Crime News: ಹೆಂಡತಿಯ ಮೇಲೆ ನೋಟ್ ಎಸೆದಿದ್ದನ್ನು ಪ್ರಶ್ನಿಸಿದ ಗಂಡನಿಗೆ ಥಳಿಸಿ ಹತ್ಯೆ

ತನ್ನ ಪತ್ನಿಯ ಮೇಲೆ ಗ್ಯಾಂಗ್​ನವರು ನೋಟು ಎಸೆದು ಕಿರುಕುಳ ನೀಡುತ್ತಿರುವುದನ್ನು ಪ್ರಶ್ನೆ ಮಾಡಿದ ಗಂಡನನ್ನು ಆ ಗ್ಯಾಂಗ್‌ನವರು ಥಳಿಸಿ ಹತ್ಯೆ ಮಾಡಿದ್ದಾರೆ. ಈ ವೇಳೆ ಆ ಮಹಿಳೆಗೂ ಗಂಭೀರವಾಗಿ ಗಾಯಗಳಾಗಿವೆ.

Crime News: ಹೆಂಡತಿಯ ಮೇಲೆ ನೋಟ್ ಎಸೆದಿದ್ದನ್ನು ಪ್ರಶ್ನಿಸಿದ ಗಂಡನಿಗೆ ಥಳಿಸಿ ಹತ್ಯೆ
ಸಾಂದರ್ಭಿಕ ಚಿತ್ರ
Follow us
|

Updated on: Aug 30, 2024 | 10:17 PM

ಪುಣೆ: ನಡುರಸ್ತೆಯಲ್ಲಿ ತನ್ನ ಪತ್ನಿಯ ಮೇಲೆ ನೋಟು ಎಸೆದು, ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ವ್ಯಕ್ತಿಯೊಬ್ಬರು 5 ಮಂದಿಯನ್ನು ಎದುರಿಸಿದ್ದಾರೆ. ಈ ಕಾರಣಕ್ಕೆ ಆ 5 ಜನರ ಗ್ಯಾಂಗ್ ಆ ವ್ಯಕ್ತಿಗೆ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಪತಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಮಹಾಲುಂಗೆಯಲ್ಲಿ ಈ ದುರಂತ ಘಟನೆ ನಡೆದಿದೆ. ಇದು ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮಹಾಲುಂಗೆಯ ಸಾಯಿ ಅಮೃತ್ ಲಾಡ್ಜ್ ಬಳಿ ಆಗಸ್ಟ್ 20ರಂದು ರಾತ್ರಿ ಈ ಘಟನೆ ನಡೆದಿದೆ. ಈ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ದೀಪಕ್ ಮಧುಕರ ಜಾಧವ್ (ವಯಸ್ಸು 25), ದೀಪಕ್ ಸುಭಾಷ್ ಸೋನ್ವಾನೆ (26 ವರ್ಷ), ತೇಜಸ್ ಸೋಪಾನ್ ಗಡ್ವೆ (26 ವರ್ಷ), ಸಚಿನ್ ಬಾಲಾಜಿ ಚಂದುರೆ (33 ವರ್ಷ), ಅಕ್ಷಯ್ ಮಾರುತಿ ಪಾಟೀಲ್ (27 ವರ್ಷ)ನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Shocking News: ಯುವಕನಿಂದ ಮೇಕೆ ಮರಿಯ ಮೇಲೆ ಅತ್ಯಾಚಾರ; ರಕ್ತಸ್ರಾವದಿಂದ ಒದ್ದಾಡಿದ ಪ್ರಾಣಿ

23 ವರ್ಷದ ಮಹಿಳೆಯೊಬ್ಬರು ತನ್ನ ಗಂಡನನ್ನು ಕೊಲೆ ಮಾಡಲಾಗಿದ ಎಂದು ಮಹಾಲುಂಗೆ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತ ಪತಿಯ ಹೆಸರು ಸಂಕೇತ್ ರಾಮಚಂದ್ರ ಗಾವಡೆ.

ಪೊಲೀಸರ ಪ್ರಕಾರ, ಆ ಮಹಿಳೆ ಮತ್ತು ಆಕೆಯ ಪತಿ ತಮ್ಮ ಮಕ್ಕಳೊಂದಿಗೆ ರಾತ್ರಿ ಊಟ ಮಾಡಲು ಜೈದೀಪ್ ಹೋಟೆಲ್‌ಗೆ ಹೋಗಿದ್ದರು. ಈ ಸಮಯದಲ್ಲಿ ಹೋಟೆಲ್ ಒಳಗೆ ಆಕೆಯ ಪತಿ ಬಿಲ್ ಪಾವತಿಸುತ್ತಿರುವಾಗ ಗುಂಪೊಂದು ಹೊರಗೆ ನಿಂತಿದ್ದ ಆತನ ಹೆಂಡತಿಯ ಮೇಲೆ ನೋಟ್ ಎಸೆದು ಅಸಭ್ಯವಾಗಿ ವರ್ತಿಸಿತ್ತು. ಆಕೆಯ ಪತಿ ಇದನ್ನು ಕಂಡು ಅವರನ್ನು ಎದುರಿಸಿದಾಗ ಆರೋಪಿಗಳು ಆತನಿಗೆ ಥಳಿಸಿದ್ದಾರೆ.

ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಅಣ್ಣನನ್ನು ಕೊಂದು ಮನೆಯೊಳಗೇ ಹೂತಿಟ್ಟ ತಮ್ಮ; ಶಾಕಿಂಗ್ ವಿಡಿಯೋ ಇಲ್ಲಿದೆ

ನಂತರ ಆ ಮಹಿಳೆಯ ಪತಿಯನ್ನು ಆರೋಪಿಗಳು ಸಾಯಿ ಅಮೃತ್ ಲಾಡ್ಜ್‌ಗೆ ಕರೆದು ಅಲ್ಲಿ ಆರೋಪಿಗಳು ಆತನನ್ನು ಕೊಲ್ಲುವ ಉದ್ದೇಶದಿಂದ ದೊಣ್ಣೆಯಿಂದ ಹೊಡೆದು ಪ್ರಜ್ಞೆ ತಪ್ಪುವವರೆಗೂ ಒದ್ದಿದ್ದಾರೆ. ಪತಿಯನ್ನು ರಕ್ಷಿಸಲು ಮಹಿಳೆ ಅಲ್ಲಿಗೆ ಹೋದಾಗ ಆಕೆಗೂ ಆರೋಪಿಗಳು ಥಳಿಸಿದ್ದಾರೆ.

ಈ ಗಲಾಟೆಯ ವೇಳೆ ಆಕೆಯ ಗಂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಮಹಾಲುಂಗೆ ಎಂಐಡಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರ‍್ಯಾಪ್ ಸಾಂಗ್ ಬಗ್ಗೆ ಸಿರಿ ಮಾತು; ನಕ್ಕು ಖುಷಿಪಟ್ಟ ತನಿಷಾ
ರ‍್ಯಾಪ್ ಸಾಂಗ್ ಬಗ್ಗೆ ಸಿರಿ ಮಾತು; ನಕ್ಕು ಖುಷಿಪಟ್ಟ ತನಿಷಾ
Daily Devotional: ಅಧ್ಯಯನದಲ್ಲಿ ಆಸಕ್ತಿ ಮೂಡಲು ಹೀಗೆ ಮಾಡಿ
Daily Devotional: ಅಧ್ಯಯನದಲ್ಲಿ ಆಸಕ್ತಿ ಮೂಡಲು ಹೀಗೆ ಮಾಡಿ
Nithya Bhavishya: ಶನಿವಾರದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು:ವಿಡಿಯೋ ನೋಡಿ
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!
ಸಚಿವ ಸೋಮಣ್ಣನವರಿಗೆ ಹಾಕಿದ್ದ ಸೇಬು ಹಾರಕ್ಕಾಗಿ ಮುಗಿಬಿದ್ದ ಜನ!