ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಗೆ ಭಕ್ತರಿಗೆ ನಿರ್ಬಂಧ ; ಸರಳ ಕಾರ್ಣಿಕ ಆಚರಣೆಗೆ ನಿರ್ಧಾರ
ಮೈಲಾರಲಿಂಗೇಶ್ವರ ಜಾತ್ರೆಗೆ ಬರುವ ಭಕ್ತರಿಗೆ ಜಿಲ್ಲಾಡಳಿತ ನಿರ್ಭಂಧ ವಿಧಿಸಿದೆ. ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಗೆ ಜನರು ಮತ್ತು ಭಕ್ತರಿಗೆ ನಿರ್ಭಂದ ವಿಧಿಸಿ ವಿಜಯನಗರ ಡಿಸಿ ಅನಿರುದ್ಧ್ ಪಿ.ಶ್ರವಣ್ ಆದೇಶ ಹೊರಡಿಸಿದ್ದಾರೆ.
ವಿಜಯನಗರ: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೂವಿನ ಹಡಗಲಿಯ ಐತಿಹಾಸಿಕ ಮೈಲಾರಲಿಂಗೇಶ್ವರ ಜಾತ್ರೆಗೆ ಬರುವ ಭಕ್ತರಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರ ಜಾತ್ರೆಗೆ ಜನರು ಮತ್ತು ಭಕ್ತರಿಗೆ ನಿರ್ಭಂದ ವಿಧಿಸಿ ವಿಜಯನಗರ ಡಿಸಿ ಅನಿರುದ್ಧ್ ಪಿ.ಶ್ರವಣ್ ಆದೇಶ ಹೊರಡಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಪ್ರಸಿದ್ಧ ಸುಕ್ಷೇತ್ರ ಮೈಲಾರಲಿಂಗೇಶ್ವರ ಕ್ಷೇತ್ರ. ಇಲ್ಲಿ ಫೆ. 8 ರಿಂದ 19ರವರೆಗೆ 11 ದಿನಗಳ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜನರನ್ನು ನಿರ್ಭಂದಿಸಿ ಆದೇಶ ಹೊರಡಿಸಲಾಗಿದೆ.
ಈ ಕುರಿತು ವಿಜಯನಗರ ಡಿಸಿ ಅನಿರುದ್ಧ್ ಪಿ.ಶ್ರವಣ್ 11 ದಿನಗಳ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನು ಐತಿಹಾಸಿಕ ಪ್ರಸಿದ್ದ ಕಾರ್ಣಿಕವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಪ್ರತಿ ಬಾರಿ ನಡೆಯುವ ಕಾರ್ಣಿಕವನ್ನು ಭವಿಷ್ಯದ ದಿಕ್ಸೂಚಿ ಎಂದು ಕರೆಯಲಾಗುತ್ತದೆ. ಇದನ್ನು ವೀಕ್ಷಿಸಲು ಲಕ್ಷಾಂತರ ಜನರು ಸೇರುತ್ತಾರೆ. ಆದರೆ ಈ ಬಾರಿ ಕೊರೋನಾ ಇರುವ ಹಿನ್ನೆಲೆಯಲ್ಲಿ ರೋಗ ಹರಡುವ ಭೀತಿ ಇದೆ. ಆದ್ದರಿಂದ ಜನರಿಗೆ ನಿರ್ಭಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಳಿತವಾಗುತ್ತಲೇ ಇದೆ. ಈ ಹಿನ್ನಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವೀಕೆಂಡ್ ಕರ್ಫ್ಯೂವನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಹೆಚ್ಚು ಇರುವ ಕಾರಣ 50:50 ನಿಯಮ ಜಾರಿಗೆ ತರಲಾಗಿದ್ದು, ನೈಟ್ ಕರ್ಫ್ಯೂವನ್ನು ಮುಂದುವರೆಸಲಾಘಿದೆ. ಸಭೆ, ಸಮಾರಂಭಗಳಿಗೆ 200 ಜನರನ್ನು ಮಿತಿಗೊಳಿಸಲಾಗಿದ್ದು, ಆಯಾ ಜಿಲ್ಲೆಗೆ ಬೇಕಾದ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:
Weekend Curfew: ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ತೆರವು: ಕಠಿಣ ನಿಯಮ ಜಾರಿಗೆ ನಿರ್ಧಾರ
ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲೆ ಆರಂಭ; ಜ.29ರಂದು ಮತ್ತೆ ಸಭೆ- ಶಿಕ್ಷಣ ಸಚಿವ
Published On - 5:41 pm, Fri, 21 January 22