Solo Travel: ಒಬ್ಬರೇ ವಿದೇಶ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡುತ್ತಿದ್ದೀರಾ? ಈ 3 ದೇಶ ಬೆಸ್ಟ್
ಒಬ್ಬರೇ ವಿದೇಶ ಪ್ರವಾಸ ಕೈಗೊಳ್ಳಲು ಬಯಸುತ್ತಿದ್ದೀರಾ? ಮೊದಲ ಸೊಲೊ ಪ್ರವಾಸಕ್ಕೆ ಯಾವ ದೇಶ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲವಿದ್ದರೆ ಜಪಾನ್, ವಿಯೆಟ್ನಾಂ ಮತ್ತು ಥಾಯ್ಲೆಂಡ್ ಬಗ್ಗೆ ತಿಳಿದುಕೊಳ್ಳಬಹುದು. ಪ್ರವಾಸಿಗ ಜಯಂತ್ ಶರ್ಮಾ ತಮ್ಮ ಅನುಭವದ ಆಧಾರದ ಮೇಲೆ ಈ ಮೂರು ದೇಶಗಳ ಪ್ರವಾಸ, ವೆಚ್ಚ ಮತ್ತು ಪ್ರಮುಖ ಆಕರ್ಷಣೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಮುಖ್ಯಾಂಶಗಳು
- ಒಬ್ಬರೇ ವಿದೇಶ ಪ್ರವಾಸಕ್ಕೆ ಹೋಗಲು ಬಯಸುತ್ತಿದ್ದೀರಾ?
- ಕಡಿಮೆ ಬಜೆಟ್‌ನಲ್ಲಿ ಸೊಲೊ ಪ್ರವಾಸ ಮಾಡಲು ಈ ದೇಶಬೆಸ್ಟ್
- ಸೊಲೊ ಪ್ರವಾಸಕ್ಕೆ ಪ್ರವಾಸಿಗ ಸೂಚಿಸಿದ 3 ದೇಶಗಳಿವು!
ಒಬ್ಬರೇ ವಿದೇಶ ಪ್ರವಾಸ (Foreign Trip) ಕೈಗೊಳ್ಳುವುದು ಹೊಸ ಅನುಭವಗಳನ್ನು ಪಡೆಯಲು ಉತ್ತಮ ಅವಕಾಶ. ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಹೊಸ ಜನರನ್ನು ಭೇಟಿಯಾಗುವುದು ಹಾಗೂ ನಮಗೆ ಇಷ್ಟವಾದ ಸ್ಥಳಗಳಲ್ಲಿ ಹೆಚ್ಚು ಸಮಯ ಕಳೆಯುವುದು ಸೊಲೊ ಪ್ರವಾಸದ ವಿಶೇಷತೆ. ಆದರೆ ಮೊದಲ ಬಾರಿಗೆ ಒಬ್ಬರೇ ವಿದೇಶಕ್ಕೆ ಹೋಗುವವರಿಗೆ ಯಾವ ದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲವೂ ಇರುತ್ತದೆ.
ಇಂತಹವರಿಗೆ ಪ್ರವಾಸಿಗ ಪ್ರಸಿದ್ಧ ಸೊಲೊ ಟ್ರಾವೆಲರ್ ಜಯಂತ್ ಶರ್ಮಾ ತಮ್ಮ ಅನುಭವದ ಆಧಾರದ ಮೇಲೆ ಮೂರು ದೇಶಗಳನ್ನು ಸೂಚಿಸಿದ್ದಾರೆ. ಅವರ ಪ್ರಕಾರ ಜಪಾನ್, ವಿಯೆಟ್ನಾಂ ಮತ್ತು ಥಾಯ್ಲೆಂಡ್ ಸೊಲೊ ಪ್ರವಾಸಕ್ಕೆ ಉತ್ತಮ ಅನುಭವ ನೀಡುವ ದೇಶಗಳಾಗಿವೆ.
ಜಪಾನ್
ಜಯಂತ್ ಶರ್ಮಾ ಅವರ ಪಟ್ಟಿಯಲ್ಲಿ ಜಪಾನ್ ಮೊದಲ ಸ್ಥಾನದಲ್ಲಿದೆ. ಅವರು ಜಪಾನ್‌ನಲ್ಲಿ ಸುಮಾರು 15 ದಿನ ಪ್ರವಾಸ ಮಾಡಿದ್ದು, ಅಲ್ಲಿನ ವೈವಿಧ್ಯಮಯ ಅನುಭವವನ್ನು ಮೆಚ್ಚಿಕೊಂಡಿದ್ದಾರೆ. ಆಧುನಿಕ ನಗರಗಳು, ಪರ್ವತಗಳು, ಕಾಡುಗಳು, ಜಲಪಾತಗಳು ಮತ್ತು ಐತಿಹಾಸಿಕ ಸ್ಥಳಗಳನ್ನು ಒಂದೇ ಪ್ರವಾಸದಲ್ಲಿ ನೋಡಬಹುದು.
ಟೋಕಿಯೊ, ಕ್ಯೋಟೊ, ಒಸಾಕಾ, ನಾರಾ ಮತ್ತು ಹಕೋನೆ ಪ್ರಮುಖ ಪ್ರವಾಸಿ ತಾಣಗಳಾಗಿವೆ. ಜಪಾನ್‌ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಸ್ಥಳೀಯ ಸಂಪ್ರದಾಯಗಳನ್ನು ಗೌರವಿಸುವುದು ಮತ್ತು ಪ್ರಯಾಣಕ್ಕೂ ಮುನ್ನ ಸಾರಿಗೆ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯುವುದು ಮುಖ್ಯ.
Quit Sugar: 30 ದಿನ ಸಕ್ಕರೆ ತಿನ್ನುವುದನ್ನು ಬಿಟ್ಟರೆ ದೇಹದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ?
ವಿಯೆಟ್ನಾಂ
ಕಡಿಮೆ ವೆಚ್ಚದಲ್ಲಿ ವಿದೇಶ ಪ್ರವಾಸ ಮಾಡಲು ಬಯಸುವವರಿಗೆ ವಿಯೆಟ್ನಾಂ ಉತ್ತಮ ಆಯ್ಕೆಯಾಗಬಹುದು. ಅವರು ಇಲ್ಲಿ 15 ದಿನಗಳಿಗಿಂತ ಹೆಚ್ಚು ಕಾಲ ಪ್ರವಾಸ ಮಾಡಿದ್ದು, ಕಡಿಮೆ ಖರ್ಚಿನಲ್ಲಿ ದೇಶದ ವಿವಿಧ ಭಾಗಗಳನ್ನು ಸುತ್ತಾಡುವ ಅವಕಾಶವನ್ನು ಉಲ್ಲೇಖಿಸಿದ್ದಾರೆ. ಹನೋಯಿ, ಹಾ ಲಾಂಗ್ ಬೇ, ನಿನ್ ಬಿನ್, ಹೋಯಿ ಆನ್ ಮತ್ತು ಹೋ ಚಿ ಮಿನ್ ಸಿಟಿ ಪ್ರಮುಖ ತಾಣಗಳಾಗಿವೆ. ವಿಯೆಟ್ನಾಂನ ಸ್ಥಳೀಯ ಆಹಾರ ಮತ್ತು ಕಾಫಿ ಸಂಸ್ಕೃತಿಯೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಥಾಯ್ಲೆಂಡ್
ಥಾಯ್ಲೆಂಡ್ ಕೂಡ ಸೊಲೊ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ. ಕಡಿಮೆ ವೆಚ್ಚದಲ್ಲಿ ವಾಸ್ತವ್ಯ ಮತ್ತು ಆಹಾರದ ಆಯ್ಕೆಗಳು ದೊರೆಯುವುದರಿಂದ ಬಜೆಟ್‌ನಲ್ಲಿ ಪ್ರವಾಸ ಮಾಡಲು ಅವಕಾಶವಿದೆ. ಬ್ಯಾಂಕಾಕ್, ಚಿಯಾಂಗ್ ಮಾಯ್, ಕ್ರಾಬಿ, ಫುಕೆಟ್ ಮತ್ತು ಕೊಹ್ ಸಮುಯಿ ಪ್ರಮುಖ ತಾಣಗಳಾಗಿವೆ. ರಾತ್ರಿ ಮಾರುಕಟ್ಟೆಗಳಲ್ಲಿ ಸುತ್ತಾಡುವುದು, ಸ್ಥಳೀಯ ಆಹಾರ ಸವಿಯುವುದು ಹಾಗೂ ದ್ವೀಪಗಳ ಪ್ರವಾಸ ಇಲ್ಲಿನ ಪ್ರಮುಖ ಆಕರ್ಷಣೆಗಳು. ಒಬ್ಬರೇ ಪ್ರಯಾಣಿಸುವವರು ಇತರ ಪ್ರವಾಸಿಗರನ್ನು ಭೇಟಿಯಾಗಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವ ಅವಕಾಶವೂ ಸಿಗಬಹುದು.
ಒಟ್ಟಿನಲ್ಲಿ, ಸೊಲೊ ಪ್ರವಾಸಕ್ಕೆ ದೇಶ ಆಯ್ಕೆ ಮಾಡುವಾಗ ಬಜೆಟ್, ಆಸಕ್ತಿ, ಹವಾಮಾನ, ವೀಸಾ ನಿಯಮಗಳು, ಸುರಕ್ಷತೆ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಮೊದಲೇ ಪರಿಶೀಲಿಸುವುದು ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




