾಟಕ್ಕೆ ಅನುಮತಿ: ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಿರ್ಧಾರಕ್ಕೆ ಜನರ ಆಕ್ರೋಶ

(Lakshadweep administration has refused to grant permission to a group of Congress MP’s visit the islands)

Published On - 2:34 pm, Sun, 4 July 21

ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು