Murder: ಫಿಶ್​ ಕರಿಗಾಗಿ ಗೆಳೆಯನಿಂದಲೇ ಬರ್ಬರ ಹತ್ಯೆ!

Crime News: ಎಲ್ಲರೂ ಕುಳಿತು ಊಟ ಮಾಡುವಾಗ ಸಂದೀಪ್​ ಇನ್ನೂ ಹೆಚ್ಚು ಫಿಶ್ ಕರಿ ಬೇಕೆಂದು ಹಠ ಹಿಡಿದ. ಆದರೆ, ಸಂದೀಪ್​ ಅಡುಗೆಗೆ ಯಾವುದೇ ಸಹಾಯ ಮಾಡದ ಕಾರಣ ರಂಜಿತ್ ಹೆಚ್ಚು ಫಿಶ್ ಕರಿ ನೀಡಲು ಒಪ್ಪಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆಯಿತು.

Murder: ಫಿಶ್​ ಕರಿಗಾಗಿ ಗೆಳೆಯನಿಂದಲೇ ಬರ್ಬರ ಹತ್ಯೆ!
ಫಿಶ್ ಕರಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 30, 2021 | 7:47 PM

ರಾಜ್​ಕೋಟ್: ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೆ ಕೊಲೆಗಳೇ ನಡೆದ ಅನೇಕ ಉದಾಹರಣೆಗಳಿವೆ. ಫಿಶ್​ ಕರಿಗಾಗಿ ವ್ಯಕ್ತಿಯೊಬ್ಬನನ್ನು ಕೊಂದಿರುವ ವಿಚಿತ್ರ ಮತ್ತು ಆಘಾತಕಾರಿ ಘಟನೆ ಗುಜರಾತ್​ನಲ್ಲಿ ನಡೆದಿದೆ. ರಂಜಿತ್ ಕುನ್ವರಿಯ ಎಂಬ 32 ವರ್ಷದ ವ್ಯಕ್ತಿ ಸಾವನ್ನಪ್ಪಿದಾತ. ಆತನನ್ನು ಕಾರಿನ ಕೆಳಗೆ ಹಾಕಿ ಆತನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲಾಗಿದೆ.

ಮಲಿಯ ಮಿಯಾನ ತಾಲೂಕಿನ ವೆನಸರ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಂಜಿತ್ ಕುನ್ವರಿಯ, ಆತನ ಕಸಿನ್​ಗಳಾದ ಅಶೋಕ್, ಸುನಿಲ್ ಮತ್ತು ಪ್ರಕಾಶ್ ಪಾರ್ಟಿಯೊಂದಕ್ಕೆ ಹೋಗಿದ್ದರು. ಡ್ರಿಂಕ್ ಪಾರ್ಟಿ ಮಾಡಿದ ನಂತರ ಅವರು ನದಿಯಲ್ಲಿ ಫಿಶಿಂಗ್​ಗೆ ಹೋದರು. ಅಲ್ಲಿ ಪಿಶ್ ಕರಿ ಮತ್ತು ಅನ್ನ ಮಾಡಿಕೊಂಡು ಭರ್ಜರಿಯಾಗಿ ಊಟ ಮಾಡಲು ಎಲ್ಲ ರೆಡಿ ಮಾಡಿಕೊಂಡರು.

ಫಿಶಿಂಗ್​ಗೆ ಹೋದಾಗ ಅಲ್ಲಿ ಬಹಳಷ್ಟು ಮೀನುಗಳು ಸಿಕ್ಕವು. ಇದರಿಂದ ಸುನಿಲ್​ ತನ್ನ ಅಣ್ಣ ಸಂದೀಪ್​ನನ್ನು ಕೂಡ ಪಾರ್ಟಿಗೆ ಬರುವಂತೆ ಆಹ್ವಾನಿಸಿದ. ಆಗ ಎಲ್ಲರೂ ಕುಳಿತು ಊಟ ಮಾಡುವಾಗ ಸಂದೀಪ್​ ಇನ್ನೂ ಹೆಚ್ಚು ಫಿಶ್ ಕರಿ ಬೇಕೆಂದು ಹಠ ಹಿಡಿದ. ಆದರೆ, ಸಂದೀಪ್​ ಅಡುಗೆಗೆ ಯಾವುದೇ ಸಹಾಯ ಮಾಡದ ಕಾರಣ ರಂಜಿತ್ ಹೆಚ್ಚು ಫಿಶ್ ಕರಿ ನೀಡಲು ಒಪ್ಪಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆಯಿತು.

ಈ ಅವಮಾನದಿಂದ ಸಂದೀಪ್​ನ ಸೋದರ ಸುನಿಲ್​ಗೆ ಬಹಳ ಕೋಪ ಬಂದು ಅಲ್ಲಿಂದ ಎದ್ದು ಹೋದ. ಆತ ಮನೆಗೆ ವಾಪಾಸ್ ಹೋಗುತ್ತಿರಬಹುದು ಎಂದು ಗೆಳೆಯರೆಲ್ಲ ಅಂದುಕೊಂಡರು. ಆದರೆ, ಕೋಪದಿಂದ ಕಾರು ಸ್ಟಾರ್ಟ್ ಮಾಡಿದ ಸುನಿಲ್ ರಂಜಿತ್​ನನ್ನು ಕಾರಿನ ಕೆಳಗೆ ಬೀಳಿಸಿ ಆತನ ಮೇಲೆ ಕಾರು ಹತ್ತಿಸಿದ. ಇದರಿಂದ ರಂಜಿತ್ ಸ್ಥಳದಲ್ಲೇ ಸಾವನ್ನಪ್ಪಿದ. ಬಳಿಕ ಸುನಿಲ್ ಅಲ್ಲೇ ಕಾರನ್ನು ಬಿಟ್ಟು ಓಡಿಹೋದ. ಬಳಿಕ ಪೊಲೀಸರು ಸುನಿಲ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: Murder: ಪ್ರೀತಿಸಲು ಒಪ್ಪದ ವಿವಾಹಿತ ಮಹಿಳೆಯನ್ನು ಕೊಂದು, ಹೆಣವನ್ನು ತಬ್ಬಿ ಮಲಗಿದ ಪಾಗಲ್ ಪ್ರೇಮಿ!

Murder: ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ; ಬೆಳ್ಳಿ ಗೆಜ್ಜೆಗಾಗಿ ಕಾಲನ್ನೇ ಕತ್ತರಿಸಿದ ಹಂತಕರು

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ