AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ: ಆಲಮಟ್ಟಿ, ಬಸವಸಾಗರ ಹಾಗೂ ಕಬಿನಿ ಡ್ಯಾಂಗಳ ಇಂದಿನ ಸ್ಥಿತಿಗತಿ ಇಲ್ಲಿದೆ

ಕರ್ನಾಟಕದ ಜಲಾಶಯಗಳ (ಸೆಪ್ಟೆಂಬರ್ 20) ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಬಸವಸಾಗರ ಹಾಗೂ ಕಬಿನಿ ಡ್ಯಾಂಗಳ ಇಂದಿನ ನೀರಿನ ಮಟ್ಟ ಮತ್ತು ಹರಿವಿನ ವರದಿ ಇಲ್ಲಿದೆ. ಆಲಮಟ್ಟಿಯಲ್ಲಿ 14,873 ಕ್ಯೂಸೆಕ್ ಹಾಗೂ ನಾರಾಯಣಪುರದ ಬಸವಸಾಗರದಿಂದ 13,000 ಕ್ಯೂಸೆಕ್ ಹೊರಹರಿವು ದಾಖಲಾಗಿದ್ದು, ಮೈಸೂರಿನ ಕಬಿನಿ ಜಲಾಶಯದಲ್ಲಿ 10.99 ಟಿಎಂಸಿ నీరు ಸಂಗ್ರಹವಾಗಿದೆ. ಪೂರ್ಣ ಜಲಾಶಯ ವರದಿ ಪಡೆಯಿರಿ.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ: ಆಲಮಟ್ಟಿ, ಬಸವಸಾಗರ ಹಾಗೂ ಕಬಿನಿ ಡ್ಯಾಂಗಳ ಇಂದಿನ ಸ್ಥಿತಿಗತಿ ಇಲ್ಲಿದೆ
ಬಸವಸಾಗರ ಜಲಾಶಯ
ಭಾವನಾ ಹೆಗಡೆ
|

Updated on: Sep 20, 2026 | 10:55 AM

Share

ಮುಖ್ಯಾಂಶಗಳು

  • ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟದ ಹತ್ತಿರದಲ್ಲಿದ್ದು ಹೊರಹರಿವು ಮುಂದುವರಿದಿದೆ.
  • ಯಾದಗಿರಿಯ ಬಸವಸಾಗರ ಡ್ಯಾಂಗೆ 12,000 ಕ್ಯೂಸೆಕ್ ಒಳಹರಿವು ದಾಖಲಾಗಿ ನೀರು ಹೊರಗೆ.
  • ಮೈಸೂರಿನ ಕಬಿನಿ ಜಲಾಶಯದಲ್ಲಿ ಪ್ರಸ್ತುತ 10.99 ಟಿಎಂಸಿ ನೀರು ಸಂಗ್ರಹವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 20: ರಾಜ್ಯದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಬಸವಸಾಗರ ಹಾಗೂ ಕಬಿನಿ ಡ್ಯಾಂಗಳ ಇಂದಿನ ನೀರಿನ ಮಟ್ಟ ಮತ್ತು ಹರಿವಿನ ಪ್ರಮಾಣದ ವಿವರಗಳು ಹೊರಬಿದ್ದಿವೆ. ಉತ್ತರ ಕರ್ನಾಟಕದ ಕೃಷ್ಣಾ ನದಿ ಪಾತ್ರದ ಜಲಾಶಯಗಳಲ್ಲಿ ಹೊರಹರಿವು ಮುಂದುವರಿದಿದ್ದರೆ, ದಕ್ಷಿಣ ಕರ್ನಾಟಕದ ಮೈಸೂರು ಭಾಗದ ಕಬಿನಿ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಧಾರಣ ಮಟ್ಟದಲ್ಲಿದೆ. ವಿಜಯಪುರ, ಯಾದಗಿರಿ ಹಾಗೂ ಮೈಸೂರು ಜಿಲ್ಲೆಗಳ ಈ ಪ್ರಮುಖ ಜಲಾಶಯಗಳ ಇಂದಿನ ನೀರು ಸಂಗ್ರಹ ಹಾಗೂ ಹರಿವಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ನೀರಿನ ಮಟ್ಟ: 519.22 ಮೀಟರ್
  • ಒಳಹರಿವು: ಇಲ್ಲ
  • ಹೊರಹರಿವು: 14,873 ಕ್ಯೂಸೆಕ್

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ (ಆಲಮಟ್ಟಿ) ಜಲಾಶಯದಲ್ಲಿ ಪ್ರಸ್ತುತ ಗರಿಷ್ಠ ಮಟ್ಟದ ಹತ್ತಿರ ನೀರು ಸಂಗ್ರಹವಾಗಿದೆ.

ಬಸವಸಾಗರ ಜಲಾಶಯ

  • ಗರಿಷ್ಠ ಮಟ್ಟ: 492.25 ಮೀಟರ್
  • ಇಂದಿನ ನೀರಿನ ಮಟ್ಟ: 490.92 ಮೀಟರ್
  • ಒಳಹರಿವು: 12,000 ಕ್ಯೂಸೆಕ್
  • ಹೊರಹರಿವು: 13,000 ಕ್ಯೂಸೆಕ್

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿ ಇರುವ ಬಸವಸಾಗರ ಜಲಾಶಯಕ್ಕೆ ಒಳಹರಿವು ಮುಂದುವರಿದಿದ್ದು, ನದಿಗೆ ನೀರನ್ನು ಹರಿಸಲಾಗುತ್ತಿದೆ.

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 84.00 ಅಡಿ
  • ಇಂದಿನ ಮಟ್ಟ: 68.57 ಅಡಿ
  • ಒಟ್ಟು ಸಾಮರ್ಥ್ಯ: 19.52 ಟಿಎಂಸಿ
  • ಇಂದಿನ ಸಂಗ್ರಹ: 10.99 ಟಿಎಂಸಿ (ಲೈವ್ ಕ್ಯಾಪ್: 1.18 ಟಿಎಂಸಿ)
  • ಒಳಹರಿವು: 864 ಕ್ಯೂಸೆಕ್
  • ಹೊರಹರಿವು: 500 ಕ್ಯೂಸೆಕ್ (ನದಿಗೆ: 500 ಕ್ಯೂಸೆಕ್, ಕಾಲುವೆಗಳಿಗೆ: 0 ಕ್ಯೂಸೆಕ್)

ಮೈಸೂರು ಜಿಲ್ಲೆಯ ಪ್ರಮುಖ ಜಲಾಶಯವಾದ ಕಬಿನಿ ವ್ಯಾಪ್ತಿಯಲ್ಲಿ 2 ಮಿ.ಮೀ ಮಳೆಯಾಗಿದ್ದು, ನೀರಿನ ಸಂಗ್ರಹ ಕಾಯ್ದುಕೊಳ್ಳಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ತಡರಾತ್ರಿ ಮಳೆಗೆ ತತ್ತರಿಸಿದ ಬೆಂಗಳೂರು!
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ವಾರ ಭವಿಷ್ಯ: ಗ್ರಹಗಳ ಸ್ಥಾನಪಲ್ಲಟ, ದ್ವಾದಶ ರಾಶಿಗಳ ಮೇಲೆ ಪ್ರಭಾವ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ರವಿ ಕನ್ಯಾ ರಾಶಿಯಲ್ಲಿ, ಚಂದ್ರ ಧನು ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದ
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
ಮನೆ ಕಟ್ಟುವವರಿಗೆ ಗುಡ್​ನ್ಯೂಸ್: ನಿಮಿಷಗಳಲ್ಲಿ ಸಿಗಲಿದೆ ಪ್ಲಾನ್ ಅಪ್ರೂವಲ್
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಶಿಕ್ಷಕರಿಗೆ ನೊಟೀಸ್
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಪ್ರಚೋದನಕಾರಿ ಭಾಷಣ: ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಕೈ ದೂರು
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ