AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಗೇಮ್ಸ್ 2026: ಪದಕದ ಖಾತೆ ತೆರೆದ ಭಾರತ

ಜಪಾನ್‌ನಲ್ಲಿ ಇಂದಿನಿಂದ ಅದ್ಧೂರಿಯಾಗಿ ಆರಂಭಗೊಂಡಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಶುಭಾರಂಭ ಮಾಡಿದೆ. ನಿರೀಕ್ಷೆಯಂತೆಯೇ ಶೂಟಿಂಗ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಶೂಟರ್‌ಗಳಾದ ಇಲಾವೇನಿಲ್ ವಲರಿವಾನ್, ಸೋನಂ ಮಸ್ಕರ್ ಮತ್ತು ವಿದರ್ಸಾ ಕೆ. ವಿನೋದ್ ಅಪ್ರತಿಮ ಪ್ರದರ್ಶನ ನೀಡಿ ದೇಶಕ್ಕೆ ಬೆಳ್ಳಿ ಪದಕವನ್ನು ಗೆದ್ದುಕೊಡುವ ಮೂಲಕ ಪದಕದ ಬೇಟೆಯನ್ನು ಯಶಸ್ವಿಯಾಗಿ ಶುರುಮಾಡಿದ್ದಾರೆ.

ಏಷ್ಯನ್ ಗೇಮ್ಸ್ 2026: ಪದಕದ ಖಾತೆ ತೆರೆದ ಭಾರತ
ಭಾರತ ಏರ್ ರೈಫಲ್ ತಂಡImage Credit source: Asian Games
ಝಾಹಿರ್ ಯೂಸುಫ್
|

Updated on:Sep 20, 2026 | 10:53 AM

Share

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ಆರಂಭಿಕ ದಿನವೇ ಭಾರತ ಪದಕದ ಖಾತೆಯನ್ನು ತೆರೆದಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಭಾರತದ ಪ್ರತಿಭಾವಂತ ಶೂಟರ್‌ಗಳಾದ ಇಲಾವೇನಿಲ್ ವಲರಿವಾನ್, ಸೋನಂ ಮಸ್ಕರ್ ಮತ್ತು ವಿದರ್ಸಾ ಕೆ. ವಿನೋದ್ ಭರ್ಜರಿ ಪ್ರದರ್ಶನ ನೀಡಿ ದೇಶಕ್ಕೆ ಮೊದಲ ಬೆಳ್ಳಿ ಪದಕವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಚೀನಾಕ್ಕೆ ಕಠಿಣ ಪೈಪೋಟಿ:

ಐಚಿ ಪ್ರಾಂತ್ಯದ ಜನರಲ್ ಶೂಟಿಂಗ್ ಗ್ಯಾಲರಿಯಲ್ಲಿ ನಡೆದ ತೀವ್ರ ಹಣಾಹಣಿಯ 6 ಸುತ್ತುಗಳ ನಂತರ, ಭಾರತೀಯ ಶೂಟರ್‌ಗಳು ಒಟ್ಟು 1898.0 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದರು. ಈ ವಿಭಾಗದಲ್ಲಿ ಚೀನಾ ತಂಡವು ಹೊಸ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರೆ, ಆತಿಥೇಯ ಜಪಾನ್ ತಂಡ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

ಚೀನಾ ಶೂಟರ್​ಗಳು ಒಟ್ಟು 1904.2 ಅಂಕಗಳನ್ನು ಕಲೆಹಾಕಿದರೆ, ಭಾರತೀಯರು 1898.0 ಅಂಕಗಳಿಸಿ ದ್ವಿತೀಯ ಸ್ಥಾವನ್ನು ಪಡೆದುಕೊಂಡಿತು.

ಪದಕ ದೇಶ ಶೂಟರ್‌ಗಳು ಒಟ್ಟು ಅಂಕಗಳು
🥇 ಚಿನ್ನ ಚೀನಾ ಜಿಫೈ ವಾಂಗ್, ಜಿಯಾಯು ಹ್ಯಾನ್, ಯುಚೆನ್ ಡು 1904.2 (ವಿಶ್ವ ದಾಖಲೆ)
🥈 ಬೆಳ್ಳಿ ಭಾರತ ಸೋನಂ ಮಸ್ಕರ್, ಇಲಾವೇನಿಲ್ ವಲರಿವಾನ್, ವಿದರ್ಸಾ ಕೆ. ವಿನೋದ್ 1898.0
🥉 ಕಂಚು ಜಪಾನ್ ಹಿನಾಟಾ ತೈಚಿ, ಮಿಸಾಕಿ ನೊಬಾಟಾ, ಶಿಯೋರಿ ಹಿರತಾ 1897.1

ವೈಯಕ್ತಿಕ ವಿಭಾಗದಲ್ಲೂ ಭರವಸೆ:

ತಂಡದ ಯಶಸ್ಸಿನ ಜೊತೆಗೆ, ಭಾರತದ ಸೋನಂ ಮಸ್ಕರ್ ಮತ್ತು ಇಲಾವೇನಿಲ್ ವಲರಿವಾನ್ ಇಬ್ಬರೂ ತಮ್ಮ ಅಮೋಘ ಪ್ರದರ್ಶನದ ಮೂಲಕ ಇಂದು ನಡೆಯಲಿರುವ ಅಂತಿಮ 8 ಶೂಟರ್‌ಗಳ ವೈಯಕ್ತಿಕ ಫೈನಲ್ ಹಂತಕ್ಕೆ ಅರ್ಹತೆ ಪಡೆದಿದ್ದಾರೆ.

  • ಸೋನಂ ಮಸ್ಕರ್: ಅರ್ಹತಾ ಸುತ್ತಿನಲ್ಲಿ 634.1 ಅಂಕಗಳನ್ನು ಗಳಿಸುವ ಮೂಲಕ ಒಟ್ಟಾರೆ 3ನೇ ಸ್ಥಾನ ಪಡೆದು ಫೈನಲ್ ತಲುಪಿದ್ದಾರೆ.
  • ಇಲಾವೇನಿಲ್ ವಲರಿವಾನ್: ಭರ್ಜರಿ ಪ್ರದರ್ಶನ ನೀಡಿ 633.5 ಅಂಕಗಳೊಂದಿಗೆ 7ನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ.
  • ವಿದರ್ಸಾ ಕೆ. ವಿನೋದ್: ತಂಡದ ಒಟ್ಟು ಮೊತ್ತಕ್ಕೆ ಪ್ರಮುಖ 630.4 ಅಂಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಬೆಳ್ಳಿ ಪದಕ ಗೆಲ್ಲಲು ನೆರವಾಗಿದ್ದಾರೆ. ಇದಾಗ್ಯೂ ವೈಯುಕ್ತಿಕ ವಿಭಾಗದಲ್ಲಿ ಫೈನಲ್​ಗೆ ತಲುಪಲು ಸಾಧ್ಯವಾಗಿಲ್ಲ.

ಇತಿಹಾಸ ಪುರಾವರ್ತನೆ:

ಭಾರತ ತಂಡವು ಕಳೆದ ಬಾರಿ ನಡೆದ ಏಷ್ಯನ್ ಗೇಮ್ಸ್‌ನಲ್ಲೂ ಇದೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನೇ ಗೆದ್ದಿತ್ತು.

  • 2023ರಲ್ಲಿ (ಹ್ಯಾಂಗ್‌ಝೌ, ಚೀನಾ): ಕಳೆದ ಬಾರಿ ನಡೆದ ಏಷ್ಯನ್ ಗೇಮ್ಸ್‌ನ “ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ” ಭಾರತದ ತಂಡ (ರಮಿತಾ, ಆಶಿ, ಮೆಹುಲಿ) ಬೆಳ್ಳಿ ಪದಕ ಗೆದ್ದಿತ್ತು.
  • 2026ರಲ್ಲಿ (ಐಚಿ-ನಗೋಯಾ, ಜಪಾನ್): ಈಗ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಅದೇ ಸ್ಪರ್ಧೆಯಲ್ಲಿ (ಅದೇ 10 ಮೀಟರ್ ಏರ್ ರೈಫಲ್ ತಂಡ ವಿಭಾಗ) ಭಾರತದ ಹೊಸ ತ್ರಿವಳಿ ತಂಡ (ಇಲಾವೇನಿಲ್, ಸೋನಂ, ವಿದರ್ಸಾ) ಮತ್ತೆ ಬೆಳ್ಳಿ ಪದಕವನ್ನೇ ಮುಡಿಗೇರಿಸಿಕೊಂಡಿದೆ.

ಇದನ್ನೂ ಓದಿ: ವೈಭವ್ ಟೆಸ್ಟ್​ ಭವಿಷ್ಯದ ಬಗ್ಗೆ ಮಾಜಿ ಕ್ರಿಕೆಟರುಗಳ ‘ಭಿನ್ನಾಭಿಪ್ರಾಯ’

ಒಟ್ಟಾರೆಯಾಗಿ ಹೇಳುವುದಾದರೆ, 2026ರ ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನ ಆರಂಭಿಕ ದಿನವೇ ಭಾರತೀಯ ಮಹಿಳಾ ಶೂಟರ್‌ಗಳು ಬೆಳ್ಳಿ ಪದಕ ಗೆದ್ದು ದೇಶಕ್ಕೆ ಅದ್ಭುತ ಆರಂಭ ತಂದುಕೊಟ್ಟಿದ್ದಾರೆ. ಈ ಶುಭಾರಂಭದೊಂದಿಗೆ ಭಾರತದ ಇನ್ನುಳಿದ ಕ್ರೀಡಾಪಟುಗಳು ಮತ್ತಷ್ಟು ಪದಕಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.

Published On - 10:52 am, Sun, 20 September 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್​​ಡಿಕೆಗೆ ಪ್ರಿಯಾಂಕ್ ಕೌಂಟರ್​
RSSಗೇ ಹೆದರಲಿಲ್ಲ, ನಿಮಗೆ ಹೆದರ್ತೀನಾ?: ಹೆಚ್​​ಡಿಕೆಗೆ ಪ್ರಿಯಾಂಕ್ ಕೌಂಟರ್​
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ