Covid 19: ದೇಶದಲ್ಲಿ ತುಸು ಇಳಿಕೆ ಕಂಡ ಕೊರೊನಾ ಪ್ರಕರಣಗಳು, ಒಮಿಕ್ರಾನ್ ಕೇಸ್ಗಳಲ್ಲಿ ಏರಿಕೆ; ಪೂರ್ಣ ಮಾಹಿತಿ ಇಲ್ಲಿದೆ
Omicron: ದೇಶದಲ್ಲಿ ಶುಕ್ರವಾರಕ್ಕಿಂತ ತುಸು ಕಡಿಮೆ ಕೊರೊನಾ ಪ್ರಕರಣಗಳು ದಾಖಲಾಗಿವೆ. ಆದರೆ ಒಮಿಕ್ರಾನ್ ಪ್ರಕರಣಗಳಲ್ಲಿ ಏರಿಕೆಯಾಗಿದೆ.
ಭಾರತದಲ್ಲಿ ಶುಕ್ರವಾರಕ್ಕಿಂತ ಕೊರೊನಾ ಪ್ರಕರಣಗಳಲ್ಲಿ (Corona Cases) ಇಳಿಕೆ ಕಂಡುಬಂದಿದ್ದು, ಇಂದು (ಶನಿವಾರ) 3,37,704 ಪ್ರಕರಣಗಳು ವರದಿಯಾಗಿವೆ. ನಿನ್ನೆಗಿಂತ 9,550 ಕಡಿಮೆ ಪ್ರಕರಣಗಳು ಇಂದು ದಾಖಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 488 ಜನರು ಕೊವಿಡ್ನಿಂದ ಮೃತಪಟ್ಟಿದ್ದಾರೆ. ಚೇತರಿಕೆ ಪ್ರಮಾಣ ಉತ್ತಮವಾಗಿದ್ದು, ಒಟ್ಟು 2,42,676 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಪ್ರಸ್ತುತ 21,13,365 ಸಕ್ರಿಯ ಪ್ರಕರಣಗಳಿವೆ. ದೈನಂದಿನ ಪಾಸಿಟಿವಿಟಿ ದರವು (Positivity Rate) ಶೇ.17.22 ಇದೆ. ಒಮಿಕ್ರಾನ್ ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ದೇಶದಲ್ಲಿ ಇದುವರೆಗೆ ಒಟ್ಟು 10,050 ಪ್ರಕರಣಗಳು ವರದಿಯಾಗಿವೆ. ನಿನ್ನೆಗಿಂತ (ಶುಕ್ರವಾರ) ಇಂದು ಒಮಿಕ್ರಾನ್ (Omicron) ಪ್ರಕರಣಗಳಲ್ಲಿ ಶೇ.3.69 ಏರಿಕೆಯಾಗಿದೆ.
ದೇಶದ ಕೊರೊನಾ ಪ್ರಕರಣಗಳ ಕುರಿತು ಎಎನ್ಐ ಟ್ವೀಟ್:
India reports 3,37,704 new COVID cases (9,550 less than yesterday), 488 deaths, and 2,42,676 recoveries in the last 24 hours
Active case: 21,13,365 Daily positivity rate: 17.22%
10,050 total Omicron cases detected so far; an increase of 3.69% since yesterday pic.twitter.com/sZburym82e
— ANI (@ANI) January 22, 2022
ಭಾರತದಲ್ಲಿ ಇದುವರೆಗೆ ಒಟ್ಟು 161.16 ಕೋಟಿ ಡೋಸ್ ವ್ಯಾಕ್ಸಿನ್ ಅನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಇದುವರೆಗೆ ಒಟ್ಟು 71.34 ಕೋಟಿ ಸ್ಯಾಂಪಲ್ಗಳನ್ನು ಟೆಸ್ಟ್ ಮಾಡಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 19,60,954 ಸ್ಯಾಂಪಲ್ ಪರೀಕ್ಷಿಸಲಾಗಿದೆ. ಭಾರತದಲ್ಲಿ ಪ್ರಸ್ತುತ ವಾರದ ಪಾಸಿಟಿವಿಟಿ ದರ ಶೇ.16.65 ಇದೆ.
ಕೊರೊನಾ ಪಾಸಿಟಿವ್ ಆದರೆ ಬೂಸ್ಟರ್ ಡೋಸ್ 3 ತಿಂಗಳ ನಂತರ ನೀಡಿಕೆ: ಒಂದು ವೇಳೆ ಬೂಸ್ಟರ್ ಡೋಸ್ಗೆ ಅರ್ಹರಾಗಿರುವವರಿಗೆ ಕೊರೊನಾ ಪಾಸಿಟಿವ್ ಆಗಿದ್ದರೆ, ಮೂರು ತಿಂಗಳ ನಂತರ ಬೂಸ್ಟರ್ ಡೋಸ್ ಲಸಿಕೆ ನೀಡಬೇಕು ಎಂದು ಎನ್ಹೆಚ್ಎಮ್ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ಡೈರೆಕ್ಟರ್ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ಸೋಂಕಿನಿಂದ ಚೇತರಿಸಿಕೊಂಡ ಮೂರು ತಿಂಗಳ ತರುವಾಯು ಬೂಸ್ಟರ್ ಡೋಸ್ಅನ್ನು ಅರ್ಹರಿಗೆ ನೀಡಬಹುದು ಎಂದು ಅದರಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ:
ಮುಂಬೈ: ಟಾರ್ಡಿಯೋದ 20 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ
Published On - 9:44 am, Sat, 22 January 22