ಭಾರತದ ವಿವಿಐಪಿಗಳಿಗೆ ಅತ್ಯಾಧುನಿಕ, ಸುಸಜ್ಜಿತ ಮತ್ತು ಸುರಕ್ಷಿತ ವಿಮಾನ ವಿನ್ಯಾಸಗೊಂಡಿದೆ

ವಿಶ್ವದೆಲ್ಲೆಡೆ ಹಬ್ಬಿರುವ ಭಯೋತ್ಪಾದಕರು ಅತ್ಯಂತ ಸುಧಾರಿತ ಶಸ್ತ್ರಾಸ್ತ್ರ ಅಸ್ತ್ರಗಳನ್ನು ಉಪಯೋಗಿಸಿ ತಮ್ಮ ಟಾರ್ಗೆಟ್​ಗಳ ಮೇಲೆ ಆಕ್ರಮಣ ನಡೆತ್ತಿರುವ ಹಿನ್ನೆಲೆಯಲ್ಲಿ ವಿಶ್ವದ ಅಗ್ರಗಣ್ಯ ನಾಯಕರು ಸಹ ತಮ್ಮ ರಕ್ಷಣೆಗಾಗಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ನಾಯಕರಿಗಾಗಿ ಉಪಯೋಗಿಸಲ್ಪಡುವ ವಿಮಾನಗಳು ಇತರ ವಿಮಾನಗಳಿಗಿಂತ ಭಿನ್ನವಾಗಿರೋದು ಗೊತ್ತಿರುವ ವಿಷಯವೇ. ಭಾರತದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳ (ವಿವಿಐಪಿ) ಪ್ರವಾಸಕ್ಕೆ ಈಗ ಒಂದು ಹೊಸ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ. ಏರ್ ಇಂಡಿಯಾ ಒಡೆತನದ ಅತ್ಯಂತ ಸುಧಾರಿತ ತಂತ್ರಜ್ಞಾನ, ಮಿಲಿಟರಿ ರಕ್ಷಣಾ ವ್ಯವಸ್ಥೆ […]

ಭಾರತದ ವಿವಿಐಪಿಗಳಿಗೆ ಅತ್ಯಾಧುನಿಕ, ಸುಸಜ್ಜಿತ ಮತ್ತು ಸುರಕ್ಷಿತ ವಿಮಾನ ವಿನ್ಯಾಸಗೊಂಡಿದೆ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 15, 2020 | 3:33 PM

ವಿಶ್ವದೆಲ್ಲೆಡೆ ಹಬ್ಬಿರುವ ಭಯೋತ್ಪಾದಕರು ಅತ್ಯಂತ ಸುಧಾರಿತ ಶಸ್ತ್ರಾಸ್ತ್ರ ಅಸ್ತ್ರಗಳನ್ನು ಉಪಯೋಗಿಸಿ ತಮ್ಮ ಟಾರ್ಗೆಟ್​ಗಳ ಮೇಲೆ ಆಕ್ರಮಣ ನಡೆತ್ತಿರುವ ಹಿನ್ನೆಲೆಯಲ್ಲಿ ವಿಶ್ವದ ಅಗ್ರಗಣ್ಯ ನಾಯಕರು ಸಹ ತಮ್ಮ ರಕ್ಷಣೆಗಾಗಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ನಾಯಕರಿಗಾಗಿ ಉಪಯೋಗಿಸಲ್ಪಡುವ ವಿಮಾನಗಳು ಇತರ ವಿಮಾನಗಳಿಗಿಂತ ಭಿನ್ನವಾಗಿರೋದು ಗೊತ್ತಿರುವ ವಿಷಯವೇ.

ಭಾರತದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳ (ವಿವಿಐಪಿ) ಪ್ರವಾಸಕ್ಕೆ ಈಗ ಒಂದು ಹೊಸ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ. ಏರ್ ಇಂಡಿಯಾ ಒಡೆತನದ ಅತ್ಯಂತ ಸುಧಾರಿತ ತಂತ್ರಜ್ಞಾನ, ಮಿಲಿಟರಿ ರಕ್ಷಣಾ ವ್ಯವಸ್ಥೆ ಮತ್ತು, ಶತ್ರು ದಾಳಿಯ ಸಂದರ್ಭದಲ್ಲಿ ನೆಲ ಹಾಗೂ ಹಾರಾಟ ನಡೆಸುವಾಗಲೂ ಪ್ರತಿ ದಾಳಿ ನಡೆಸುವ ಸಾಮರ್ಥ್ಯದ ಕ್ಯಾಬಿನ್ ಹೊಂದಿರುವ ಬೋಯಿಂಗ್ 777-ಇಆರ್​ಎಸ್ ವಿಮಾನವು ಭಾರತದ ವಿವಿಐಪಿಗಳಿಗೆ ಸಿಧ್ಧವಾಗಿದೆ. ವಿಮಾನದಲ್ಲಿ ಆತ್ಮರಕ್ಷಣೆಗಾಗಿ ಕೊಠಡಿಗಳಿದ್ದು ಯುದ್ಧದ ಸಮಯದಲ್ಲಿ ಎಂಥದ್ದೇ ಆಕ್ರಮಣ ನಡೆದರೂ ವಿಮಾನವು ವಿಐಪಿಗಳೊಂದಿಗೆ ತನ್ನನ್ನು ಕೂಡ ರಕ್ಷಿಸಿಕೊಳ್ಳಬಲ್ಲದು.

ಭಾರತದ ಪ್ರಧಾನ ಮಂತ್ರಿಗಳು ವಿದೇಶ ಪ್ರವಾಸಗಳಿಗೆ, ಹಲವು ಮೂಲ ಮಾರ್ಪಾಟುಗಳನ್ನು ಹೊಂದಿದ್ದ ಏರ್ ಇಂಡಿಯಾದ 747-ಬೋಯಿಂಗ್ ಜೆಟ್ ವಿಮಾನವನ್ನು ಉಮಯೋಗಿಸುತ್ತಿದ್ದರು. ಬೇರೆ ಸಮಯದಲ್ಲಿ ಸದರಿ ವಿಮಾನವು ಸಾರ್ವಜನಿಕ ಸೇವೆಗೂ ಉಪಯೋಗಿಸಲ್ಪಡುತಿತ್ತು. ಆದರೆ, ಈ ವಿಮಾನ 10 ಗಂಟೆಗಳಿಗಿಂತ ಜಾಸ್ತಿ ಹೊತ್ತು ಹಾರಾಟ ಮಾಡಲಾರದು. ಅಷ್ಟು ಹೊತ್ತಿನ ಹಾರಾಟದ ನಂತರ ಇಂಧನ ತುಂಬಿಸಿಕೊಳ್ಳಲು ಅದು ಧರೆಗಿಳಿಯಲೇಬೇಕು.

ಆದರೆ, ಹೊಸ ಬೋಯಿಂಗ್ 777-ಇಆರ್​ಎಸ್ ವಿಮಾನ 17 ಗಂಟೆಗಳ ಕಾಲ ಸತತವಾಗಿ ಹಾರಾಟ ನಡೆಸಬಲ್ಲದು. ಇದರ ಮತ್ತೊಂದು ವೈಶಿಷ್ಟ್ಯವೆಂದರೆ ಪ್ರಯಾಣ ಮಾಡುವಾಗ ತುರ್ತು ಸಂದರ್ಭವೇನಾದರೂ ಎದುರಾದರೆ, ಅದರೊಳಗಿರಬಹುದಾದ ಪ್ರಧಾನಿಗಳಾಗಲೀ, ರಾಷ್ಟ್ರಪತಿಗಳಾಗಲೀ ನೆಲದ ಮೇಲೆ ಸಂಬಂಧಪಟ್ಟ ಸಿಬ್ಬಂದಿಯೊಂದಿಗೆ ಸಂಪರ್ಕ ಪಡೆದುಕೊಂಡು ಮಾತಾಡಬಹುದು.

ಅಂದಹಾಗೆ, ವಿಮಾನ ಹಾರಿಸಲು, ಭಾರತೀಯ ವಾಯುದಳದ (ಇಂಡಿಯನ್ ಏರ್ ಫೋರ್ಸ್) ಪೈಲಟ್​ಗಳಿಗೆ ತರಬೇತಿ ನೀಡಲಾಗುತ್ತಿದೆ. ಏರ್ ಇಂಡಿಯಾದ ಪೈಲಟ್​ಗಳನ್ನು ಈ ಕೆಲಸಕ್ಕೆ ಪರಿಗಣಿಸುವುದಿಲ್ಲವಂತೆ.

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ