ಜೈಪುರ: 14 ವರ್ಷದ ಅಪ್ರಾಪ್ತ ಬಾಲಕನ ಮೇಲೆ ನ್ಯಾಯಾಧೀಶರೇ ಅತ್ಯಾಚಾರ ನಡೆಸಿರುವ ವಿಚಿತ್ರ ಮತ್ತು ಆಘಾತಕಾರಿ ಘಟನೆ ರಾಜಸ್ಥಾನದ ಭರತ್ಪುರ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ವಿಶೇಷ ನ್ಯಾಯಾಧೀಶರು ಸೇರಿ ಮೂವರು 14 ವರ್ಷ ವಯಸ್ಸಿನ ಹುಡುಗನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಬಗ್ಗೆ ಅತ್ಯಾಚಾರ ಸಂತ್ರಸ್ತನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ 1 ತಿಂಗಳಿನಿಂದ ಎಸಿಬಿ ವಿಶೇಷ ನ್ಯಾಯಾಧೀಶ ಮತ್ತಿತರ ಇಬ್ಬರು ನನ್ನ ಮಗನಿಗೆ ಡ್ರಗ್ಸ್ ಕೊಟ್ಟು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನನ್ನ ಮಗ ಟೆನ್ನಿಸ್ ಆಡಲು ಒಂದು ಕ್ರೀಡಾಂಗಣಕ್ಕೆ ಹೋಗುತ್ತಿದ್ದ. ಅಲ್ಲಿ ಅನೇಕ ಪೋಲಿಸ್ ಅಧಿಕಾರಿಗಳು ಮತ್ತು ನ್ಯಾಯಾಧೀಶರು ಸಹ ಆಡಲು ಬರುತ್ತಿದ್ದರು. ಆರೋಪಿ ನ್ಯಾಯಾಧೀಶರಾದ ಜಿತೇಂದ್ರ ಸಿಂಗ್ ಗೋಲಿಯ ಮತ್ತಿತರ ಇಬ್ಬರು ಅಧಿಕಾರಿಗಳು ನನ್ನ ಮಗನನ್ನು ಕ್ರೀಡಾಂಗಣದಿಂದ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಕೆಲವು ಮಾದಕದ್ರವ್ಯದ ವಸ್ತುಗಳನ್ನು ನೀಡಿ ಆತನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ವಿಷಯವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತನ ತಾಯಿ ಆರೋಪಿಸಿದ್ದಾರೆ.
ಎಸಿಬಿ ಸರ್ಕಲ್ ಆಫೀಸರ್ ಪರಮೇಶ್ವರ್ ಲಾಲ್ ಯಾದವ್ ಹಾಗೂ ಕಟಾರಾ ಕೂಡ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಈ ವಿಷಯ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರುಗಳ ಆಧಾರದಲ್ಲಿ ನ್ಯಾಯಾಧೀಶರು ಮತ್ತು ಇಬ್ಬರು ಇತರರ ಮೇಲೆ ಅತ್ಯಾಚಾರ ಮತ್ತು ಇತರ ಆರೋಪಗಳ ಆಧಾರದ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Crime News: ಹೋಂ ವರ್ಕ್ ಮಾಡದ 7ನೇ ಕ್ಲಾಸ್ ವಿದ್ಯಾರ್ಥಿಯನ್ನು ಥಳಿಸಿ ಕೊಂದ ಶಿಕ್ಷಕ!
Murder: ಫಿಶ್ ಕರಿಗಾಗಿ ಗೆಳೆಯನಿಂದಲೇ ಬರ್ಬರ ಹತ್ಯೆ!