ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲೆ ಆರಂಭ; ಜ.29ರಂದು ಮತ್ತೆ ಸಭೆ- ಶಿಕ್ಷಣ ಸಚಿವ

ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಶಾಲೆ ಆರಂಭ; ಜ.29ರಂದು ಮತ್ತೆ ಸಭೆ- ಶಿಕ್ಷಣ ಸಚಿವ
ಶಿಕ್ಷಣ ಸಚಿವ ಬಿ ಸಿ ನಾಗೇಶ್ (ಸಂಗ್ರಹ ಚಿತ್ರ)

ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಉಳಿದ ಕಡೆ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಜ.29ರವರೆಗೆ ಶಾಲೆ ಬಂದ್ ಮಾಡಲು ಸರ್ಕಾರ ನಿರ್ಧರಿಸಲಾಗಿದೆ.

TV9kannada Web Team

| Edited By: Pavitra Bhat Jigalemane

Jan 21, 2022 | 6:03 PM

ಬೆಂಗಳೂರು: ರಾಜ್ಯದಲ್ಲಿ ಬೆಂಗಳೂರು (Bengaluru) ಹೊರತುಪಡಿಸಿ ಉಳಿದ ಕಡೆ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ ಜ.29ರವರೆಗೆ ಶಾಲೆ ಬಂದ್ (School Bund) ಮಾಡಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಶಾಲೆ ಓಪನ್ ಬಗ್ಗೆ ಜ.29ರಂದು ಮತ್ತೆ ಸಭೆ ನಡೆಸಿ ಶಾಲೆ ಓಪನ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಜೊತೆ ಸಭೆ ಬಳಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B C Nagesh) ಹೇಳಿಕೆ ನೀಡಿದ್ದಾರೆ.  ಬೆಂಗಳೂರು ಹೊರತುಪಡಿಸಿ ಉಳಿದ ಕಡೆ ಶಾಲೆ ನಡೆಯುತ್ತೆ, ಮಕ್ಕಳಿಗೆ ಸೋಂಕು ಹೆಚ್ಚಾದರೆ ಮಾತ್ರ ಶಾಲೆ ಬಂದ್‌ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. 

ಸೋಂಕು ಹೆಚ್ಚಳವಾದರೆ  ಮೂರು ದಿನ ಅಥವಾ 7 ದಿನ ಮಾತ್ರ ಶಾಲೆ ಬಂದ್‌ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಕಡಿಮೆ ಮಕ್ಕಳಿಗೆ ಸೋಂಕು ಬಂದ್ರೆ 3 ದಿನ ಶಾಲೆ ಬಂದ್​ ಮಾಡಲಾಗುವುದು, ಹೆಚ್ಚು ಮಕ್ಕಳಿಗೆ ಸೋಂಕು ಬಂದರೆ, ಅಂದರೆ 25-30 ಮಕ್ಕಳಿಗೆ ಸೋಂಕು ಬಂದ್ರೆ 7 ದಿನ ಶಾಲೆ ಬಂದ್‌ ಮಾಡಲಾಗುವುದು. ಶಾಲೆ ಬಂದ್ ಬಗ್ಗೆ ಸ್ಥಳೀಯ ಅಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈವರೆಗೆ ರಾಜ್ಯದಲ್ಲಿ 5 ಲಕ್ಷಕ್ಕಿಂತ ಹೆಚ್ಚು ಮಕ್ಕಳಿಗೆ ಕೊವಿಡ್‌ ಟೆಸ್ಟ್‌ ಮಾಡಲಾಗಿದೆ. ಈ ಪೈಕಿ ಶೇ.5ರಷ್ಟು ಮಕ್ಕಳಿಗೆ ಮಾತ್ರ ಸೋಂಕು ಪತ್ತೆ ಆಗಿದೆ. ತುಮಕೂರು, ಮೈಸೂರು ಜಿಲ್ಲೆಯಲ್ಲಿ ಹೆಚ್ಚು ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ವೀಕೆಂಡ್​ ಕರ್ಫ್ಯೂ ರದ್ದು ರಾಜ್ಯದಲ್ಲಿ ಈವರೆಗೆ ಜಾರಿಯಲ್ಲಿದ್ದ ವೀಕೆಂಡ್​ ಕರ್ಫ್ಯೂವನ್ನು ರದ್ದು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಸಚಿವ ಆರ್​ ಅಶೋಕ್​, ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಟಿ ನಡೆಸ ಮಾಹಿತಿ ನೀಡಿದ್ದಾರೆ. ನಾಳೆಯಿಂದ ವೀಕೆಂಡ್​ ಕರ್ಫ್ಯೂ ಇರುವುದಿಲ್ಲ. ತಜ್ಞರ ಸಲಹೆಯ ಮೇರೆಗೆ  ಈ ನಿರ್ಧಾರ ಕೈಗೊಳ್ಳಲಾಗಿದೆ.  ಆದರೆ ರಾಜ್ಯದಲ್ಲಿ ನೈಟ್​ಕರ್ಫ್ಯೂ ಇರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಹಾಗೂ ಉಳಿದ ಕೊವಿಡ್ ನಿಯಮ ಎಂದಿನಂತೆ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

Weekend Curfew Revoked: ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ತೆರವು: ಕಠಿಣ ನಿಯಮ ಜಾರಿಗೆ ನಿರ್ಧಾರ

Follow us on

Related Stories

Most Read Stories

Click on your DTH Provider to Add TV9 Kannada