ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದ ಪ್ರಿಯಾಂಕಾ ಗಾಂಧಿ; ಉಲ್ಟಾ ಹೊಡೆದಿದ್ದು ಯಾಕೆ?
Priyanka Gandhi: ಸುದ್ದಿಗಾರರು ಉತ್ತರ ಪ್ರದೇಶ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಬಗ್ಗೆ ಕೇಳಿದ್ದಾಗ ‘ನಾನೇ ಸಿಎಂ ಅಭ್ಯರ್ಥಿ’ ಎಂಬ ಅರ್ಥ ಬರುವಂತೆ ಪ್ರಿಯಾಂಕಾ ಗಾಂಧಿ ಹೇಳಿಕೆ ನೀಡಿದ್ದರು. ಅದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು.
ದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ವಿಚಾರವಾಗಿ ಸ್ಫೋಟಕ ಹೇಳಿಕೆ ನೀಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ತಾವು ಶುಕ್ರವಾರ ನೀಡಿದ ಹೇಳಿಕೆಯು ಉತ್ಪ್ರೇಕ್ಷೆಯ ಹೇಳಿಕೆ ಆಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗಾರರು ಉತ್ತರ ಪ್ರದೇಶ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಬಗ್ಗೆ ಕೇಳಿದ್ದಾಗ ‘ನಾನೇ ಸಿಎಂ ಅಭ್ಯರ್ಥಿ’ ಎಂಬ ಅರ್ಥ ಬರುವಂತೆ ಪ್ರಿಯಾಂಕಾ ಗಾಂಧಿ ಹೇಳಿಕೆ ನೀಡಿದ್ದರು. ಅದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು.
ಪಂಚರಾಜ್ಯಗಳ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಉತ್ತರ ಪ್ರದೇಶ ಚುನಾವಣೆಗೆ (Uttar Pradesh Assembly Elections 2022) ಸಂಬಂಧಿಸಿದಂತೆ ಹೊಸ ಸಂಚಲನದ ಹೇಳಿಕೆಯೊಂದು ಕೇಳಿಬಂದಿತ್ತು. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಉತ್ತರ ಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಯಾರು (Congress CM Candidate) ಎಂಬ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದರು.
ಉತ್ತರ ಪ್ರದೇಶದ ಯುವ ಸಮುದಾಯದ ಮಂದಿಗೆ ಉದ್ಯೋಗ ನೀಡುವ ಕುರಿತಾದ ಪ್ರಣಾಳಿಕೆ ಬಿಡುಗಡೆ ಮಾಡಿದ ಅವರು ಮಾತನಾಡಿದ್ದರು. ಈ ವೇಳೆ, ಬಿಜೆಪಿ ಯೋಗಿ ಆದಿತ್ಯನಾಥ್ ಹಾಗೂ ಸಮಾಜವಾದಿ ಪಕ್ಷ ಅಖಿಲೇಶ್ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮುಂದಿಟ್ಟಿದೆ. ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಹೇಳಿಕೆ ನೀಡಿದ್ದರು.
Priyanka Gandhi Vadra rolls back her “CM face” comment, says said comment “in an exaggerated way”
Read @ANI Story | https://t.co/L13K2jL60e#Congress #UttarPradeshElections2022 #PriyankaGandhiVadra pic.twitter.com/NEuZXL1pzb
— ANI Digital (@ani_digital) January 22, 2022
‘ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ನೀವು ಬೇರೆ ಯಾವುದಾದರೂ ಮುಖವನ್ನು ಕಾಣುತ್ತೀರಾ?’ ಎಂದು ಪ್ರಶ್ನೆ ಮಾಡಿದ್ದರು. ಆ ಬಗ್ಗೆ ಮತ್ತಷ್ಟು ಪ್ರಶ್ನಿಸಿದಾಗ ‘ನೀವು ನನ್ನ ಮುಖವನ್ನು ನೋಡಬಹುದು? ಕಾಣುವುದಿಲ್ಲವೇ?’ ಎಂದು ಕೇಳಿದ್ದರು. ಚುನಾವಣಾ ರಾಜಕೀಯದಿಂದ ದೂರ ಉಳಿದಿದ್ದ ಪ್ರಿಯಾಂಕಾ ಗಾಂಧಿ ಮತ್ತೆ ಸುದ್ದಿ ಮಾಡಿದ್ದರು.
ಪ್ರಿಯಾಂಕಾ ಗಾಂಧಿ ವಾದ್ರಾ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಲಬ್ಯವಾಗಿರಲಿಲ್ಲ. ಆದರೆ, ಪ್ರಿಯಾಂಕ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಹುಟ್ಟಿಸಿತ್ತು. ಮುಖ್ಯಮಂತ್ರಿ ಆಗಲು ಪ್ರಿಯಾಂಕ ಗಾಂಧಿ ವಿಧಾನಸಭಾ ಚುನಾವಣೆ ಗೆಲ್ಲಬೇಕು ಎಂದೇನಿಲ್ಲ ಎಂಬ ಮಾತುಗಳು ಕೂಡ ಕೇಳಿಬಂದಿತ್ತು.
ಇದನ್ನೂ ಓದಿ: UP Assembly Elections: ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ? ಸಂಚಲನ ಸೃಷ್ಟಿಸಿದ ಹೇಳಿಕೆ
ಇದನ್ನೂ ಓದಿ: ಹೋಮ್ವರ್ಕ್ ಮಾಡಿಸಲು ಮುಂಜಾನೆ 3-4 ಗಂಟೆವರೆಗೆ ಮಕ್ಕಳೊಂದಿಗೆ ಕುಳಿತುಕೊಳ್ಳಬೇಕಾಗಿ ಬರುತ್ತದೆ: ಪ್ರಿಯಾಂಕಾ ಗಾಂಧಿ