ಮುಂಬೈ: ಮಹಾರಾಷ್ಟ್ರದ ಘಾಟ್‌ಕೋಪರ್ ಪ್ರದೇಶದಲ್ಲಿ ಕ್ಯಾಬ್ ಚಾಲಕ ತಮ್ಮ ಆಡಿ ಕಾರಿಗೆ ಡಿಕ್ಕಿ ಹೊಡೆದ ಎಂದು ದಂಪತಿಗಳಿಬ್ಬರು ಕ್ಯಾಬ್ ಚಾಲಕನ್ನು ಎತ್ತಿ ನೆಲಕ್ಕೆ ಬಡಿದು, ಹಲ್ಲೆ ಮಾಡಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ, ಆಡಿ ಕಾರಿನಲ್ಲಿದ್ದ ದಂಪತಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕ್ಯಾಬ್ ಡ್ರೈವರ್ ಪೊಲೀಸರಿಗೆ ದೂರು ನೀಡಿದ್ದಾನೆ. ಕ್ಯಾಬ್ ಚಾಲಕನ ದೂರಿನ ಹಾಗೂ ಸಿಸಿಟಿವಿ ದೃಶ್ಯವನ್ನು ಆಧಾರವಾಗಿಟ್ಟುಕೊಂಡು ದಂಪತಿಗಳ ವಿರುದ್ಧ ದೂರು ದಾಖಲಿಸಲಾಗಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋದಲ್ಲಿ ಕ್ಯಾಬ್ ಚಾಲಕನನ್ನು ಎತ್ತಿ ನೆಲಕ್ಕೆ ಎಸೆದಿರುವುದನ್ನು ಕಾಣಬಹುದು. ಇದರಿಂದ ಕ್ಯಾಬ್ ಡ್ರೈವರ್ಗೆ ಗಂಭೀರ ಗಾಯಗಳಾಗಿವೆ. ಓಲಾ ಕ್ಯಾಬ್ ಚಾಲಕ ಕಯಾಮುದ್ದೀನ್ ಅನ್ಸಾರಿ ಅವರು ಆಗಸ್ಟ್ 18 ರಂದು 11:20 ರ ಸುಮಾರಿಗೆ ಪ್ರಯಾಣಿಕರೊಂದಿಗೆ ನವಿ ಮುಂಬೈನ ಉಲ್ವೆ ಕಡೆಗೆ ಪ್ರಯಾಣಿಸುತ್ತಿದ್ದಾಗ ರಾತ್ರಿ ಈ ಘಟನೆ ನಡೆದಿದೆ.
ಈ ಘಟನೆ ನಡೆದ ಮರುದಿನ ದೂರು ದಾಖಲಿಸಲಾಗಿದೆ. ದೂರುದಾರರ ಪ್ರಕಾರ, ಅವರು ಅಸಲ್ಫಾ ಮೆಟ್ರೋ ರೈಲು ನಿಲ್ದಾಣದಿಂದ ಹೋಗುತ್ತಿದ್ದ ವೇಳೆ ಒಂದು ಆಡಿ ಕಾರು ಅವರ ಕಾರನ್ನು ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ತಮ್ಮ ವಾಹನಕ್ಕೆ ಏನಾದರೂ ಹಾನಿಯಾಗಿದೆಯೇ ಎಂದು ಪರಿಶೀಲಿಸಲು ಅನ್ಸಾರಿ ಕೆಳಗಿಳಿದಾಗ, ಆಡಿ ಕಾರಿನಲ್ಲಿದ್ದ ದಂಪತಿಗಳಾದ ರಿಷಭ್ ಚಕ್ರವರ್ತಿ (35) ಮತ್ತು ಅವರ ಪತ್ನಿ ಅಂತರ ಘೋಷ್ (27) ಕೆಳಗಿಳಿದು ಕ್ಯಾಬ್ ಡ್ರೈವರ್ಗೆ ಹಲ್ಲೆ ಮಾಡಿದ್ದಾರೆ.
ಇನ್ನು ಪೊಲೀಸರು ತಿಳಿಸಿರುವ ಪ್ರಕಾರ ಅನ್ಸಾರಿ ಅವರು ಆಡಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಘಾಟ್‌ಕೋಪರ್‌ನ ಮಾಲ್‌ನ ಎದುರಿನ ಕಟ್ಟಡದ ಪ್ರವೇಶದ್ವಾರದಲ್ಲಿ ಐಷಾರಾಮಿ ಕಾರಿಗೆ ಹಿಂದೆಯಿಂದ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ದಂಪತಿಗಳು ಅನ್ಸಾರಿ ಮೇಲೆ ಹಲ್ಲೆ ಮಾಡಿದ್ದಾರೆ. ಜತೆಗೆ ಅವರನ್ನು ಎತ್ತಿ ನೆಲಕ್ಕೆ ಎಸೆದಿದ್ದಾರೆ. ಇದರ ಪರಿಣಾಮ ಅನ್ಸಾರಿ ಅವರ ತಲೆ ಗಾಯವಾಗಿದೆ.
ಇದನ್ನೂ ಓದಿ: ಹೆಂಡತಿಯ ಮೇಲೆ ನೋಟ್ ಎಸೆದಿದ್ದನ್ನು ಪ್ರಶ್ನಿಸಿದ ಗಂಡನಿಗೆ ಥಳಿಸಿ ಹತ್ಯೆ
ಅನ್ಸಾರಿಯನ್ನು ಘಾಟ್ಕೋಪರ್‌ನ ರಾಜವಾಡಿ ಆಸ್ಪತ್ರೆಗೆ ಕರೆದೊಯ್ದು ನಂತರ ಸರ್ಕಾರಿ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರ ಹೇಳಿಕೆಯನ್ನು ಕೂಡ ದಾಖಲಿಸಲಾಗಿದೆ. ಟ್ಟಡದ ಪ್ರವೇಶ ದ್ವಾರದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಕೂಡ ಆಧಾರವಾಗಿ ಇಟ್ಟುಕೊಂಡು ದೂರು ದಾಖಲಿಸಲಾಗಿದೆ. ಅನ್ಸಾರಿ ಅವರ ದೂರಿನ ಆಧಾರದ ಮೇಲೆ ಚಕ್ರವರ್ತಿ ಮತ್ತು ಘೋಷ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರಿಗೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ನೋಟಿಸ್ ಕೂಡ ನೀಡಲಾಗಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ