ಬಳ್ಳಾರಿ: ಕಾಲುವೆ ದಡದಲ್ಲಿ 3 ವರ್ಷದ ಮಗು ಪತ್ತೆ; ಮಗುವನ್ನು ಬಿಟ್ಟು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಬಳ್ಳಾರಿ: ಕಾಲುವೆ ದಡದಲ್ಲಿ 3 ವರ್ಷದ ಮಗು ಪತ್ತೆ; ಮಗುವನ್ನು ಬಿಟ್ಟು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ
ಬಳ್ಳಾರಿ: ಕಾಲುವೆ ದಡದಲ್ಲಿ 3 ವರ್ಷದ ಮಗು ಪತ್ತೆ

ಕೆಲ ವರ್ಷಗಳಿಂದ ಮಾನಸಿಕ ಅ್ವಸ್ವಸ್ಥೆಯಾಗಿದ್ದ ಮಹಿಳೆ ಏಕಾಏಕಿ ಮಗುವನ್ನು ಬಿಟ್ಟು ‌ನೀರಿಗೆ ಹಾರಿರೋ ಶಂಕೆ ವ್ಯಕ್ತವಾಗಿದೆ. ಕಾಲುವೆ ಬಳಿ‌ ಇರುವ ಮಗುವನ್ನು ಎತ್ತಿಕೊಂಡು ಜನ ವಿಡಿಯೋ ಮಾಡಿದ್ದಾರೆ. ಮನಕಲಕುವ ಘಟನೆಯೊಂದು ಬಳ್ಳಾರಿಯಲ್ಲಿ ಶನಿವಾರ ನಡೆದಿದೆ.

TV9kannada Web Team

| Edited By: ganapathi bhat

Jan 22, 2022 | 11:11 AM


ಬಳ್ಳಾರಿ: ಇಲ್ಲಿನ ತಿಮ್ಮಲಾಪುರ ಬಳಿ ಕಾಲುವೆ ದಡದಲ್ಲಿ 3 ವರ್ಷದ ಮಗು ಪತ್ತೆ ಆಗಿದೆ. ಮಗುವನ್ನು ದಡದಲ್ಲಿ ಬಿಟ್ಟು ತಾಯಿ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸರಸ್ವತಿ ತಂದೆಯಿಂದ ನಾಪತ್ತೆ ದೂರು ದಾಖಲು ಮಾಡಲಾಗಿದೆ. ಬಳ್ಳಾರಿ ತಾಲೂಕಿನ ಕುಡತಿನಿ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂರು ವರ್ಷದ ಮಗುವನ್ನು ದಡದ ಮೇಲೆ ನಿಲ್ಲಿಸಿ ಗೃಹಿಣಿ ಕಾಲುವೆ ನೀರಿಗೆ ಹಾರಿರುವ ಬಗ್ಗೆ ಅನುಮಾನಗಳು ಕೇಳಿಬಂದಿದೆ. ಅಮ್ಮ ಎಲ್ಲಿ ಅಂದ್ರೆ ಮೂರು ವರ್ಷದ ಮಗು ಕಾಲುವೆ ಕಡೆ ತೋರಿಸುತ್ತಿದೆ.

ಇದೀಗ ಆ ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 38 ವರ್ಷದ ಸರಸ್ವತಿ ಕಾಲುವೆಗೆ ಹಾರಿರುವ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಕಳೆದ ಕೆಲ ವರ್ಷಗಳಿಂದ ಮಾನಸಿಕ ಅ್ವಸ್ವಸ್ಥೆಯಾಗಿದ್ದ ಮಹಿಳೆ ಏಕಾಏಕಿ ಮಗುವನ್ನು ಬಿಟ್ಟು ‌ನೀರಿಗೆ ಹಾರಿರೋ ಶಂಕೆ ವ್ಯಕ್ತವಾಗಿದೆ. ಕಾಲುವೆ ಬಳಿ‌ ಇರುವ ಮಗುವನ್ನು ಎತ್ತಿಕೊಂಡು ಜನ ವಿಡಿಯೋ ಮಾಡಿದ್ದಾರೆ. ಮನಕಲಕುವ ಘಟನೆಯೊಂದು ಬಳ್ಳಾರಿಯಲ್ಲಿ ಶನಿವಾರ ನಡೆದಿದೆ.

ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು

ಇಲ್ಲಿನ ಖಾಸಗಿ ಆಸ್ಪತ್ರೆ ಒಂದರಲ್ಲಿ ತಾಯಿ, ಮಗು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದ ತಾಯಿ, ಮಗು ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಲಾಗಿದೆ. ನಿನ್ನೆ (ಜನವರಿ 21) ಬೆಳಗ್ಗೆ ಗರ್ಭಿಣಿ ಆಗಿದ್ದ ಸವಿತಾ (25) ಎಂಬವರು ಆಸ್ಪತ್ರೆಗೆ ಬಂದಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕುಂಡಡ್ಕ ನಿವಾಸಿ ಆಸ್ಪತ್ರೆಗೆ ಆಗಮಿಸಿದ್ದರು.

ಆಸ್ಪತ್ರೆಗೆ ಬಂದಾಗ ಹೊಟ್ಟೆಯಲ್ಲೇ ಮಗು ಸಾವು ಎಂದು ಹೇಳಲಾಗಿತ್ತು. ಆದರೆ, ಸಂಜೆ ಆದರೂ ಮಗುವನ್ನು ಹೊರ ತೆಗೆಯದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಂಜೆ ವೇಳೆಗೆ ತಾಯಿ ಸವಿತಾ ಕೂಡ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ತಾಯಿ ಮೃತಪಟ್ಟ ಬಳಿಕ ಮಗುವನ್ನು ಹೊರತೆಗೆದ ಆರೋಪ ಕೇಳಿಬಂದಿದೆ. ಪತಿ ಗಣೇಶ್, ಸಂಬಂಧಿಕರಿಂದ ವೈದ್ಯರ ವಿರುದ್ಧ ಆರೋಪ ವ್ಯಕ್ತವಾಗಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬಲವಂತವಾಗಿ ಮತಾಂತರ ಮಾಡಿರುವ ಆರೋಪ! ಹೆಂಡತಿ, ಮಾವನ ವಿರುದ್ಧ ದೂರು ದಾಖಲು

ಇದನ್ನೂ ಓದಿ: Crime News: ಸುಪ್ರೀಂ ಕೋರ್ಟ್​ ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

Follow us on

Related Stories

Most Read Stories

Click on your DTH Provider to Add TV9 Kannada