ರಾಜಸ್ಥಾನದ ರಾಜ್ಯಪಾಲರ ಜೀವನ ಚರಿತ್ರೆ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದ ವಿಶ್ವವಿದ್ಯಾಲಯಗಳ ಕುಲಪತಿಗಳು ಹಿಂತಿರುಗುವಾಗ ಸಿಕ್ಕಿದ್ದು ಪುಸ್ತಕದ 19 ಪ್ರತಿ, ₹68,383 ಬಿಲ್

Governor Kalraj Mishra's Biography: 116 ನೇ ಪುಟದಲ್ಲಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಫೋಟೋವಿದೆ.ಹಿನ್ನೆಲೆಯಲ್ಲಿ ಬಿಜೆಪಿಯ ಚಿಹ್ನೆಯ ಕಮಲವಿದೆ. ನಾವು‘ ಹೊಸ ಭಾರತ ’ನಿರ್ಮಿಸುವ ಆಂದೋಲನವನ್ನು ಬೆಂಬಲಿಸೋಣ. ಪಕ್ಷಕ್ಕೆ ಸೇರಿ ಮತ್ತು ಈ ಕಾರ್ಯಾಚರಣೆಯಲ್ಲಿ ನಮ್ಮ ಕೈಗಳನ್ನು ಬಲಪಡಿಸಿ. ಏಕ್ ಭಾರತ್ ಶ್ರೇಷ್ಠ ಭಾರತ್ ಎಂದು ಅಲ್ಲಿ ಬರೆದಿದೆ.

ರಾಜಸ್ಥಾನದ ರಾಜ್ಯಪಾಲರ ಜೀವನ ಚರಿತ್ರೆ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದ ವಿಶ್ವವಿದ್ಯಾಲಯಗಳ ಕುಲಪತಿಗಳು ಹಿಂತಿರುಗುವಾಗ ಸಿಕ್ಕಿದ್ದು ಪುಸ್ತಕದ 19 ಪ್ರತಿ, ₹68,383 ಬಿಲ್
ಕಲ್​​ರಾಜ್ ಮಿಶ್ರಾ ಜೀವನ ಚರಿತ್ರೆ ಲೋಕಾರ್ಪಣೆ ( ಕೃಪೆ: ಟ್ವಿಟರ್)
Follow us
ರಶ್ಮಿ ಕಲ್ಲಕಟ್ಟ
|

Updated on: Jul 04, 2021 | 1:04 PM

ಜೈಪುರ: ಜುಲೈ 1 ರಂದು, ರಾಜ್ಯಪಾಲ ಕಲ್​​ರಾಜ್ ಮಿಶ್ರಾ ಅವರ 80 ನೇ ಹುಟ್ಟುಹಬ್ಬದ ದಿನ ಅವರ ಜೀವನ ಚರಿತ್ರೆ ಬಿಡುಗಡೆ ಮಾಡಿದ ನಂತರ ರಾಜಸ್ಥಾನದ 27 ರಾಜ್ಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಅವರೊಂದಿಗೆ ಸಭೆ ನಡೆಸಿ ನಂತರ ಹಿಂತಿರುಗಿದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಪ್ರತಿಯೊಬ್ಬರ ವಾಹನಗಳಲ್ಲಿ ಎರಡು ಪೆಟ್ಟಿಗೆ ತುಂಬ ಪುಸ್ತಕ, ಜತೆಗೆ ಬಿಲ್ ಕೂಡಾ ಇತ್ತು. ರಾಜ್ಯಪಾಲರ ಜೀವನಚರಿತ್ರೆಯ 19 ಪ್ರತಿಗಳಿಗೆ 68,383 ರೂ. ಬಿಲ್ ಬಂದಿತ್ತು. ಹಾರ್ಡ್‌ಕವರ್ ಕಾಫಿ ಟೇಬಲ್ ರೂಪದಲ್ಲಿ ನಿಮಿತ್ ಮಾತ್ರಾ ಹೂಂ ಮೇ (ನಾನು ಕೇವಲ ಮಾಧ್ಯಮ). ಜೀವನಚರಿತ್ರೆಯ ಒಂದು ಹೆಚ್ಚುವರಿ ಪ್ರತಿ ಉಚಿತವಾಗಿತ್ತು.

ರಾಜ್ಯಪಾಲರೊಂದಿಗಿನ ಸಭೆಯಲ್ಲಿ ಯಾರೋ ನಮ್ಮ ಚಾಲಕರ ಹೆಸರು ಮತ್ತು ಸಂಖ್ಯೆಯನ್ನು ತೆಗೆದುಕೊಂಡರು. ಬಹುಶಃ ಅವರಿಗೆ ಆಹಾರ ಮತ್ತು ನೀರನ್ನು ಕೊಡುವುದು ಎಂದು ನಾವು ಭಾವಿಸಿದ್ದೆವು ”ಎಂದು ಹೆಸರು ಹೇಳಲು ಬಯಸದ ಉಪಕುಲಪತಿಯೊಬ್ಬರು ಸಂಡೇ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದು ಈ ಕಾರ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

ಒಮ್ಮೆ ನಾವು ನಮ್ಮ ಮನೆ ಮತ್ತು ಕಚೇರಿಗಳನ್ನು ತಲುಪಿದಾಗ ಇನ್ನೊಂದು ಅಚ್ಚರಿ ಕಾಯುತ್ತಿತ್ತು. ನಮಗೆ ನೀಡಲಾದ ಬಿಲ್​​ನಲ್ಲಿ ಐದು ಪುಸ್ತಕಗಳ ಹೆಸರು ಇದ್ದರೂ ಪೆಟ್ಟಿಗೆಯಲ್ಲಿದ್ದದ್ದು ಜೀವನಚರಿತ್ರೆಯ ಪ್ರತಿಗಳನ್ನು ಮಾತ್ರ ಆಗಿತ್ತು ಎಂದು ಅವರು ಹೇಳಿದರು.

ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಪ್ರಕಾರ 19 ಪುಸ್ತಕಗಳಿಗೆ ತಲಾ 3,999 ರೂ.ಗಳನ್ನು ಎಂದು ಹೇಳಿದ್ದು ಒಟ್ಟು 75,981 ರೂ ಆಗಿದೆ. ಶೇಕಡಾ 10 ರ ರಿಯಾಯಿತಿಯ ನಂತರ ಒಟ್ಟು 68,383 ರೂ.

ಮಿಶ್ರಾ ಅವರ ದೀರ್ಘಕಾಲದ ಒಎಸ್​​ಡಿ ಗೋವಿಂದ್ ರಾಮ್ ಜೈಸ್ವಾಲ್ ಅವರ ಸಹ-ಲೇಖಕರಾಗಿರುವ ಆತ್ಮಕಥೆ ಇದಾಗಿದ್ದು, ಮಾರಾಟದಿಂದ ಬರುವ ಆದಾಯವನ್ನು ರಾಜಸ್ಥಾನ ಮತ್ತು ಸಾಮಾಜಿಕ ವಿಜ್ಞಾನದ ಸಂಶೋಧನಾ ಯೋಜನೆಗಳಿಗೆ ಖರ್ಚು ಮಾಡಲಾಗುವುದು. ಯಾವುದೇ ವ್ಯಕ್ತಿ ವೈಯಕ್ತಿಕ ಲಾಭಕ್ಕಾಗಿ ಬಳಸುವುದಿಲ್ಲ ಎಂದು ಹೇಳಲಾಗಿದೆ.

“ರಾಜಸ್ಥಾನ್ ಟ್ರಾನ್ಸ್ ಪರೆನ್ಸಿ ಇನ್ ಪಬ್ಲಿಕ್ ಪ್ರೊಕ್ಯೂರ್ಮೆಂಟ್ (RTPP) ಕಾಯ್ದೆ, 2012 ರಲ್ಲಿ ಸಂಗ್ರಹಣೆಯ ನಿಯಮಗಳನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಏಕಪಕ್ಷೀಯ ರೀತಿಯಲ್ಲಿ ವಿಶ್ವವಿದ್ಯಾಲಯಗಳಿಗೆ ಹೇಗೆ ಪುಸ್ತಕದ ಹೊರೆಹೊರೆಸಲಾಗುತ್ತದೆ? ರಾಜ್ಯದ 27 ವಿಶ್ವವಿದ್ಯಾನಿಲಯಗಳು ತಾಂತ್ರಿಕ, ಆರೋಗ್ಯ, ಕೃಷಿ, ಪಶುವೈದ್ಯಕೀಯ, ಕಾನೂನು ಮುಂತಾದ ಕ್ಷೇತ್ರಗಳಲ್ಲಿ ಪರಿಣತಿ ಪಡೆದಿವೆ. ಪ್ರತಿ ವಿಶ್ವವಿದ್ಯಾಲಯಕ್ಕೆ ಇಷ್ಟು ಪುಸ್ತಕಗಳಿಗೆ ಇಷ್ಟು ಬಿಲ್ ಯಾಕೆ ಹಾಕಬೇಕು.ನಾವು ಯಾವ ರೀತಿಯಲ್ಲಿ ವೆಚ್ಚ ಭರಿಸಬೇಕು ಎಂದು ಕುಲಪತಿಯೊಬ್ಬರು ಪ್ರಶ್ನಿಸಿದ್ದಾರೆ.

ಜೀವನಚರಿತ್ರೆಯ ಪ್ರತಿಗಳನ್ನು ಹಸ್ತಾಂತರಿಸಿದ ವಿಧಾನದ ಬಗ್ಗೆ ಕೇಳಿದಾಗ, ರಾಜ್ಯಪಾಲರ ಕಾರ್ಯದರ್ಶಿ ಸುಬೀರ್ ಕುಮಾರ್ ಕುಲಪತಿಗಳು ಅಸಂಬದ್ಧ ಮಾತನಾಡುತ್ತಿದ್ದಾರೆ ಅವರು ಹೇಳುತ್ತಿರುವುದುದು ತಪ್ಪು ಮತ್ತು ಆಧಾರರಹಿತವಾಗಿದೆ ಎಂದಿದ್ದಾರೆ.

ಜೀವನಚರಿತ್ರೆಯು ಆರ್​​​ಎಸ್ಎಸ್ ಜೊತೆ ಮಿಶ್ರಾ ಅವರ ದೀರ್ಘಕಾಲದ ಒಡನಾಟವನ್ನು ವಿವರಿಸುತ್ತದೆ. ಜನ ಸಂಘ ಮತ್ತು ಬಿಜೆಪಿ, ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮುನ್ನುಡಿಯನ್ನು ಹೊಂದಿದೆ. ಇದರ ಹಿಂದಿನ ಪುಟದಲ್ಲಿ ಅಧ್ಯಕ್ಷ ರಾಮನಾಥ್ ಕೋವಿಂದ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿಮರ್ಶೆಗಳಿವೆ, ಅವರು ಇದನ್ನು “ಶಾಂದಾರ್ ಕೃತಿ (ಅದ್ಭುತ ಕೃತಿ)” ಎಂದು ಹೇಳುತ್ತಾರೆ ಎಂದಿದ್ದಾರೆ ಸುಬೀರ್ ಕುಮಾರ್.

116 ನೇ ಪುಟದಲ್ಲಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಫೋಟೋವಿದೆ.ಹಿನ್ನೆಲೆಯಲ್ಲಿ ಬಿಜೆಪಿಯ ಚಿಹ್ನೆಯ ಕಮಲವಿದೆ. ನಾವು‘ ಹೊಸ ಭಾರತ ’ನಿರ್ಮಿಸುವ ಆಂದೋಲನವನ್ನು ಬೆಂಬಲಿಸೋಣ. ಪಕ್ಷಕ್ಕೆ ಸೇರಿ ಮತ್ತು ಈ ಕಾರ್ಯಾಚರಣೆಯಲ್ಲಿ ನಮ್ಮ ಕೈಗಳನ್ನು ಬಲಪಡಿಸಿ. ಏಕ್ ಭಾರತ್ ಶ್ರೇಷ್ಠ ಭಾರತ್ ಎಂದು ಅಲ್ಲಿ ಬರೆದಿದೆ.

ಇದು ರಾಜ್ಯಪಾಲರ ಹುದ್ದೆಯ ಘನತೆಗೆ ವಿರುದ್ಧವಾಗಿದೆ ಎಂದು ಕುಲಪತಿ ಹೇಳಿದ್ದಾರೆ. “ರಾಜ್ಯಪಾಲರು ಆರ್‌ಎಸ್‌ಎಸ್ ಮತ್ತು ಬಿಜೆಪಿಯೊಂದಿಗೆ ಬಹಳ ಹಿಂದಿನಿಂದಲೂ ಸಂಬಂಧ ಹೊಂದಿದ್ದಾರೆ.ಆದರೆ ಅವರ ಹಿಂದಿನ ಪಕ್ಷವನ್ನು ಪ್ರಚಾರ ಮಾಡುವುದು ಕುಲಪತಿ ಕಚೇರಿಯಿಂದ ಸರಿಯಲ್ಲ ಎಂದಿದ್ದಾರೆ. ರಾಜ್ಯದ ರಾಜ್ಯಪಾಲರು ಕೂಡಾ ವಿಶ್ವವಿದ್ಯಾಲಯಗಳ ಕುಲಪತಿಯಾಗಿದ್ದಾರೆ.

ಬಿಜೆಪಿಯನ್ನು ಬೆಂಬಲಿಸುವಂತೆ ತೋರುವ ಜೀವನಚರಿತ್ರೆಯಲ್ಲಿನ ವಿಷಯಗಳ ಬಗ್ಗೆ ಕೇಳಿದಾಗ, ರಾಜ್ಯಪಾಲರ ಕಾರ್ಯದರ್ಶಿ, “ಪುಸ್ತಕವನ್ನು ಬರೆದವರಿಗೆ ಅದು ತಿಳಿದಿರುತ್ತದೆ. ನಾನು ಅದನ್ನು ಬರೆದಿಲ್ಲ, ಓದಿಲ್ಲ. ”

ಮತ್ತೊಂದು ಕುಲಪತಿ ಈ ಬಗ್ಗೆ ಮಾತನಾಡಿದ್ದು ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳುತ್ತಾರೆ. “ನಾನು ಪುಸ್ತಕವನ್ನು ನೋಡಿಲ್ಲ. ಆದರೆ ಗೌರವಾನ್ವಿತ ರಾಜ್ಯಪಾಲರ ಬಗ್ಗೆ ಪುಸ್ತಕ ಬರೆಯಲಾಗಿದ್ದರೆ, ಅದು ವಿಶ್ವವಿದ್ಯಾನಿಲಯಗಳನ್ನು ತಲುಪಬೇಕು, ಆದರೂ ಅವರ ದರವು ಬೇರೆ ಸಮಸ್ಯೆಯಾಗಬಹುದು. (ವಿಷಯಗಳಿಗೆ ಸಂಬಂಧಿಸಿದಂತೆ) ಮಿಶ್ರಾ ಈಗ ಮಾತ್ರ ರಾಜ್ಯಪಾಲರಾಗಿದ್ದಾರೆ. ಆದರೆ ಪುಸ್ತಕದಲ್ಲಿ ಅವರ ಇಡೀ ಜೀವನದ ಬಗ್ಗೆ ಇದೆ ಎಂದಿದ್ದಾರೆ.

ಕುಲಪತಿಗಳಿಗೆ ನೀಡಿದ ಬಿಲ್​​ನಲ್ಲಿ ಜೈಪುರದ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಎಂಟರ್ಪ್ರೆನ್ಯೂರ್ಶಿಪ್ ((IIME) ಯ ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ಹಣ ಇಲ್ಲಿ ಪಾವತಿಸಬೇಕೆಂದು ಸೂಚಿಸುತ್ತದೆ. ಆತ್ಮಕಥೆಯಲ್ಲಿ ರಾಜ್ಯಪಾಲರ ಒಎಸ್‌ಡಿ ಸಹ-ಲೇಖಕ ಡಾ. ಡಿ ಕೆ ತಕ್ನೆಟ್, ಇವರು ಐಐಎಂಇಯೊಂದಿಗೆ ಬಹಳ ಹಿಂದಿನಿಂದಲೂ ಸಂಬಂಧ ಹೊಂದಿದ್ದಾರೆ. ಪುಸ್ತಕದ “ಪ್ರಮುಖ ಸಂಶೋಧಕ” ತಕ್ನೆಟ್ ಅವರ ಪತ್ನಿ ಸುಜಾತಾ ತಕ್ನೆಟ್, ಇವರು ಐಐಎಂಇ ಜೊತೆ ಸಂಬಂಧ ಹೊಂದಿದ್ದಾರೆ. ಐಐಎಂಇ ತನ್ನನ್ನು “ಸ್ವಾಯತ್ತ ಸಂಸ್ಥೆ ಮತ್ತು ಲಾಭೋದ್ದೇಶವಿಲ್ಲದ ಸಂಸ್ಥೆ” ಮತ್ತು “ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯಾದ ರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸ್ಥೆ” ಎಂದು ವ್ಯಾಖ್ಯಾನಿಸುತ್ತದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಸಂಶೋಧನಾ ಸಂಸ್ಥೆ ರಾಜ್ಯಪಾಲರ ಮೇಲೆ ಕಾಫಿ ಟೇಬಲ್ ಪುಸ್ತಕವನ್ನು ವಿಜ್ಞಾನ ಸಂಶೋಧನೆಯಾಗಿ ಹೇಗೆ ಪ್ರಕಟಿಸುತ್ತಿದೆ” ಎಂದು ಕುಲಪತಿಯೊಬ್ಬರು ಪ್ರಶ್ನಿಸಿದ್ದಾರೆ.

ಪ್ರಾಸಂಗಿಕವಾಗಿ, ಜೈಪುರದ ಕುಲಪತಿಗಳಿಗೆ ನೀಡಿರುವ ಬಿಲ್ ನಲ್ಲಿ ಉಲ್ಲೇಖಿಸಲಾದ ಎರಡು ಪುಸ್ತಕಗಳು: ಜೆಮ್ ಆಫ್ ಇಂಡಿಯಾ ಮತ್ತು ದಿ ಮಾರ್ವಾರಿ ಹೆರಿಟೇಜ್ ಅನ್ನು ಐಐಎಂಇ 2020 ರ ಜನವರಿಯಲ್ಲಿ ರಾಜ್ಯ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗಿತ್ತು. ಎರಡು ಪುಸ್ತಕಗಳಲ್ಲಿ ತಲಾ 25 ಪ್ರತಿಗಳು ವಿಶ್ವವಿದ್ಯಾನಿಲಯಗಳಿಗೆ ಕಳುಹಿಸಲಾಗಿದೆ. ಇದಕ್ಕೆ ಕ್ರಮವಾಗಿ 4,950 ರೂ ಮತ್ತು ಪ್ರತಿ ಪ್ರತಿ 3,200 ರೂ ಆಗಿದ್ದು ಒಟ್ಟು 2,03,750 ರೂ. ಬಿಲ್ ಮಾಡಲಾಗಿದೆ.

ಮಿಶ್ರಾ ಅವರ ಜೀವನಚರಿತ್ರೆಯನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಲೋಕಾರ್ಪಣೆ ಮಾಡಿದ್ದ್ದು ರಾಜಸ್ಥಾನದ ಸಂಸದರಾದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜಸ್ಥಾನ ವಿಧಾನಸಭಾ ಸ್ಪೀಕರ್ ಸಿ ಪಿ ಜೋಶಿ ಭಾಗವಹಿಸಿದ್ದರು.

ಇದನ್ನೂ ಓದಿ: Rakesh Jhunjunwala: 5000 ರೂ.ನಿಂದ 34 ಸಾವಿರ ಕೋಟಿಯ ಸಾಮ್ರಾಜ್ಯ ಕಟ್ಟಿದ ರಾಕೇಶ್​ ಜುಂಜುನ್​ವಾಲಾಗೆ ಜುಲೈ 5 ಜನ್ಮದಿನ

(Rajasthan vice-chancellors go for launch of Governor Kalraj Mishra’s biography return with 19 copies and Rs 68,383 bill)

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ