ಮುಂಬೈ: ನಗರದ ಟಾರ್ಡಿಯೊದಲ್ಲಿನ (Tardeo) ನಾನಾ ಚೌಕ್‌ನಲ್ಲಿರುವ ಕಮಲಾ ಬಿಲ್ಡಿಂಗ್‌ನಲ್ಲಿ (Kamala Building) ಶನಿವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. 20 ಅಂತಸ್ತಿನ ದೊಡ್ಡ ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಆತಂಕದ ವಾತಾವರಣ ಸೃಷ್ಟಿಯಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಇತರ ಸಿಬ್ಬಂದಿಗಳು ಆಗಮಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಘಟನೆಯಲ್ಲಿ ಪ್ರಸ್ತುತ ಲಭ್ಯವಾಗಿರುವ ಮಾಹಿತಿಯಂತೆ, ಏಳು ಜನರು ಮೃತಪಟ್ಟಿದ್ದಾರೆ. 20 ಅಂತಸ್ತಿನ ಕಟ್ಟಡದ 18ನೇ ಮಹಡಿಯಲ್ಲಿ 3ನೇ ಹಂತದ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ಇಲಾಖೆಯ ಪ್ರಕಾರ, 7.28 ಕ್ಕೆ ಘಟನೆ ವರದಿಯಾಗಿದೆ ಮತ್ತು 8.10 ಕ್ಕೆ ‘ಹಂತ 3’ ಎಂದು ಘೋಷಿಸಲಾಯಿತು.
ಬೆಂಕಿಯನ್ನು ನಿಯಂತ್ರಿಸಲು 13 ಅಗ್ನಿಶಾಮಕ ವಾಹನಗಳು ಮತ್ತು ಏಳು ಜಂಬೋ ಟ್ಯಾಂಕರ್‌ಗಳನ್ನು ನಿಯೋಜಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. ಗಾಯಾಳುಗಳನ್ನು ಸಮೀಪದ ಭಾಟಿಯಾ ಮತ್ತು ನಾಯರ್ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಪ್ರಸ್ತುತ ಘಟನಾ ಸ್ಥಳದಲ್ಲಿ 5 ಆಂಬುಲೆನ್ಸ್ ಸೇವೆ ಒದಗಿಸಲಾಗಿದೆ ಎಂದು ಎಎನ್ಐ ತಿಳಿಸಿದೆ.
ಘಟನೆಯಲ್ಲಿ ಒಟ್ಟು 7 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ಕುರಿತು ಎಎನ್ಐ ಟ್ವೀಟ್ ಇಲ್ಲಿದೆ:
#UPDATE | Two people have died in the fire incident that broke out in 20 storeys Kamala building near Mumbai’s Bhatia hospital in Tardeo: Brihanmumbai Municipal Corporation
— ANI (@ANI) January 22, 2022
ಇದನ್ನೂ ಓದಿ:
ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದ ಪ್ರಿಯಾಂಕಾ ಗಾಂಧಿ; ಉಲ್ಟಾ ಹೊಡೆದಿದ್ದು ಯಾಕೆ?
ಕೋಲಾರ: ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಇಬ್ಬರ ದುರ್ಮರಣ; ತಿರುಪತಿಯಿಂದ ವಾಪಸಾಗುವಾಗ ಘಟನೆ
Published On - 9:29 am, Sat, 22 January 22