AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಇಬ್ಬರ ದುರ್ಮರಣ; ತಿರುಪತಿಯಿಂದ ವಾಪಸಾಗುವಾಗ ಘಟನೆ

ಹರೀಶ್ ಹಾಗೂ ಸಾವಿತ್ರಿ ಎಂಬುವವರಿಗೆ ಗಾಯವಾಗಿದೆ. ತಿರುಪತಿಗೆ ಹೋಗಿ ವಾಪಸ್ಸಾಗುವಾಗ ಘಟನೆ ನಡೆದಿದೆ ಎನ್ನಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೋಲಾರ: ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಇಬ್ಬರ ದುರ್ಮರಣ; ತಿರುಪತಿಯಿಂದ ವಾಪಸಾಗುವಾಗ ಘಟನೆ
ಅಪಘಾತ
TV9 Web
| Edited By: |

Updated on:Jan 22, 2022 | 11:12 AM

Share

ಕೋಲಾರ: ಬೆಳಗಿನ ಜಾವವೇ ಕಾರು ಅಪಘಾತ ಸಂಭವಿಸಿ ಇಬ್ಬರು ದುರ್ಮರಣವನ್ನಪ್ಪಿರುವ ದುರ್ಘಟನೆ ಕೋಲಾರ ತಾಲೂಕಿನ ನೆರ್ನಹಳ್ಳಿ ಬಳಿ ನಡೆದಿದೆ. ಬೆಂಗಳೂರಿನ ದೀಪಕ್, ಗಿರಿಜಮ್ಮ ಮೃತ ದುರ್ದೈವಿಗಳು. ಅಪಘಾತದಲ್ಲಿ ಇಬ್ಬರಿಗೆ ಗಾಯ ಆಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೃತರು ಬೆಂಗಳೂರು ಕೋಣನಕುಂಟೆ ಮೂಲದ ದೀಪಕ್ ಹಾಗೂ ಗಿರಿಜಮ್ಮ ಎಂದು ಗುರುತಿಸಲಾಗಿದೆ. ಹರೀಶ್ ಹಾಗೂ ಸಾವಿತ್ರಿ ಎಂಬುವವರಿಗೆ ಗಾಯವಾಗಿದೆ. ತಿರುಪತಿಗೆ ಹೋಗಿ ವಾಪಸ್ಸಾಗುವಾಗ ಘಟನೆ ನಡೆದಿದೆ ಎನ್ನಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು

ಇಲ್ಲಿನ ಖಾಸಗಿ ಆಸ್ಪತ್ರೆ ಒಂದರಲ್ಲಿ ತಾಯಿ, ಮಗು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದ ತಾಯಿ, ಮಗು ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಲಾಗಿದೆ. ನಿನ್ನೆ (ಜನವರಿ 21) ಬೆಳಗ್ಗೆ ಗರ್ಭಿಣಿ ಆಗಿದ್ದ ಸವಿತಾ (25) ಎಂಬವರು ಆಸ್ಪತ್ರೆಗೆ ಬಂದಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕುಂಡಡ್ಕ ನಿವಾಸಿ ಆಸ್ಪತ್ರೆಗೆ ಆಗಮಿಸಿದ್ದರು.

ಆಸ್ಪತ್ರೆಗೆ ಬಂದಾಗ ಹೊಟ್ಟೆಯಲ್ಲೇ ಮಗು ಸಾವು ಎಂದು ಹೇಳಲಾಗಿತ್ತು. ಆದರೆ, ಸಂಜೆ ಆದರೂ ಮಗುವನ್ನು ಹೊರ ತೆಗೆಯದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಂಜೆ ವೇಳೆಗೆ ತಾಯಿ ಸವಿತಾ ಕೂಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ತಾಯಿ ಮೃತಪಟ್ಟ ಬಳಿಕ ಮಗುವನ್ನು ಹೊರತೆಗೆದ ಆರೋಪ ಕೇಳಿಬಂದಿದೆ. ಪತಿ ಗಣೇಶ್, ಸಂಬಂಧಿಕರಿಂದ ವೈದ್ಯರ ವಿರುದ್ಧ ಆರೋಪ ವ್ಯಕ್ತವಾಗಿದೆ.

ಇದನ್ನೂ ಓದಿ: ಬಳ್ಳಾರಿ: ಕಾಲುವೆ ದಡದಲ್ಲಿ 3 ವರ್ಷದ ಮಗು ಪತ್ತೆ; ಮಗುವನ್ನು ಬಿಟ್ಟು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಇದನ್ನೂ ಓದಿ: ಕಾರ್​ ಖರೀದಿಸಿ ಶೋ ರೂಮ್​ನಲ್ಲೇ ಅಪಘಾತ ಮಾಡಿಕೊಂಡ ವ್ಯಕ್ತಿ: ವೈರಲ್​ ಆದ ಜಖಂಗೊಂಡ ಕಾರಿನ ಫೋಟೊ

Published On - 9:09 am, Sat, 22 January 22

Follow Us
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಇಸ್ಲಾಂಪೇಟೆಯಲ್ಲಿ ಮತ್ತೆ ಗಣಪತಿ ಮೆರವಣಿಗೆಗೆ ಶಾಸಕ ಕೃಷ್ಣಾನಾಯಕ್ ಚಾಲನೆ!
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ಸೌಂದರ್ಯಾ ಬಗ್ಗೆ ಕೆಟ್ಟದಾಗಿ ಮಾತನಾಡಿದ ಮಂಜನಿಗೆ ಬುದ್ಧಿ ಕಲಿಸಿದ ಕಿಚ್ಚ
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ತುಂಗಭದ್ರಾ ಡ್ಯಾಂನಿಂದ ನೀರು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳು
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್‌ ಸೀಜ್
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು