ಹೋಮ್ವರ್ಕ್ ಮಾಡಿಸಲು ಮುಂಜಾನೆ 3-4 ಗಂಟೆವರೆಗೆ ಮಕ್ಕಳೊಂದಿಗೆ ಕುಳಿತುಕೊಳ್ಳಬೇಕಾಗಿ ಬರುತ್ತದೆ: ಪ್ರಿಯಾಂಕಾ ಗಾಂಧಿ
ನಿಮ್ಮ ಮಕ್ಕಳು ತಮ್ಮ ಹೋಮ್ ವರ್ಕ್ಗಾಗಿ ನಿಮ್ಮ ಸಹಾಯವನ್ನು ಕೇಳುತ್ತಾರೆಯೇ?" ಚಾಟ್ ವೇಳೆ ವ್ಯಕ್ತಿಯೊಬ್ಬರು ಕೇಳಿದ್ದರು. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ಇಂದಿನ ಈ ಸೋಷ್ಯಲ್ ಮೀಡಿಯಾ ಸೆಷನ್ಗೂ ಮುನ್ನ ಮಗಳ ಅಸೈನ್ಮೆಂಟ್ಗೆ ಸಹಾಯ ಮಾಡಿದ್ದೇನೆ ಎಂದು ಹೇಳಿದರು.
ದೆಹಲಿ: ಕಾಂಗ್ರೆಸ್ ಪಕ್ಷದ (Congress) ಪರ ಪ್ರಚಾರದಲ್ಲಿ ನಿರತರಾಗಿರುವಾಗಲೂ ತಮ್ಮ ಮಕ್ಕಳಿಗೆ ಹೋಮ್ ವರ್ಕ್ ಮಾಡಲು ಸಹಾಯ ಮಾಡುವುದಾಗಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಹೇಳಿದ್ದಾರೆ. ಮಂಗಳವಾರ ಫೇಸ್ ಬುಕ್ ಲೈವ್ ಚಾಟ್ ಸೆಷನ್‌ನಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ನಾನು ನನ್ನ ಮಕ್ಕಳಿಗೆ ಮಾತ್ರವಲ್ಲ ಅವರ ಸ್ನೇಹಿತರ ಹೋಮ್ ವರ್ಕ್ ಮಾಡಲು ಸಹಾಯ ಮಾಡುತ್ತೇನೆ ಎಂದು ಹೇಳಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ, ಮಕ್ಕಳು ಆಗಾಗ್ಗೆ ಕೇಳುವ ಮತ್ತು ಹೋಮ್ ವರ್ಕ್ಗೆ ಸಹಾಯ ಮಾಡುವ ಆಂಟಿ ನಾನು ಎಂದು ಹೇಳಿದ್ದಾರೆ. “ನಿಮ್ಮ ಮಕ್ಕಳು ತಮ್ಮ ಹೋಮ್ ವರ್ಕ್ಗಾಗಿ ನಿಮ್ಮ ಸಹಾಯವನ್ನು ಕೇಳುತ್ತಾರೆಯೇ?” ಚಾಟ್ ವೇಳೆ ವ್ಯಕ್ತಿಯೊಬ್ಬರು ಕೇಳಿದ್ದರು. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ಇಂದಿನ ಈ ಸೋಷ್ಯಲ್ ಮೀಡಿಯಾ ಸೆಷನ್ಗೂ ಮುನ್ನ ಮಗಳ ಅಸೈನ್ಮೆಂಟ್ಗೆ ಸಹಾಯ ಮಾಡಿದ್ದೇನೆ ಎಂದು ಹೇಳಿದರು. ಪ್ರಿಯಾಂಕಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 18ರ ಹರೆಯದ ಮಿರಾಯಾ ವಾದ್ರಾ ಮತ್ತು 20ರ ಹರೆಯದ ರೈಹಾನ್ ವಾದ್ರಾ. “ಕೆಲವೊಮ್ಮೆ, ನಾನು ಚುನಾವಣಾ ಪ್ರಚಾರದಿಂದ ಮನೆಗೆ ಹಿಂದಿರುಗಿದಾಗ, ಅವರ ಹೋಮ್ ವರ್ಕ್ ಮುಗಿಸುವುದಕ್ಕಾಗಿ ನಾನು ನನ್ನ ಮಕ್ಕಳೊಂದಿಗೆ 3-4 ಗಂಟೆಯವರೆಗೆ ಕುಳಿತುಕೊಳ್ಳಬೇಕಾಗುತ್ತದೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಚಾಟ್ ಸೆಷನ್ ವೇಳೆ ಅವರು ತಮ್ಮ ಬಾಲ್ಯದಲ್ಲಿ ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ಜಗಳವಾಡುತ್ತಿದ್ದರು ಎಂದು ಅವರು ಬಹಿರಂಗಪಡಿಸಿದರು. ಆದರೆ ಹೊರಗಿನವರು ನಮಗೆ ಅಡ್ಡಿಪಡಿಸಲು ಪ್ರಯತ್ನಿಸಿದರೆ, ನಾವಿಬ್ಬರೂ ಜತೆಯಾಗಿ ಅವರ ವಿರುದ್ಧ ಜಗಳವಾಡುತ್ತಿದ್ದೆವು ಎಂದು ಅವರು ಹೇಳಿದರು.
ತನ್ನ ಕುಟುಂಬದಲ್ಲಿ “ಭಯಾನಕ್ ಲೋಕತಂತ್ರ (ತೀವ್ರ ಪ್ರಜಾಪ್ರಭುತ್ವ)” ಇದೆ . ಎಲ್ಲಾ ಸದಸ್ಯರು ನಿರ್ಧಾರ ತೆಗೆದುಕೊಳ್ಳಲು ಕೊಡುಗೆ ನೀಡುತ್ತಾರೆ ಎಂದು ಅವರು ಹೇಳಿದರು.
View this post on Instagram
ಫೆಬ್ರವರಿ 10 ರಂದು ಆರಂಭವಾಗಲಿರುವ ಉತ್ತರ ಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ. ಕೊವಿಡ್‌ನಿಂದಾಗಿ ರಾಜಕೀಯ ಪಕ್ಷಗಳು ರ್ಯಾಲಿಗಳು ಮತ್ತು ರೋಡ್‌ಶೋಗಳನ್ನು ಆಯೋಜಿಸುವುದನ್ನು ಚುನಾವಣಾ ಆಯೋಗ ನಿಲ್ಲಿಸಿದೆ. ಆದರೆ ಇದು ಮನೆ-ಮನೆ ಮತ್ತು ವರ್ಚುವಲ್ ಪ್ರಚಾರಗಳಿಗೆ ಅವಕಾಶ ಮಾಡಿಕೊಟ್ಟಿದೆ. ಹೆಚ್ಚಿನ ಪಕ್ಷಗಳು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ತಿರುಗಿವೆ ಮತ್ತು ಮತದಾರರೊಂದಿಗೆ ಸಂಪರ್ಕ ಸಾಧಿಸಲು ನವೀನ ಮಾರ್ಗಗಳನ್ನು ರೂಪಿಸಿವೆ. ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲು ಅಖಿಲೇಶ್ ಯಾದವ್ ನಿರ್ಧಾರ, ಗೋಪಾಲ್‌ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಸಾಧ್ಯತೆ