ಮುಂಬೈನ ಅಂಟಾಪ್ ಹಿಲ್ ಪ್ರದೇಶದಲ್ಲಿ ಕುಸಿದ ಮನೆ; 9 ಮಂದಿಯ ರಕ್ಷಣೆ
ಅಂಟಾಪ್ ಹಿಲ್ ಪ್ರದೇಶದ ಜೈ ಮಹಾರಾಷ್ಟ್ರ ನಗರದಲ್ಲಿ ನೆಲೆಗೊಂಡಿರುವ ಒಂದು ಅಂತಸ್ತಿನ ಮನೆಯು ಬೆಳಿಗ್ಗೆ 8.10 ರ ಸುಮಾರಿಗೆ ಕುಸಿಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ: ಮುಂಬೈನ ಅಂಟಾಪ್ ಹಿಲ್ (Antop Hill) ಪ್ರದೇಶದಲ್ಲಿ ಮಂಗಳವಾರ ಮನೆಯೊಂದು ಕುಸಿದಿದ್ದು ಅವಶೇಷಗಳಡಿಯಿಂದ ಒಂಬತ್ತು ಜನರನ್ನು ರಕ್ಷಿಸಲಾಗಿದೆ. ಸ್ಥಳದಲ್ಲಿದ್ದ ಮುಂಬೈ ಅಗ್ನಿಶಾಮಕ ದಳದ ( Mumbai Fire Brigade) ಅಧಿಕಾರಿಯೊಬ್ಬರು ಒಂಬತ್ತು ಜನರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ. ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿವೆ ಎಂದು ಅವರು ಹೇಳಿದರು. ಸದ್ಯಕ್ಕೆ ಯಾವುದೇ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಇಂಡಿಯಾ ಟಿವಿ ನ್ಯೂಸ್ ಡಾಟ್ ಕಾಮ್ ವರದಿ ಮಾಡಿದೆ. ಅಂಟಾಪ್ ಹಿಲ್ ಪ್ರದೇಶದ ಜೈ ಮಹಾರಾಷ್ಟ್ರ ನಗರದಲ್ಲಿ ನೆಲೆಗೊಂಡಿರುವ ಒಂದು ಅಂತಸ್ತಿನ ಮನೆಯು ಬೆಳಿಗ್ಗೆ 8.10 ರ ಸುಮಾರಿಗೆ ಕುಸಿಯಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
A house collapsed in Antop Hill area of Mumbai. Nine persons rescued and shifted to a hospital: Mumbai Fire Brigade pic.twitter.com/Q1rY6TEt6l
— ANI (@ANI) November 9, 2021
ನಾಲ್ಕು ಅಗ್ನಿಶಾಮಕ ವಾಹನಗಳು, ರಕ್ಷಣಾ ವ್ಯಾನ್ ಮತ್ತು ಇತರ ಅಗ್ನಿಶಾಮಕ ದಳದ ಉಪಕರಣಗಳು ಸ್ಥಳಕ್ಕೆ ಧಾವಿಸಿವೆ.ನಂತರ ಪೊಲೀಸರು ಮತ್ತು ನಾಗರಿಕ ತಂಡಗಳು ಕೂಡ ಸ್ಥಳಕ್ಕೆ ತಲುಪಿದವು ಎಂದು ಅಧಿಕಾರಿ ತಿಳಿಸಿದ್ದಾರೆ.