ಬುರ್ಖಾ ಧರಿಸದೆ, ಜೀನ್ಸ್ ತೊಟ್ಟು ಬಂದಿದ್ದಾಳೆ ಎಂಬ ಕಾರಣಕ್ಕೆ ಮುಸ್ಲಿಂ ಹುಡುಗಿಯೊಬ್ಬಳಿಗೆ ಅಂಗಡಿ ಮಾಲೀಕ ಒದ್ದು ಕಳಿಸಿದ ಘಟನೆ ಅಸ್ಸಾಂನ ಬಿಸ್ವನಾಥ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ನಡೆದದ್ದು ಮೊಬೈಲ್ ಫೋನ್ ಸಾಮಗ್ರಿಗಳ ಅಂಗಡಿಯಲ್ಲಿ. ಬಾಲಕಿ ಇಯರ್ ಫೋನ್ ಖರೀದಿ ಮಾಡಲೆಂದು ಹೋಗಿದ್ದಳು.
ಅಂಗಡಿ ಮಾಲೀಕನ ಹೆಸರು ನೂರುಲ್ ಅಮಿನ್. ಆಕೆ ಜೀನ್ಸ್ ಧರಿಸಿ ಹೋಗಿದ್ದರಿಂದ ಕೋಪಗೊಂಡ ಆತ ಇಯರ್ ಫೋನ್ ಕೊಡಲು ನಿರಾಕರಿಸಿದ್ದಲ್ಲದೆ, ಕಾಲಿನಲ್ಲಿ ಅಂಗಡಿಯಿಂದ ತಳ್ಳಿದ್ದಾನೆ. ಬುರ್ಖಾ ಧರಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಈ ಬಗ್ಗೆ ಬಾಲಕಿಯೇ ಹೇಳಿಕೊಂಡಿದ್ದಾಳೆ. ಆತ ವಯಸ್ಸಾದ ವ್ಯಕ್ತಿ..ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇನ್ನೊಮ್ಮೆ ತನ್ನ ಅಂಗಡಿಗೆ ಬರಬೇಡ ಎಂದು ಹೇಳಿದ್ದಾನೆ. ಅವನ ಅಂಗಡಿ ಆತನ ಮನೆಯಲ್ಲೇ ಇದೆ. ನನ್ನನ್ನು ತಳ್ಳುವುದನ್ನು ಆತನ ಮನೆಯವರೆಲ್ಲ ನೋಡಿದರೂ ಕೂಡ ಸುಮ್ಮನಿದ್ದರು. ಅವರ ಮನೆಯಲ್ಲಿ ಹೆಂಗಸರು ಬುರ್ಖಾ, ಹಿಜಾಬ್ ಧರಿಸಿದ್ದರು ಎಂದು ಬಾಲಕಿ ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಬಾಲಕಿ ಮನೆಗೆ ಬಂದು ಅಂಗಡಿಯಲ್ಲಿ ನಡೆದ ಘಟನೆಯನ್ನು ವಿಸ್ತಾರವಾಗಿ ಹೇಳಿಕೊಂಡಿದ್ದಾಳೆ. ಅದನ್ನು ಕೇಳಿದ ಆಕೆಯ ತಂದೆ ಅಂಗಡಿಗೆ ಹೋದರೆ, ಆ ಮಾಲೀಕನ ಇಬ್ಬರು ಮಕ್ಕಳು ಬಾಲಕಿಯ ಅಪ್ಪನ ಮೇಲೆ ಕೂಡ ಹಲ್ಲೆಗೆ ಮುಂದಾಗಿದ್ದಾರೆ. ಅದಾದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಎಸ್.ಆರ್.ಶ್ರೀನಿವಾಸ್ ಕಾಂಗ್ರೆಸ್ಗೆ ಬಂದ್ರೆ ಗುಬ್ಬಿ ಕ್ಷೇತ್ರಕ್ಕೆ ಅವರೇ ಅಭ್ಯರ್ಥಿ: ಸಿದ್ದರಾಮಯ್ಯ ಘೋಷಣೆ
T20 World Cup: ಮಾತಿನ ಮೇಲೆ ನಿಲ್ಲದ ಕೊಹ್ಲಿ! ತಂಡದ ಕಳಪೆ ಪ್ರದರ್ಶನಕ್ಕೆ ಕೊಹ್ಲಿ ಎಡವಟ್ಟು ನಿರ್ಧಾರಗಳೇ ಕಾರಣ?