Shocking News: ಮೂರು ತಿಂಗಳಿಂದ ತಂದೆಯ ಶವದೊಟ್ಟಿಗೇ ವಾಸ ಮಾಡುತ್ತಿದ್ದ ಪುತ್ರ !

| Updated By: Lakshmi Hegde

Updated on: Nov 24, 2021 | 10:03 AM

ಪುತ್ರ ಕೌಶಿಕ್​ ಮಾನಸಿಕವಾಗಿ ಸ್ಥಿಮಿತದಲ್ಲಿ ಇಲ್ಲದ ವ್ಯಕ್ತಿ ಎಂದು ಹೇಳಿರುವ ಪೊಲೀಸರು ಇದೀಗ ಶವವನ್ನು ಪೋಸ್ಟ್​ಮಾರ್ಟಮ್​​ಗೆ ಕಳಿಸಿದ್ದಾರೆ. ಸಹಜ ಸಾವು ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವುದು ಪೋಸ್ಟ್​ ಮಾರ್ಟಮ್​ ರಿಪೋರ್ಟ್ ಬಂದ ಬಳಿಕವಷ್ಟೇ ಎಂದು ಹೇಳಿದ್ದಾರೆ.

Shocking News: ಮೂರು ತಿಂಗಳಿಂದ ತಂದೆಯ ಶವದೊಟ್ಟಿಗೇ ವಾಸ ಮಾಡುತ್ತಿದ್ದ ಪುತ್ರ !
ಸಾಂಕೇತಿಕ ಚಿತ್ರ
Follow us on

ತಂದೆ ಮೃತಪಟ್ಟು ಮೂರು ತಿಂಗಳಾದರೂ ಅವರ ದೇಹವನ್ನು ಮಣ್ಣು ಮಾಡದೆ, ಆ ಶವದೊಂದಿಗೆ ಮೂರು ತಿಂಗಳು ಕಳೆದ 40ವರ್ಷದ ಮಗನನ್ನು ಇದೀಗ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಶಾಕಿಂಗ್ ಘಟನೆ ನಡೆದದ್ದು ಕೋಲ್ಕತ್ತದಲ್ಲಿ. ಮೃತ ವ್ಯಕ್ತಿಯ ಹೆಸರು ಸಂಗ್ರಾಮ್​ ಡೇ. ಅವರಿಗೆ 70 ವರ್ಷವಾಗಿತ್ತು. ವಯೋಸಹಜ ಸಮಸ್ಯೆಯಿಂದ ಮೃತಪಟ್ಟಿದ್ದರು.  ಆದರೆ ಅವರ ಮಗ ಕೌಶಿಕ್​ ಡೇ  ಆ ಶವವನ್ನು ಏನೂ ಮಾಡಲಾಗದೆ ಅದರೊಂದಿಗೆ ಮೂರು ತಿಂಗಳಿಂದ ವಾಸವಾಗಿದ್ದ. 

ಪುತ್ರ ಕೌಶಿಕ್​ ಮಾನಸಿಕವಾಗಿ ಸ್ಥಿಮಿತದಲ್ಲಿ ಇಲ್ಲದ ವ್ಯಕ್ತಿ ಎಂದು ಹೇಳಿರುವ ಪೊಲೀಸರು ಇದೀಗ ಶವವನ್ನು ಪೋಸ್ಟ್​ಮಾರ್ಟಮ್​​ಗೆ ಕಳಿಸಿದ್ದಾರೆ. ಸಹಜ ಸಾವು ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವುದು ಪೋಸ್ಟ್​ ಮಾರ್ಟಮ್​ ರಿಪೋರ್ಟ್ ಬಂದ ಬಳಿಕವಷ್ಟೇ ಎಂದು ಹೇಳಿದ್ದಾರೆ. ಸಂಗ್ರಾಮ್ ಡೇ ಅವರು ಮುಂಬೈನ ಬಾಬಾ ಅಟೋಮಿಕ್​ ರಿಸರ್ಚ್​ ಸೆಂಟರ್​​ನಲ್ಲಿ ಕೆಲಸ ಮಾಡಿದವರು. ಕೋಲ್ಕತ್ತದ ಕೆ.ಪಿ.ರಾಯ್​ ಲೇನ್​ನಲ್ಲಿ ಅವರ ಮನೆಯಿತ್ತು. ಇದೀಗ ಅವರ ಶವ ಬಹುತೇಕ ಅಸ್ಥಿಪಂಜರದಂತಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.   ಮೂರು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದಾಗಿ ಕೌಶಿಕ್​ ತಿಳಿಸಿದ್ದರೂ, ನಿಖರ ಸಮಯ ತಿಳಿಯಲು ಪೋಸ್ಟ್​ಮಾರ್ಟಮ್​ ರಿಪೋರ್ಟ್ ಬರಬೇಕಿದೆ.

ಇನ್ನೊಂದು ಶಾಕಿಂಗ್​ ಸುದ್ದಿಯೆಂದರೆ, ಪತ್ನಿ ಅರುಣಾ ಡೇ (65) ಕೂಡ ಅದೇ ಮನೆಯಲ್ಲಿದ್ದಾರೆ. ಆದರೆ ಅವರಿಗೆ ಎದ್ದು ಓಡಾಡಲೂ ಆಗದಷ್ಟು ಅನಾರೋಗ್ಯ. ಸಂಗ್ರಾಮ್​ ಡೇ ಕೆಲವು ದಿನಗಳಿಂದ ಕಾಣುತ್ತಿಲ್ಲ. ಆ ಮನೆ ಸ್ವಲ್ಪ ವಿಭಿನ್ನವಾಗಿ ತೋರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಸುಳಿವು ನೀಡಿದ ಬೆನ್ನಲ್ಲೇ ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿದ್ದೇವೆ. ಆಗ ಅವರು ಸತ್ತಿದ್ದು ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಿಮ್ಸ್​ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ನುರಿತ ವ್ಯವಸ್ಥೆ ಇಲ್ಲ; ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

Published On - 9:53 am, Wed, 24 November 21